ಸೇಡಂ,ನ,24: ಕರ್ನಾಟಕದಲ್ಲಿಯೇ ಮೊಟ್ಟ ಮೊದಲ ಬಾರಿಗೆ 12ನೇ ಶತಮಾನದ ಹಿರಿಯ ವಚನಕಾರರು ಹಾಗೂ ಅಣ್ಣ ಬಸವಣ್ಣನವರ ಆಪ್ತರಾಗಿರುವ ಶ್ರೀ ಶಿವಶರಣ ಮಾದರ ಚನ್ನಯ್ಯನವರ ಪುತ್ಥಳಿ ಸೇಡಂ ನಗರದಲ್ಲಿ ಡಿಸೆಂಬರ್ 28ರಂದು ಅನಾವರಣ ಹಾಗೂ 975ನೇ ಜಯಂತ್ಯೋತ್ಸವ ಸಮಾರಂಭಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು ಜೊತೆಗೆ ಶ್ರೀ ಶಿವಶರಣ ಮಾದರ ಚನ್ನಯ್ಯನವರ ಪುತ್ಥಳಿ ಅನಾವರಣ ಹಾಗೂ ಜಯಂತ್ಯೋತ್ಸವ ಸಮಿತಿಗಳು ರಚಿಸಲಾಗಿದೆ ಆ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಆಯ್ಕೆ ಮಾಡಲಾಗಿದ್ದು ಅವರಿಗೆ ನೀಡಿರುವಂತಹ ಜವಾಬ್ದಾರಿಯನ್ನು ಶಿಸ್ತುಬದ್ಧವಾಗಿ ಒಗ್ಗಟ್ಟಿನಿಂದ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಪುತ್ಥಳಿಯ ಅನಾವರಣ ಜಯಂತೋತ್ಸವವನ್ನು ಒಮ್ಮತದಿಂದ ಸಹಕರಿಸಿ ಎಂದು ಶ್ರೀ ಶಿವಶರಣ ಮಾದರ ಚನ್ನಯ್ಯನವರ ಪುತ್ಥಳಿಯ ಅನಾವರಣ ಹಾಗೂ 975 ನೇ ಜಯಂತೋತ್ಸವ ಕಾರ್ಯಕ್ರಮದ ಪ್ರಧಾನ ಸಂಯೋಜಕರಾದ ಬಸವರಾಜ ಮಳಗಿ ಹೇಳಿದರು.
ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿರುವ ಶ್ರೀ ಶಿವಶರಣ ಮಾದರ ಚನ್ನಯ್ಯನವರ ಪುತ್ಥಳಿಯ ಅನಾವರಣ ಹಾಗೂ 975 ನೇ ಜಯಂತ್ಯೋತ್ಸವ ಕಾರ್ಯಕ್ರಮದ ವಿವಿಧ ಸಮಿತಿಗಳ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಶಿವಶರಣ ಮಾದರ ಚನ್ನಯ್ಯನವರ ಭಾವಚಿತ್ರಕ್ಕೆ ಪೂಜೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಅವರವರ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಶಿಸ್ತಿನಿಂದ ತಮ್ಮ ಕಾರ್ಯವನ್ನು ನಿಭಾಯಿಸಿ ಯಶಸ್ವಿಗೊಳಿಸಿ ಎಂದು ಕರೆ ನೀಡಿದರು. ಮಾದಿಗ ಸಮಾಜದ ತಾಲೂಕಾ ಅಧ್ಯಕ್ಷ ಮಾರುತಿ ಕೊಡಂಗಲ್ಕರ್ ಗೌರವ ಅಧ್ಯಕ್ಷ ಶಂಭುಲಿಂಗ ನಾಟಿಕರ್, ಶ್ರೀ ಶಿವಶರಣ ಮಾದರ ಚನ್ನಯ್ಯನವರ ಪುತ್ಥಳಿಯ ಅನಾವರಣ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷರಾದ ಜಗನ್ನಾಥ್ ಚಿಂತಪಳ್ಳಿ, ಅಶೋಕ್ ಪಿರಂಗಿ,ರಾಜು ಕಾಳಗಿಕರ್, ಶ್ರೀಶೈಲ್ ಎಂ.ಜಿ ವಿಜಯರಾಜ ಕೊರಡಂಪಳ್ಳಿ, ಮಾತನಾಡಿದರು.
ಈ ವೇಳೆಯಲ್ಲಿ ನಾಗರಾಜ ನಂದೂರ ಸುಂದರ ಮಂಗಾ ಮಳಖೇಡ, ವೆಂಕಟಪ್ಪ ಮೋತಕಪಲ್ಲಿ, ಹುಸನಪ್ಪ ಪಿರಂಗಿ ,ಅನಂತಯ್ಯ, ಭೀಮರಾಯ ಮುಡುಕಿ, ಬಂದಪ್ಪ ಬುರಗಪಲ್ಲಿ, ನರಸಪ್ಪ ರಂಜೋಳ , ಈಶ್ವರ ವಾಲಿಕಾರ ವಿಠಲ್ ಇಂಜಳ್ಳಿಕರ್, ರಾಮುಂಗ ಶಂಭು ಕುಕ್ಕುಂದಾ, ರಾಮು ಕಣೇಕಲ್, ನರಸಪ್ಪ ರಂಜೋಳ ,ದೇವು ನಾಟಿಕರ್, ಭೀಮು ಮುಧೋಳ್, ಅಶೋಕ್ ಬೀರನಳ್ಳಿ, ರವೀಂದ್ರ ಕಾಂಬಳೆ, ಕಾಶಿ ಬಸವನಗರ,ಲೋಕೇಶ್ ಹಂದರಕಿ, ಕೀರ್ತಿಕುಮಾರ್ ಮಾಳಗಿ, ಜಗನ್ನಾಥ್ ಬಿಜನಳ್ಳಿ, ಮುನಿಯಪ್ಪ ದೊಡ್ಮನಿ, ಅನೀಲ್ ರೆನೆಟ್ಲಾ, ಹನಮಂತ ಭರತನೂರ, ಸುರೇಶ್ ಬಿಜನಳ್ಳಿ, ಭಗವಂತ ಇಮಾಡಪೂರ, ವೆಂಕಟಪ್ಪ ಸುಗ್ಗಲ್,ಅಶೋಕ್ ರೆನೆಟ್ಲಾ, ಜಗನ್ನಾಥ್ ಇಂದ್ರಕರ್, ಭೀಮಶಂಕರ್ ಕೊರವಿ, ರವಿ ಎಲಪಳ್ಳಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪುತ್ಥಳಿಯ ಅನಾವರಣ ಜಯಂತ್ಯೋತ್ಸವ ಸಮಿತಿಯ ಯುವ ಘಟಕದ ಅಧ್ಯಕ್ಷ ಮಾರುತಿ ಮುಗಟಿ ನಿರೂಪಣೆ ಮಾಡಿದರು























