
ಅಫಜಲಪುರ ; ಜ.18:ಸಂಕ್ರಮಣ, ಅಮವಾಸ್ಯೆ, ಹುಣ್ಣಿಮೆ,
ಹಬ್ಬದ ಸಂದರ್ಭದಲ್ಲಿ ನದಿಯಲ್ಲಿ ಪರ್ವಕಾಲದ ಪುಣ್ಯ ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸು ಪರಿ ಶುದ್ಧಗೊಳ್ಳುತ್ತದೆ ಎಂದು ದತ್ತ ದೇವಸ್ಥಾನದ ಸಾಲಕಾರಿ ಕಾರ್ಯದರ್ಶಿ ಹಾಗೂ ದೇ. ಗಾಣಗಾಪೂರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಿಯಾಂಕ್ ನಾಗೇಶ ಭಟ್ ಪೂಜಾರಿ ತಿಳಿಸಿದರು.
ತಾಲೂಕಿನ ಸುಕ್ಷೇತ್ರ ದೇ. ಗಾಣಗಾಪೂರದ ಭೀಮಾ ನದಿ
ದಡದಲ್ಲಿರುವ ರುದ್ರ ಪಾದ ತೀರ್ಥದ ಬಳಿ ಅರ್ಚಕರು ಹಾಗೂ ಭಕ್ತರೊಂದಿಗೆ ಪರ್ವ ಕಾಲದ ಪುಣ್ಯ ಸ್ನಾನ ಮಾಡಿ ಮಾತನಾಡಿದ ಅವರು ಪರ್ವಕಾಲದ ಪುಣ್ಯಸ್ನಾನ ನಮ್ಮ ಪಾಪಗಳನ್ನು ತೊಳೆದು, ಸುಖ-ಸಮೃದ್ಧಿ, ಶಾಂತಿಯನ್ನು ತರುತ್ತದೆ ಎಂದು ನಂಬುವ
ಹಿಂದೂ ಸಂಪ್ರದಾಯದ ಒಂದು ಭಾಗ ವಾಗಿದೆ ಎಂದು ಹೇಳಿದರು.
ಈ ಸ್ನಾನಗಳು ಆಧ್ಯಾತ್ಮಿಕ ಶಕ್ತಿ ಮತ್ತು ಶುದ್ಧತೆ ಹೆಚ್ಚಿಸುತ್ತವೆ. ಪರ್ವಕಾಲದ ಪುಣ್ಯ ಸ್ನಾನಕ್ಕೆ ಭೀಮಾನದಿ
ಬಹಳ ಪವಿತ್ರವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿ
ಸಲಾಗಿದೆ. ದೇ. ಗಾಣಗಾಪೂರಕ್ಕೆ ಈ ದಿನ
ಸಾಗರೋಪಾದಿಯಲ್ಲಿ ಭಕ್ತರು ಬಂದು ಪುಣ್ಯಸ್ನಾನ ಮಾಡುತ್ತಾರೆ. ಪುಣ್ಯ ಸ್ನಾನದ ಬಳಿಕ ದತ್ತ ದೇವಸ್ಥಾನ, ಕಲ್ಲೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ
ಪೂಜಾದಿಗಳನ್ನು ಕೈಗೊಂಡು ದಾನಧರ್ಮ
ಮಾಡುವುದು ವಾಡಿಕೆ ಇದೆ ಎಂದು ಪ್ರಿಯಾಂಕ್ ಭಟ್ ಪೂಜಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಅರ್ಚಕರಾದ ಪ್ರಖ್ಯಾತ್ ಪೂಜಾರಿ, ನರಹರಿ ಪೂಜಾರಿ, ಪ್ರದುಮ್ನ ಪೂಜಾರಿ, ಅವಧೂತ ಪೂಜಾರಿ, ಸರ್ವೇಶ್ ಪೂಜಾರಿ, ಗುಂಡು ಪೂಜಾರಿ,
ಕುಶಾಲ್ ಪೂಜಾರಿ ಇದ್ದರು.



























