
ಬೀದರ : ವಾತಾವರಣ ಬದಲಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಡೆಂಗ್ಯೂ, ಚಿಕೂನ್ಗುನ್ಯಾ, ಮಲೇರಿಯಾ ಹಾಗೂ ಅಗತ್ಯ ಫೈಲೇರಿಯಾ ಮುಂತಾದ ವೆಕ್ಟರ್ ಜನ್ಯ (ಸೊಳ್ಳೆಗಳಿಂದ ಹರಡುವ) ರೋಗಗಳ ಹರಡುವಿಕೆ ತಡೆಯಲು ಸಾರ್ವಜನಿಕರು ಅಗತ್ಯ ಮುನ್ನೇಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲರಾವ್ ಕರೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೋರಡಿಸಿದ ಅವರು, ಡೆಂಗ್ಯೂ, ಚಿಕೂನ್ಗುನ್ಯಾ, ಮಲೇರಿಯಾ ಹಾಗೂ ಅಗತ್ಯ ಫೈಲೇರಿಯಾ ರೋಗಗಳು ಸೊಳ್ಳೆಗಳು ಕಚ್ಚುವುದರಿಮದ ಹರಡುತ್ತವೆ. ಇವು ಶುದ್ಧವಾದ ಹಾಗೂ ಚರಂಡಿಯಲ್ಲಿ ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮನೆಯ ಹಾಗೂ ಸುತ್ತಮೂತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಆಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ರೋಗ ಲಕ್ಷಣಗಳು: ದಿಢೀರ್ ತೀವ್ರ ಜ್ವರ ಮತ್ತು ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಕೀಲು ಮತ್ತು ಸ್ನಾಯುಗಳಲ್ಲಿ ತೀವ್ರ ನೋವು ಮತ್ತು ಮೈಮೇಲೆ ಕೆಂಪು ದದ್ದುಗಳು (ಖಚಿsh) ಮತ್ತು ಆಯಾಸ
ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು: ವಾರಕ್ಕೊಮ್ಮೆ ‘ಡೈ ಡೇ’ (ಆಡಿಥಿ ಆಚಿಥಿ): ಪ್ರತಿ ವಾರ ಒಂದು ದಿನ ಮನೆ ಹಾಗೂ ಕಚೇರಿಗಳಲ್ಲಿ ನೀರು ಶೇಖರಿಸುವ ಪಾತ್ರೆ, ಟ್ಯಾಂಕ್, ಏರ್ ಕೂಲರ್, ಸಿಮೆಂಟ್ ತೊಟ್ಟಿಗಳನ್ನು ಖಾಲಿ ಮಾಡಿ, ಚೆನ್ನಾಗಿ ಉಜ್ಜಿ ಒಣಗಿಸಿ ನಂತರ ಹೊಸ ನೀರು ತುಂಬಿಸಬೇಕು.
ತ್ಯಾಜ್ಯ ನಿರ್ವಹಣೆ: ಮನೆಯ ಸುತ್ತಮುತ್ತ ಹಳೆಯ ಟೈಯರ್, ಎಳೆನೀರಿನ ಬೊಂಬೆ, ಪ್ಲಾಸ್ಟಿಕ್ ಕಪ್ ಹಾಗೂ ಒಡೆದ ಬಾಟಲಿಗಳಲ್ಲಿ ನೀರು ನಿಲ್ಲದಂತೆ ತಕ್ಷಣ ವಿಲೇವಾರಿ ಮಾಡಬೇಕು.
ಸೊಳ್ಳೆ ಕಡಿತದಿಂದ ರಕ್ಷಣೆ: ಸಂಪೂರ್ಣ ಮೈ ಮುಚ್ಚುವಂತಹ ಉಡುಪು ಧರಿಸಬೇಕು. ರಾತ್ರಿ ಹಾಗೂ ಹಗಲು ವೇಳೆಯಲ್ಲಿ ಸೊಳ್ಳೆಪರದೆ ಅಥವಾ ಸೊಳ್ಳೆ ನಿವಾರಕ ಕ್ರೀಮ್ಗಳನ್ನು ಬಳಸಬೇಕು.
ನೀರು ಮುಚ್ಚಿಡಿ: ಕುಡಿಯುವ ಮತ್ತು ಬಳಕೆಯ ನೀರನ್ನು ಯಾವಾಗಲೂ ಬಿಗಿಯಾದ ಮುಚ್ಚಳದಿಂದ ಮುಚ್ಚಿಡಬೇಕು.
ವಿಶೇಷ ಸೂಚನೆ: ಯಾರಾದರೂ ಜ್ವರದಿಂದ ಬಳಲುತ್ತಿದ್ದರೆ ಸ್ವಂತ ವೈದ್ಯಕೀಯ ಚಿಕಿತ್ಸೆ (Seಟಜಿ-meಜiಛಿಚಿಣioಟಿ) ಮಾಡಿಕೊಳ್ಳದೆ. ತಕ್ಷಣವೇ ಹತ್ತಿರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ಪರೀಕ್ಷೆ ಮತ್ತು ಚಿಕಿತ್ಸೆ ಸಂಪೂರ್ಣ ಉಚಿತವಾಗಿ ದೊರೆಯುತ್ತದೆ.ಸಾರ್ವಜನಿಕರು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದೊಂದಿಗೆ ಸಹಕರಿಸಿ, ನಿಮ್ಮ ಗ್ರಾಮ ಹಾಗೂ ನಗರವನ್ನು ಸೊಳ್ಳೆಮುಕ್ತಗೊಳಿಸಲು ಕೈಜೋಡಿಸಬೇಕಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





















