
ಬಸವನ ಬಾಗೇವಾಡಿ:ಮೇ.1: ಪ್ರತಿಭಾವಂತ ವಿದ್ಯಾರ್ಥಿ ಈಶ್ವರ್ ಬಸವರಾಜ ಕೋಟಿ ಈತನು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ಪ್ರದೀಪ್ ಈಶ್ವರ್ ನೀಟ ಕಾಲೇಜಿನಲ್ಲಿ ಓದಿದ್ದು ಈ ವರ್ಷ ನಡೆದ ದ್ವಿತೀಯ ವರ್ಷದ ಪಿಯುಸಿ ವಿಜ್ಞಾನ ವಿಭಾಗ ಪರೀಕ್ಷೆಯಲ್ಲಿ 92.33 ಅಂಕಗಳನ್ನು ಪಡೆದ ಪ್ರಯುಕ್ತ ಶ್ರೀ ಬಸವೇಶ್ವರ ಸೇವಾ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮನ ಉದ್ದೇಶಿಸಿ ಬಸವೇಶ್ವರ ಸೇವಾ ಸಮಿತಿಯ ನಿರ್ದೇಶಕರಾದ ಶ್ರೀ ಎಂಜಿ ಆದಿಗೊಂಡ ಮಾತನಾಡಿ ವಿದ್ಯಾರ್ಥಿಗಳು ಸಾಧನೆ ಮಾಡಬೇಕಾದರೆ ಸತತ ಪರಿಶ್ರಮ ಅಗತ್ಯವಾಗಿದೆ ಅದೇ ರೀತಿಯಾಗಿ ಕುಮಾರ ಈಶ್ವರ್ ಬಸವರಾಜ ಕೋಟಿ ಸತತ ಪರಿಶ್ರಮದಿಂದ ವಿಜ್ಞಾನ ವಿಭಾಗದಲ್ಲಿ ಸಾಧನೆ ಇದರಿಂದ ಕೀರ್ತಿ ತಂದಿದ್ದಾನೆ ಗೌರವ ತಂದಿದ್ದಾನೆ ಎಂದು ಮಾತನಾಡಿದರು ಅದೇ ರೀತಿಯಾಗಿ ಬಸವೇಶ್ವರ ಸೇವಾ ಸಮಿತಿಯ ನಿರ್ದೇಶಕರಾದ ಶ್ರೀ ರವಿ ರಾಠೋಡ್ ಮಾತನಾಡಿ ನನ್ನ ಗೆಳೆಯನ ಮಗ ಈಶ್ವರ್ ಪಿಯುಸಿ ವಿಜ್ಞಾನ ಭಾಗದಲ್ಲಿ ಹೆಚ್ಚು ಅಂಕಗಳಿಸಿ ಕೀರ್ತಿ ತಂದಿದ್ದಾನೆ ಅವರ ತಂದೆ ತಾಯಿಯ ಪಾತ್ರ ಇದೆ ಡಾ ಬಸವರಾಜ್ ಕೋಟಿಯವರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಕೊಡಿಸಿದ್ದಾರೆ ತಂದೆ ತಾಯಿಯಾದವರು ಮಕ್ಕಳ ಬಗ್ಗೆ ಗಮನಹರಿಸಿದಾಗ ಮಾತ್ರ ಸಾಧನೆ ಮಾಡುತ್ತಾರೆ ಭವಿಷ್ಯದಲ್ಲಿ ಅವರ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು ಈ ಸಂದರ್ಭದಲ್ಲಿ ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಈರಣ್ಣ ಪಟ್ಟಣಶೆಟ್ಟಿ ಸನ್ಮಾನ ಮಾಡಿದರು ಸನ್ಮಾನದಲ್ಲಿ ಶ್ರೀ ಬಸವೇಶ್ವರ ಶಿವ ಸಮಿತಿಯ ನಿರ್ದೇಶಕರಾದ ಶ್ರೀ ಬಸವರಾಜ್ ಹಾರಿವಾಳ ಶ್ರೀ ಭರತ್ ಅಗರ್ವಾಲ್ ಶ್ರೀ ಬಸವರಾಜು ಗೊಳಸಂಗಿ ಶ್ರೀ ಚಂದ್ರಶೇಖರ್ ಗೌಡ ಪಾಟೀಲ ಶ್ರೀ ರಮೇಶ್ ಎಳಮೆಲಿ ಶ್ರೀ ಶಂಕನಗೌಡ ಪಾಟೀಲ ಸುರೇಶ ಗೌಡ ಪಾಟೀಲ ವಿನೋದ್ ಕಲ್ಲೂರ ಶ್ರೀ ರವಿ ಚಿಕ್ಕಕೊಂಡ ಮಹಿಳಾ ನಿರ್ದೇಶಕರಾದ ಶ್ರೀಮತಿ ಮಹಾದೇವಿ ಬಿರಾದಾರ ಶ್ರೀಮತಿ ಜಗ ದೇವಿ ಗುಂಡಳ್ಳಿ ಶ್ರೀ ಬಸನಗೌಡ ಪಾಟೀಲ ಡಾ ಬಸವರಾಜ ಕೋಟಿ ಸಂಜೆವಾಣಿ ಪತ್ರಿಕೆ ತಾಲೂಕ ವರದಿಗಾರರಾದ ಶ್ರೀ ಎಂಬಿ ತೋಟದ ಇದ್ದರು
























