
ಕೋಲಾರ,ನ.೨೯- ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪಿ.ಸಿ.ಹಳ್ಳಿ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿಯಲ್ಲಿ ಕೋಲಾರ ನಗರದ ಸುವರ್ಣ ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳು ವಿವಿಧ ವಿಭಾಗಗಳ ಸ್ವರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.
ಕನ್ನಡ ಭಾಷಣ -ಮಿಥುನ್ ಎಸ್.ವಿ ಪ್ರಥಮ, ಮನ್ವಿತ ಎಸ್ ತೃತೀಯ, ಇಂಗ್ಲೀಷ್ ಭಾಷಣ -ಪೂಜಾ ಸಿ ದ್ವಿತೀಯ, ಋತ್ವಿಕ ತೃತೀಯ, ಭಗ್ವದ್ಗೀತೆ- ವೆನ್ನೆಲ್ಲಾ ದ್ವಿತೀಯ, ಅರೇಬಿಕ್- ಅದೀನ್ ಅಹಮದ್ ದ್ವಿತೀಯ, ದೇಶಭಕ್ತಿಗೀತೆ- ಮನ್ವಿತ ಎಸ್ ಪ್ರಥಮ, ಚಿತ್ರಕಲೆ- ಆಲ್ಫಿಯಾ, ಈಶ್ವರ್ ಸಾಯಿಕೃಷ್ಣ ಪ್ರಥಮ, ಶ್ರೀಲೇಖರಾಮ್ ಎಸ್.ಜೆ ದ್ವಿತೀಯ, ಅಭಿನಯಗೀತೆ -ಮಾನಸಸಿಂಗ್ ಎಸ್ ದ್ವಿತೀಯ, ಆಶುಭಾಷಣ -ರವಿತೇಜ ಎಸ್ ಪ್ರಥಮ, ಕವನವಾಚನ- ವಂಶಿರಾಮ್ ಎನ್.ಜೆ ದ್ವಿತೀಯ, ಪ್ರಬಂಧ ರಚನೆ- ದೀಕ್ಷಾ ಎಸ್ ಪ್ರಥಮ ಸ್ಥಾನ ಗಳಿಸಿರುತ್ತಾರೆ.
ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಮುಂದೆ ನಡೆಯಲಿರುವ ತಾಲೂಕು ಹಂತದ ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಜೇತರಾದ ಎಲ್ಲಾ ಮಕ್ಕಳಿಗೂ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾರು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಶುಭ ಕೋರಿ ಅಭಿನಂದಿಸಿದರು.


































