Home ಜಿಲ್ಲೆ ತಲ್ವಾರ್ ಪ್ರದರ್ಶನ, ಕುದುರೆ ಓಟದ ಸಾಹಸ

ತಲ್ವಾರ್ ಪ್ರದರ್ಶನ, ಕುದುರೆ ಓಟದ ಸಾಹಸ

ಬೀದರ್: ಪಂಜಾಬ್‌ನ ಅಮೃತಸರ ಮೂಲದ ಬಾಬಾ ಬಕಾಲಾ ಸಾಹೇಬ್ ಮಿಷಲ್ ಶಹೀದ್ ತರ್ನಾ ದಳದ ಸ್ವಯಂಸೇವಕರು ಶುಕ್ರವಾರ ನಗರದಲ್ಲಿ ತಲ್ವಾರ್ ಪ್ರದರ್ಶನ ಹಾಗೂ ಕುದುರೆ ಓಟದ ಸಾಹಸಮಯ ಸ್ಪರ್ಧೆಗಳನ್ನು ನಡೆಸಿ ಗಮನ ಸೆಳೆದರು.
ತರ್ನಾ ದಳದ ಮುಖ್ಯಸ್ಥ ಶ್ರೀ ಬಾಬಾ ಜೋಗಾಸಿಂಗ್ ಅವರ ನೇತೃತ್ವದಲ್ಲಿ ಯುವಕರು ವಿವಿಧ ಸಾಹಸಮಯ ಪ್ರದರ್ಶನಗಳನ್ನು ನೀಡಿದರು. ತಲ್ವಾರ್ ಚಳಕ ಹಾಗೂ ಕುದುರೆ ಓಟದ ಪ್ರದರ್ಶನಗಳು ನೋಡುಗರ ಗಮನ ಸೆಳೆದವು.
ತಂಡವು ನಗರಕ್ಕೆ ಆಗಮಿಸುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ವೀರಶೆಟ್ಟಿ ಖ್ಯಾಮಾ ಅವರ ನೇತೃತ್ವದಲ್ಲಿ ಭವ್ಯ ಸ್ವಾಗತ ನೀಡಲಾಯಿತು.
ಈ ಸಂದರ್ಭದಲ್ಲಿ ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಬಸವರಾಜ ಬೇಮಳಖೇಡ, ಸರ್ದಾರ್ ಜಸ್ಪ್ರೀತ್‌ಸಿಂಗ್, ರೋಹಿತ್ ಗುರೂಜಿ, ಚನ್ನು ಪಾಟೀಲ್, ರಾಕೇಶ್, ಶಂಕರ ಖ್ಯಾಮಾ, ವಿಶ್ವನಾಥ ಉಪ್ಪೆ, ಶ್ರೀಕಾಂತ ಮೋದಿ, ಮಹಾದೇವ ಪಾಂಚಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.