ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕಲಬುರಗಿ,ಜ.3-ಬೀದರ ನಗರದ ಚವಳಿ ರಸ್ತೆಯ ವಿಶ್ವಕರ್ಮ ಭವನದಲ್ಲಿ ವಿರಾಟ್ ವಿಶ್ವ ಗ್ಲೋಬಲ್ ಫೌಂಡೇಶನ್ ಹಾಗೂ ಬೀದರ ಜಿಲ್ಲೆಯ ವಿಶ್ವ ಕರ್ಮ ಸಮಾಜದ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕಲಬುರಗಿ ವಲಯಮಟ್ಟದ 2024-25 ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ನಿವೃತ್ತ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಪ್ರಭಾಕರ್, ಹೈಕೋರ್ಟ್ ಹಿರಿಯ ನ್ಯಾಯವಾದಿ ಎ.ರಾಜೇಶ್, ಕರ್ನಾಟಕ ವಿಶ್ವಕರ್ಮ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಲೋಚನಾ ಪಾಂಚಾಳ, ತೇಂಗಳಿಕರ ಶಿಕ್ಷಣ ಸಂಸ್ಥೆ ಸಂಸ್ಥಾಪಕಿ ಚಿತ್ರಲೇಖ ಟೇಂಗಳಿಕರ, ಹಿರಿಯ ಸಾಹಿತಿ ನರಸಿಂಗರರಾವ ಹೇಮನೂರ, ಶ್ರೀನಿವಾಸ ವಿಶ್ವ ಕರ್ಮ, ಅಯ್ಯಪ್ಪ ಪಾಂಚಾಳ, ಎಂ.ಕೆ. ಪತ್ತಾರ, ಶಾರದಾ ಡಿ. ಬಡಿಗೇರ ಅವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಸಮಾಜದ ಗಣ್ಯರು ಉಪಸ್ಥಿತರಿದ್ದರು.