
ಬಾದಾಮಿ,ಜೂ೩೦: ಹಾಲುಮತ ಸಮಾಜದ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಉನ್ನತ ಹುದ್ದೆಗೆರಲು ಪ್ರಯತ್ನಿಸಿ ತಂದೆ ತಾಯಿ ಋಣ ತೀರಿಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಡಾ.ಜಿ.ಎಸ್.ಸಂಗ್ರೇಶಿ ಹೇಳಿದರು.
ಅವರು ನಗರದ ಶ್ರೀ ಕುಮಾರೇಶ್ವರರ ಸಭಾಭವನದಲ್ಲಿ ಹಾಲುಮತ ನೌಕರರ ಸಂಘ, ಕರ್ನಾಟಕ ಪ್ರದೇಶ ಕುರುಬರ ಸಂಘ, ಶ್ರೀ ಬೀರಲಿಂಗೇಶ್ವರ ಸೇವಾ ಸಮಿತಿ, ನಿವೃತ್ತ ನೌಕರರ ಸಂಘ ಹಾಗೂ ಸಮಾಜದ ಎಲ್ಲ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಾದಾಮಿ ಹಾಗೂ ಗುಳೇದಗುಡ್ಡ ತಾಲೂಕಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿರೂರ ಶ್ರೀ ಕನಕ ಬ್ರಹ್ಮ ವಿದ್ಯಾಶ್ರಮದ ಪೂಜ್ಯಶ್ರೀ ಚಿನ್ಮಯಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಉಪಸ್ಥಿತರಿದ್ದರು. ಶಾಸಕ ಭೀಮಸೇನ ಬಿ. ಚಿಮ್ಮನಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಧಾರವಾಢ ಜಿನಿಯಸ್ ಅಕಾಡಮಿಯ ಸಿದ್ದಣ್ಣ ದಳವಾಯಿ ಉಪನ್ಯಾಸ ನೀಡುತ್ತಾ ಮಾತನಾಡಿ ಯಾವುದರಲ್ಲಿ ಆಸಕ್ತಿ ಇದೆ ಅದನ್ನೇ ಮಾಡಬೇಕು. ಶ್ರೇಷ್ಟ ಎನಿಸಿಕೊಳ್ಳಬೇಕು. ಜಗತ್ತಿಗೆ ಅವಶ್ಯಕತೆ ಇರುವುದನ್ನು ಮಾಡಬೇಕು. ವಯಕ್ತಿಕ ಲಾಭ ಇರುವುದನ್ನು ಮಾಡಬೇಕು. ಇಂದಿನಿAದಲೇ ಬದಲಾವಣೆ ಮಾಡಬೇಕು ಎಂದು ಗುರಿಯೊಂದಿಗೆ ಮುನ್ನಗ್ಗಬೇಕು ಎಂದು ಯುವಕರಿಗೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಾದಾಮಿ ಹಾಗೂ ಗುಳೇದಗುಡ್ಡ ತಾಲೂಕಿನ ಹಾಲುಮತ ಸಮಾಜದವರು, ಅಧಿಕಾರಿಗಳು, ನೌಕರರು, ವಿದ್ಯಾರ್ಥಿಗಳು ಹಾಜರಿದ್ದರು. ಶಿಕ್ಷಕ ಭಾಸ್ಕರ ಬೂದಿನಗಡ ಸ್ವಾಗತಿಸಿದರು. ಶಿಕ್ಷಕ ಉಜ್ವಲ ಬಸರಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಸದಾಶಿವ ಮರಡಿ, ಕೆ.ಎಂ.ಮಾಗುAಡಪ್ಪನ್ನವರ ಕಾರ್ಯಕ್ರಮವನ್ನು ನಿರೂಪಿಸಿದರು. ವೈ.ವೈ.ಹಾವರಗಿ ವಂದಿಸಿದರು.































