Home ಜಿಲ್ಲೆ ಕಲಬುರಗಿ “ತಾಲೂಕಾ ಮಟ್ಟದ ಉತ್ತಮ ಸೇವಾರತ್ನ ಪ್ರಶಸ್ತಿ” ಪುರಸ್ಕøತರಿಗೆ ಸನ್ಮಾನ

“ತಾಲೂಕಾ ಮಟ್ಟದ ಉತ್ತಮ ಸೇವಾರತ್ನ ಪ್ರಶಸ್ತಿ” ಪುರಸ್ಕøತರಿಗೆ ಸನ್ಮಾನ

ಕಲಬುರಗಿ,ಫೆ.28:ಜೇವರ್ಗಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, “ತಾಲೂಕಾ ಮಟ್ಟದ ಉತ್ತಮ ಸೇವಾರತ್ನ ಪ್ರಶಸ್ತಿ” ಪುರಸ್ಕøತರಿಗೆ ಹಾಗೂ ಜಿಲ್ಲಾ ಮಟ್ಟದ ಕ್ರೀಡಾ ವಿಜೇತ ತರಬೇತಿದಾರರಿಗೆ ಜೇವರ್ಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಗುರುವಾರ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕೆ.ಜಿ.ಟಿ.ಟಿ.ಐ. ನಿರ್ದೇಶಕರಾದ ರಾಜೇಶ ಬಾವಗಿ ಅವರು ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ಸತತವಾಗಿ ಶ್ರಮಪಟ್ಟಿರುವ ಹಾಗೂ ಪ್ರಶಸ್ತಿ ಪುರಸ್ಕøತ ಉಪನ್ಯಾಸಕರನ್ನು ಅಭಿನಂದನೆ ಸಲ್ಲಿಸಿ, ಜೇವರ್ಗಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ಅತ್ಯಾಧುನಿಕ ತಾಂತ್ರಿಕ ಮೂಲಭೂತ ಸೌಕರ್ಯ ಹೊಂದಿದ್ದು, ತರಬೇತಿದಾರರ ದೈಹಿಕ ಸದೃಢÀತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತ ತರಬೇತಿದಾರರಿಗೆ ಅಭಿನಂದಿಸಿದರು.

ಜೇವರ್ಗಿ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾದ “ತಾಲೂಕಾ ಮಟ್ಟದ ಉತ್ತಮ ಸೇವಾ ರತ್ನ ಪ್ರಶಸ್ತಿ” ಪ್ರಧಾನ ಸಮಾರಂಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ಇವರ ಘನ ಉಪಸ್ಥಿತಿಯಲ್ಲಿ ಹಾಗೂ ಜೇವರ್ಗಿ ತಾಲೂಕಿನ ಗಣ್ಯವ್ಯಕ್ತಿಗಳ ಉಪಸ್ಥಿತಿಯಲ್ಲಿ ಜೇವರ್ಗಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿಗಳಾದ ಸುಧಾಕರ ಎಸ್. ಚಿಕ್ಕಯ್ಯನವರಮಠ (ಟರ್ನರ್ ವೃತ್ತಿಯ) ಹಾಗೂ ಶಿವಶರಣಪ್ಪ (ಕಾರ್ಯಾಗಾರ ಲೆಕ್ಕಚಾರ ಮತ್ತು ವಿಜ್ಞಾನ) ಇವರನ್ನು “ತಾಲೂಕಾ ಮಟ್ಟದ ಉತ್ತಮ ಸೇವಾರತ್ನ ಪ್ರಶಸ್ತಿ” ನೀಡಿ ವಿಶೇಷ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಲಬುರಗಿ (ಪುರುಷ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು/ನೋಡಲ್ ಅಧಿಕಾರಿಗಳಾದ ಮುರಳೀಧರ ರತ್ನಗಿರಿ, ಶಹಾಬಾದ ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯ ಪ್ರಾಚಾರ್ಯ ಅರುಣಕುಮಾರ, ಸಂಸ್ಥೆಯ ಐ.ಎಂ.ಸಿ.ಯ ಉದ್ದಿಮೆ ಸದಸ್ಯರುಗಳಾದ ಅರುಣಕುಮಾರ ಲೋಯಾ ಹಾಗೂ ಶಿವಶಂಕರಯ್ಯ ಮಠಪತಿ ಪ್ರಶಸ್ತಿ ಪುರಸ್ಕøತ ಉಪನ್ಯಾಸಕರುಗಳಿಗೆ ಹಾಗೂ ಜಿಲ್ಲಾ ಮಟ್ಟದ ಕ್ರೀಡಾ ವಿಜೇತ ತರಬೇತಿದಾರರಿಗೆ ಅಭಿನಂದಿಸಿದರು.

ಸಂಸ್ಥೆಯ ಪ್ರಾಚಾರ್ಯರು ಹಾಗೂ ಕಲಬುರಗಿ ವಿಭಾಗೀಯ ಕಚೇರಿಯ ಉಪನಿರ್ದೇಶಕ ಡಾ.ರುಬಿನಾ ಪರ್ವಿನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಬಸನಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಶಿವಶರಣಪ್ಪ ಸ್ವಾಗತಿಸಿದರು. ಸುಧಾಕರ ಎಸ್. ಚಿಕ್ಕಯ್ಯನವರ್‍ಮಠ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಹಾಗೂ ತರಬೇತಿದಾರರು ಭಾಗವಹಿಸಿದ್ದರು.