
ಕನಕಪುರ,ಫೆ.೮- ತಾಲೂಕಿನ ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ್ದ ಸ್ಥಳದಲ್ಲೆ ಚಿತ್ರ ಬಿಡಿಸುವ ಸ್ವರ್ಧೆಯಲ್ಲಿ ೧೮೦೦೦ ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಕನಕೋತ್ಸವದ ಅಂಗವಾಗಿ ೭ನೇ ಭಾರಿಗೆ ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ವರ್ಧೆಗೆ ಚಾಲನೆ ನೀಡಿ ಮಾತನಾಡಿದರು. ನಾಲ್ಕನೆ ತರಗತಿಯವರಗೆ ಏನನ್ನಾದರೂ ಚಿತ್ರ ಬಿಡಿಸಬಹುದಾಗಿದ್ದು ೪ನೇ ತರಗತಿಯಿಂದ ೧೦ನೇ ತರಗತಿಯವರೆಗೆ ವಿದ್ಯಾರ್ಥಿಗಳು,ಸರ್ಕಾರದ ೫ ಗ್ಯಾರಂಟಿಯೋಜನೆಯ ಬಗ್ಗೆ ಚಿತ್ರ ಬಿಡಿಸುವ ಸ್ವರ್ಧೆಯ ಜೊತೆ ಕಳೆದ ಒಂದುವರೆ ತಿಂಗಳಿಂದ ಹತ್ತುಹಲವು ಕಾರ್ಯಕ್ರಮವನ್ನು ತಾಲೂಕಿನ ಜನತೆಗೆ ನೀಡಲಾಗಿತ್ತು ಎಂದು ಹೇಳಿದರು.
ಕನಕೋತ್ಸವದ ಅಂಗವಾಗಿ ಈ ಭಾರಿ ಪ್ರಥಮವಾಗಿ ಗ್ರಾಮೀಣ ಮಹಿಳೆಯರಿಗಾಗಿ ರಂಗೋಲಿಸ್ವರ್ಧೆ ಯನ್ನು ಏರ್ಪಡಿಸಲಾಗಿತ್ತು ಇದರಲ್ಲಿ ೫೮೨೬೦ಜನಮಹಿಳೆಯರು ಪಾಲ್ಗೊಂಡಿದ್ದರು. ಪಕ್ಷಾತೀತವಾಗಿ ಪ್ರತಿಯೊಬ್ಬರಿಗೆ ಅವಕಾಶವನ್ನು ಇಲ್ಲಿ ಕಲ್ಪಿಸಿಕೊಡಲಾಗಿತ್ತು,ಹಾಗೆಯೇ ನಗರ ಪ್ರದೇಶದಲ್ಲಿ ೧೩೫೦೦ಸಾವಿರ ಮಹಿಳೆಯರು ರಂಗೋಲಿಯನ್ನು ಬಿಡಿಸುವಮೂಲಕ ೭೬೦೦೦ಜನ ಕನಕೋತ್ಸವಕ್ಕೆ ನಾವೂ ಕೂಡ ಬೆಂಬಲವನ್ನು ವ್ಯಕ್ತಪಡಿಸಿ ನಾವೂ ಕೂಡ ಭಾಗಿಯಾಗುತ್ತೇವೆ ಎಂಬ ಸಂದೇಶವನ್ನು ಸಾರಿ ಪ್ರತಿದಿನ ಹಳ್ಳಿಹಳ್ಳಿಗಳಲ್ಲಿ ಮಾವಿನ ತೋರಣ ಬಾಳೆ ಕಂಬ ಕಟ್ಟಿ ಹಬ್ಬದ ಸಂಭ್ರವನ್ನುಂಟು ಮಾಡಿದ್ದರೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಪ್ರತಿ ಹಳ್ಳಿಗಳಿಂದ ಬಹುಮಾನಿತರನ್ನು ಕರೆದು ನಗರದಲಲಿ ೮೫೦ಜನರಿಗೆ ರಂಗೋಲಿ ಸ್ವರ್ಧೆಯನ್ನು ಏರ್ಪಡಿಸಲಾಗಿತ್ತು. ಈಸಂದರ್ಭದಲ್ಲಿ ಪ್ರತಿನಿತ್ಯ ಅವರು ಅನುಭವಿಸುವ ಸಮಸ್ಯೆಗಳು, ಭವಿಷ್ಯದಲ್ಲಿ ತಮ್ಮ ಮಕ್ಕಳಿಗೆ ತಮಗೆ ಏನು ಬೇಕು ಎಂಬ ಸಂದೇಶವನ್ನು ರಂಗೋಲಿಮೂಲಕ ಅಭಿವ್ಯಕ್ತಪಡಿಸುವ ಮೂಲಕ ನಮ್ಮ ಗಮನವನ್ನು ಸೇಳೆದರೆಂದರು.
ಕೆಲವರು ಟೀಕೆ ಮಾಡುತ್ತಾರೆ ಅವರಿಗಾಗಿ ನಾವು ಕಾರ್ಯಕ್ರಮವನ್ನು ಆಯೋಜಿಸಿಲ್ಲ ನಮ್ಮೂರಿನ ಪ್ರತಿಭೆಗಳಿಗೆ ಬೃಹತ್ ವೇದಿಕೆಯನ್ನು ನೀಡ ಉದ್ದೇಶದಿಂದ ಮಾಡಿದ ಕಾರ್ಯಕ್ರಮವಾಗಿದೆಎಂದರು.
ಮೊದಲು ಕನಕಪುರಕ್ಕೆ ಅಷ್ಟೇ ಸೀಮಿತವಾಗಿದ್ದ ಕಾರ್ಯಕ್ರಮವು ಡಿ.ಕೆ. ಶಿವಕುಮಾರ್ ರವರಿಗೆ ಬೆಂಬಲವನ್ನು ವ್ಯಕ್ತಪಡಿಸಿ ಇಡೀ ಜಿಲ್ಲೆಯಾದ್ಯಂತ ಆಚರಿಸುತ್ತ ಬಂದಿದ್ದಾರೆ ರಾಮನಗರದಲ್ಲಿ ರಾಮೋತ್ಸವ,ಚನ್ನಪಟ್ಟಣದಲ್ಲಿ ಗಂಗೋತ್ಸವ, ಮಾಗಡಿಯಲ್ಲಿ ಕೆಂಪೇಗೌಡ ಉತ್ಸವ, ಕುಣಿಗಲ್ ಉತ್ಸವ ಹೀಗೆ ನಾಲ್ಕೂ ತಾಲೂಕುಗಳು ಈ ಭಾರಿ ವೈಭವಿದಂದ ಯುವ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸಿಕೊಟ್ಟಿವೆ ಎಂದರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
೧೧ಸಾವಿರ ಪುಟಾಣಿ ಮಕ್ಕಳು ಮಧ್ಯಾಹ್ನ ೪ ಗಂಟೆಯಿಂದ ರಾತ್ರಿ ೧೧ಗಂಟೆಯವರೆಗೆ ವೇಷಭೂಷಣ ಸ್ವರ್ಧೆಯಲ್ಲಿ ಪಾಲ್ಗೊಂಡಿದ್ದರು.
























