ತಾಲ್ಲೂಕುಮಟ್ಟದ ಕ್ರೀಡಾಕೂಟ: ಉತ್ಸಾಹದಿಂದ ಪಾಲ್ಗೊಂಡ ಕ್ರೀಡಾಪಟುಗಳು

ಬೀದರ್:ಡಿ.5:ಮೇರಾ ಯುವ ಭಾರತ್ ಹಾಗೂ ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಶರಣ ಬಸವ ಪ್ರೌಢ ಶಾಲೆ ಬೀದರ್ ನಲ್ಲಿ ಈಚೆಗೆ ನಡೆದ ತಾಲ್ಲೂಕುಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡರು.
ಕಬಡ್ಡಿ ಆಟದಲ್ಲಿ ಲಿಂಗರಾಜಪ್ಪ ಇಂಜಿನಿಯರಿಂಗ ಕಾಲೇಜು ಬಾಲಕಿಯರ ತಂಡ, ವಾಲಿಬಾಲ ಆಟದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನೌಬದ ಬಾಲಕರ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆಯಾದವು. ಹುಡುಗರ ಶಟಲ್ ಬ್ಯಾಡ್ಮಿಂಟನ್‍ನಲ್ಲಿ ಮನೋಜ ಪಾಟೀಲ ಪ್ರಥಮ, ಸೋಮಿಯ ದ್ವಿತೀಯ, ಎಮ್. ಡಿ ಮೋಹಸಿನ್ ತೃತೀಯ, ಮತ್ತು ವೇಟ್ ಲಿಫ್ಟಿಂಗನಲ್ಲಿ ಲಿಂಗಪ್ಪ ಪ್ರಥಮ, ರಾಯ್ಗೊಂಡ್ ದ್ವಿತೀಯ, ಅಜಯ್ ತೃತೀಯ ಮತ್ತು ಬಾಲಕಿಯರ ವಿಭಾಗದ 100 ಮೀಟರ್ ಓಟದಲ್ಲಿ ವಿಜಯಲಕ್ಷ್ಮಿ ಪ್ರಥಮ, ಹಾಗೂ ತನುಶ್ರೀ ದ್ವಿತೀಯ, ಕಾವ್ಯ ತೃತೀಯ, ಸ್ಲೋ ಸೈಕ್ಲಿಂಗ್‍ನಲ್ಲಿ ಸಾನಿಯಾ ಪ್ರಥಮ, ಸಾಕ್ಷಿ ದ್ವಿತೀಯ, ಅನಿತಾ ತೃತೀಯ ಸ್ಥಾನ ಗಳಿಸಿದರು.
ವಿಜೇತರಿಗೆ ಟ್ರೋಫಿ ಹಾಗೂ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು. ಕಾರ್ಯಕ್ರಮವನ್ನು ಅಕ್ಕಪಡೆಯ ಸ್ಟೇಟ್ ಸ್ಟೇಟ್ ಛಿooಡಿಜiಟಿಚಿಣoಡಿ ಶೈನಿ ಗುಂಟೆ ಉದ್ಘಾಟಿಸಿದರು.
ಮಂಗಳ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಕು.ಮಂಗಲಾ ಮರಕಲೆ ಹಾಗೂ ಲಿಂಗರಾಜಪ್ಪ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ವಿನಿತಾ ಪಾಟೀಲ್, ಶರಣಬಸವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಪ್ರತಾಪುರೆ ಹಾಗೂ ಸತೀಶ್ ಬೀಳ್ಕೊಟೆ, ಸೋಮಾನಾಥ ಪೂಜಾರಿ, ದೈಹಿಕ ಶಿಕ್ಷಕರಾದ ಸಚಿನ್ ಕಲಾಲ್, ವಿಶಾಲ ದೊಡ್ಡಿ ಇತರರು ಇದ್ದರು