
ಬೀದರ್ :ಮೇ.೨೮:ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಬರುವ ಚಿಟ್ಟಗುಪ್ಪ ತಾಲ್ಲೂಕಿನ ೯ ಗ್ರಾಮಪಂಚಾಯಿತಿಯ ಯಾವ ಗ್ರಾಮದ ರೈತರಿಗೂ
ಬಿತ್ತನೆ ಬೀಜ ಹಾಗೂ ಗೊಬ್ಬರ ಕೊರತೆ ಆಗದಂತೆ ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಬೇಮಳಖೇಡಾ ಗ್ರಾಮದಲ್ಲಿ ರೈತ ಸಂಪರ್ಕ ಕೇಂದ್ರದ ವತಿಯಿಂದ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಬಿತ್ತನೆ ಕಾರ್ಯ ಚುರುಕುಗೊಳ್ಳುವ ಮುನ್ನ . ಕೃಷಿ ಇಲಾಖೆಯಲ್ಲಿ ರಿಯಾಯಿತಿ ದರದಲ್ಲಿ ಸೋಯಾಬಿನ್, ತೋಗರಿ, ಹೆಸರು ಗೊಬ್ಬರ ಬಿತ್ತನೆ ಬೀಜಗಳು ದೊರೆಯುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ಆದ್ಯತೆ ಮೇರೆಗೆ ಬಿತ್ತನೆ ಬೀಜ ಖರೀದಿಸುವುದು ಉತ್ತಮ. ಬಿತ್ತನೆ ಬೀಜ ಖರೀದಿಸಿ ರಸೀದಿಯನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ರಸೀದಿಯಲ್ಲಿ ಲಾಟ್ ಸಂಖ್ಯೆ ಹಾಗೂ ಮಾರಾಟ ದರದ ವಿವರ ನಮೂದಿಸಿರುವುದನ್ನು ಖಾತರಿಪಡಿಸಿಕೊಳ್ಳಬೇಕು ಕಳಪೆ ಗುಣಮಟ್ಟದ ಬೀಜ ವಿತರಣೆಯಾದರೆ ಅಧಿಕಾರಿಗಳಿಗೆ ಪ್ರಶ್ನಿಸಬಹುದು ಖಾಸಗಿ ವ್ಯಕ್ತಿಗಳು ಕಡಿಮೆದರದಲ್ಲಿ ಬೀಜ ವಿತರಣೆ ಮಾಡಲಾಗುವುದು ಎಂದು ಬಂದರೆ ಅಂತವರ ಮಾತಿಗೆ ಮರುಳಾಗಬೇಡಿ ಸರ್ಕಾರದಿಂದ ನೀಡುತ್ತಿರುವ ಬಿತ್ತನೆ ಬೀಜ ಖರೀದಿಸಿ.
ವಿತರಣೆ ಕೇಂದ್ರದಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಬಿತ್ತನೆ ಬೀಜಗಳನ್ನು ಮಾರಾಟ ಮಾಡಬಾರದು ಇಂತಹದ್ದು ಕಂಡುಬAದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಕೇಂದ್ರದೊAದಿಗೆ ಉಪಕೇಂದ್ರಗಳಲ್ಲೂ ಬಿತ್ತನೆ ಬೀಜ ವಿತರಣೆ ಮಾಡಲಾಗುವುದು ರೈತರು ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ರೈತರು ಶಾಂತಿಯುತವಾಗಿ ಬಿತ್ತನೆ ಬೀಜ ಪಡೆಯಬೇಕು ಬೇಡಿಕೆಗೆ ಅನುಗುಣವಾಗಿ ಬೀಜ ವಿತರಣೆ ಮಾಡಲಾಗುವುದು ರೈತರು ಉತ್ತಮವಾಗಿ ಬೆಳೆ ಬೆಳೆದರೆ ಮಾತ್ರ ಸಮಾಜದಲ್ಲಿ ಜನರು ಉತ್ತಮ ಜೀವನ ನಡೆಸಲು ಸಾಧ್ಯ ಅದಕ್ಕೆ ನಮ್ಮ ಭಾರತ ದೇಶದಲ್ಲಿ ರೈತ ದೇವೋಭವ ಸರ್ವೇ ಜನ ಸುಖಿನೋ ಭವಂತು ಎನ್ನುತ್ತಾರೆ.
ತುತ್ತು ಅನ್ನ ತಿನ್ನುವ ಮೊದಲು ರೈತನ ನೆನೆಯಬೇಕು. ನಾವಿವತ್ತು ತುತ್ತು ಅನ್ನ ತಿನ್ನೋ ಮೊದಲು ನಿಸ್ವಾರ್ಥ ಜೀವ ರೈತನನ್ನೇ ನೆನೆಯಲೇಬೇಕು. ಅನ್ನದಾತನ ಕೈ ಕೆಸರಾದ್ರೆ ಮಾತ್ರ ನಮ್ಮ ಬಾಯಿ ಮೊಸರಾಗೋಕೆ ಸಾಧ್ಯ ಎಂದರು.
ಕೃಷಿಯಲ್ಲಿ ಮಾತ್ರವಲ್ಲ ಯಾವುದೇ ಕ್ಷೇತ್ರದಲ್ಲೂ ಏರಿಳಿತ ಇದ್ದೇ ಇರುತ್ತೆ. ಕಷ್ಟ-ಸುಖ, ಸಮಸ್ಯೆ, ಸವಾಲುಗಳು ಇರುತ್ತವೆ. ನಾವು ಆ ಸವಾಲುಗಳನ್ನ ಎಷ್ಟು ಬುದ್ಧಿವಂತಿಕೆಯಿAದ ಆ ಸವಾಲುಗಳನ್ನ ಸ್ವೀಕಾರ ಮಾಡುತ್ತೇವೆ. ಎಷ್ಟು ಬುದ್ಧಿವಂತಿಕೆಯಿAದ ಆ ಸವಾಲುಗಳನ್ನ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಅದರ ಮೇಲೆ ಸಕ್ಸಸ್ ಇರುತ್ತೆ.
ರೈತರು ಸಹ ಸವಾಲುಗಳನ್ನ ಪಾಸಿಟಿವ್ ಆಗಿ ಬಗೆಹರಿಸೋ ಪ್ರಯತ್ನ ಮಾಡಿದ್ರೆ ಮಾತ್ರ ಯಶಸ್ಸು ಸಿಗುತ್ತದೆ.
ಒಬ್ಬ ಕೃಷಿಕ ಸಕ್ಸಸ್ ಆದ್ರೆ ಕೇವಲ ಅವರ ಕುಟುಂಬ ಮಾತ್ರ ಸಕ್ಸಸ್ ಆಗಲ್ಲ. ಅದರ ಹಿಂದೆ ಕನಿಷ್ಠ ೧೦ ರಿಂದ ೫೦ ಜನರ ಬದುಕು ಹಸನವಾಗುತ್ತದೆ ಕೆಲವರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇಂತಹ ನಿರ್ಧಾರ ನೋವಿನ ಸಂಗತಿ ಯಾರು ದುಡುಕಬಾರದು ಎಂದು ಮನವಿ ಮಾಡಿದರು. ರೈತ ಸಂವೃದ್ಧಿಯಿAದ ಇದ್ರೆ ಎಲ್ಲರೂ ಸಂವೃದ್ಧಿಯಾಗಿರುತ್ತೆ ಎಂದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಎಡಿ ಶರಣಕುಮಾರ, ಗ್ರಾಪಂ ಅಧ್ಯಕ್ಷ ಮಂಜುನಾಥ ಸುಣಗಾರ, ಪಿಕೆಪಿಎಸ್ ಅಧ್ಯಕ್ಷರಾದ ಬಸವರಾಜ ಚಟ್ಟನಳ್ಳಿ, ಪಿಕೆಪಿಎಸ್ ಉಪಾಧ್ಯಕ್ಷರಾದ ಶಿವಕುಮಾರ, ಉಡಬನಳ್ಳಿ ಪಿಕೆಪಿಎಸ್ ಅಧ್ಯಕ್ಷ ಅಶೋಕ ರೆಡ್ಡಿ, ಪಿಡಿಒ ಸುಶಾಂತ, ಕೃಷಿ ಅಧಿಕಾರಿ ಭುವನೇಶ್ವರಿ, ಮುಖಂಡರಾದ ವೀರಶೆಟ್ಟಿ ಬಸಲಾಪುರ, ಲಾಲಪ್ಪ ಪೋಲಕಪಳ್ಳಿ, ಶಣ್ಮುಕಪ್ಪ ಕಾರಕಂಪಳ್ಳಿ, ರೈತರು, ಗ್ರಾಪಂ ಸದಸ್ಯರು, ಪಿಕೆಪಿಎಸ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.