ಅಂಗವಿಕಲ ಕಲಾವಿದರಿಂದ ಪ್ರತಿಭಾ ಪ್ರದರ್ಶನ

ಬೀದರ್: ಡಿ.28:ಕಾಡವಾದದ ಜೀವನ ಪ್ರಕಾಶ ಕಲ್ಚರಲ್ ಆಯಿಂಡ್ ವೆಲ್‍ಫೇರ್ ಸೋಸೈಟಿ ವತಿಯಿಂದ ಕ್ರಿಸ್‍ಮಸ್ ಹಾಗೂ ಅಂಗವಿಕಲರ ದಿನಾಚರಣೆ ಪ್ರಯುಕ್ತ ನಗರದ ಸೆಕ್ರೆಡ್ ಹಾರ್ಟ್ ಕ್ಯಾಥೋಲಿಕ್ ಚರ್ಚನಲ್ಲಿ ಈಚೆಗೆ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಅಂಗವಿಕಲ ಕಲಾವಿದರು ಪ್ರತಿಭೆ ಪ್ರದರ್ಶಿಸಿದರು.
ಸಂಸ್ಥೆಯ ಅಧ್ಯಕ್ಷ ದಿಲೀಪ್ ಕಾಡವಾದ, ಕಲಾವಿದರಾದ ತಾಜೊದ್ದೀನ್, ಸಂಜುಕುಮಾರ, ಪೀಟರ್, ಜೋಸೆಫ್ ಹಾಗೂ ಇತರರು ಗಾನ ಸುಧೆ ಹರಿಸಿ, ನೆರೆದವರ ಮನ ರಂಜಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಫಾದರ್ ಕ್ಲೇರಿ ಅವರು, ಕ್ರೈಸ್ತ ಧರ್ಮವು ದಯೆ, ಕರುಣೆ, ಶಾಂತಿ ಹಾಗೂ ಸಹಬಾಳ್ವೆಯನ್ನು ಸಾರುತ್ತದೆ. ಸಂಘ ಸಂಸ್ಥೆಗಳು ಸಾಮಾಜಿಕ ಚಟುವಟಿಕೆಯೊಂದಿಗೆ ಕ್ರಿಸ್‍ಮಸ್ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಎಸ್. ಪುನೀತ್‍ಸಿಂಗ್ ಅಡ್ವೆಂಚರ್ ಕ್ಲಬ್ ವತಿಯಿಂದ ಅಂಗವಿಕಲರಿಗೆ ಉಚಿತ ಬ್ಲ್ಯಾಂಕೇಟ್ ವಿತರಿಸಲಾಯಿತು.
ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಸುಭಾಷ್ ರತ್ನಾಕರ್, ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ಅನ್ನಬಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ತಾಜೊದ್ದಿನ್ ಮರ್ಜಾಪುರ, ಸುರಕ್ಷಾ ಸೆಕ್ಯುರಿಟಿ ಏಜೆನ್ಸಿಯ ಸ್ವಾಮಿದಾಸ ನಾಗೂರೆ, ಸಾರೆಗಮಪ ಪ್ರತಿಷ್ಠಾನದ ಅಧ್ಯಕ್ಷ ಮಹೇಶಕುಮಾರ ಕುಂಬಾರ, ಸಭಾಪಾಲಕ ರೆವರೆಂಡ್ ಸ್ವಾಮಿದಾಸ ಕಾಡವಾದ, ಡೇವಿಡ್, ಸಾಗರ್, ಸಿದ್ದು, ಪೀಟರ್, ಅರುಣ ಪೌಲ್, ಸುನೀಲ್ ಚಾಂಬೋಳ್, ಎಂ.ಆರ್. ಡಬ್ಲ್ಯೂ ಬಾಬುರಾವ್ ರಾಠೋಡ್, ಇಮ್ಯಾನುವೆಲ್ ಗಾದಗಿ, ಸುನೀಲ್ ಚಾಂಬೋಳ್ ಮತ್ತಿತರರು ಇದ್ದರು.
ಸತೀಶ್ ಬಿರಾದಾರ ನಿರೂಪಿಸಿದರು. ಜೀವನ ಪ್ರಕಾಶ ಕಲ್ಚರಲ್ ಆಯಿಂಡ್ ವೆಲ್‍ಫೇರ್ ಸೋಸೈಟಿಯ ಉಪಾಧ್ಯಕ್ಷ ಜೆಸ್ಸಿ ಸೋನವಾನೆ ಸ್ವಾಗತಿಸಿದರು.