ಭಯದ ವಾತಾವರಣ ಮೂಡಿಸುತ್ತಿರುವ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ

ಸೈದಾಪುರ:ನ.೧೩:ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಸೂರಜ್ ಲ್ಯಾಬೋರೇಟರಿ ಕಂಪನಿಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಸಂಭವಿಸಿದ ಸ್ಫೋಟ ದಿಂದ ಇಲ್ಲಿನ ಜನರಿಗೆ ಭಯಮೂಡಿಸಿದೆ. ನಿರ್ಲಕ್ಷ್ಯ ವಹಿಸಿದ ಕೆಮಿಕಲ್ ಕಂಪನಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕರವೇ ಕಾರ್ಯಕರ್ತರು ಪೋಲಿಸ್ ರಿಗೆ ದೂರು ನೀಡಿದ್ದಾರೆ.
ಸಮೀಪದ ಕಡೆಚೂರು ಬಾಡಿಯಾಳ ಕೈಗಾರಿಕಾ ವಲಯದಲ್ಲಿರುವ ಸೂರಜ್ ಲ್ಯಾಬರೋಟರಿಸ್ ಪ್ರೈವೇಟ್ ಕೆಮಿಕಲ್ ಕಂಪನಿಯಲ್ಲಿ ರಿಯಾಕ್ಟರ್ (ಎಸ್. ಎಸ್. ಆರ್) ಹೊಡೆದು ಬ್ಲಾಸ್ಟ್ ಆಗಿ ಸುಮಾರು ಎರಡು ಅಂತಸ್ತಿನ ಕಟ್ಟಡದ ಗೊಡೆಗಳು ಧ್ವಂಸಗೊAಡಿದೆ ದೃಶ್ಯಾವಳಿಗಳನ್ನು ನೋಡಿದರೆ ಭಾರಿ ಅನಾಹುತ ಆಗಿದೆ ಎಂಬುವುದನ್ನು ಸಾರುತ್ತಿದೆ ಗೊಡೆಗಳು ಛಿದ್ರವಾಗಿವೆ. ಬೇಕಾ ಬಿಟ್ಟಿಯಾಗಿ ಗೊಡೆಗಳು ಶೀತಿಲಗೊಂಡಿವೆ. ಮತ್ತು ಇಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅವಘಾತಗಳಾಗಿ ಮುಖಗಳಿಗೆ ಕೈಕಾಲುಗಳಿಗೆ ಗಾಯಗಳಾಗಿವೆ ಹಾಗೂ ಇನ್ನುಳಿದ ಕಾರ್ಮಿಕರಿಗೆ ಸಮಸ್ಯೆಯಾಗಿದೆ ಎಂದು ತಿಳಿದು ಬಂದಿರುತ್ತದೆ, ಮತ್ತು ಪತ್ರಕೆಗಳಲ್ಲಿ ಸುದ್ದಿಯಾಗಿರುತ್ತದೆ ವಾಸ್ತವ ಸ್ಥಿತಿ ಹಿಗಿದ್ದರು ಸಹ ಮಾಲಿನ್ಯ ನಿಯಂತ್ರಣ ಮಂಡಳಿ, ಕಾಖಾರ್ನೆಗಳು ಕೈಗಾರಿಕಾ ಸುರಕ್ಷೆ, ಪೋಲಿಸ್ ಇಲಾಖೆ ಸೇರಿದಂತೆ ಸಂಬAಧಪಟ್ಟ ಅಧಿಕಾರಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ನೋಡಿದರೆ ಪ್ರಕರಣ ಮುಚ್ಚಿಹಾಕಲು ಹುನ್ನಾರ ನಡೆದಿದೆ ಎಂಬುವುದು ನೇರವಾಗಿ ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಗಾಯಾಳುಗಳಿಗೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಪಡೆದುಕೊಂಡರು ಸಹ ಪೋಲಿಸ ಇಲಾಖೆಗೆ ದೂರು ನೀಡಿ ಗಾಯಾಳುಗಳಿಗೆ ಯಾವುದೇ ರೀತಿ ಎಮ್‌ಎಲ್‌ಸಿ ಮಾಡಿರುವುದಿಲ್ಲ ಈ ಬಗ್ಗೆ ಕಂಪನಿಯವರು ಯಾವುದೇ ಸಮಸ್ಯೆ ಆಗಿಲ್ಲ ಎಂದು ಹೇಳಿಕೆ ನಿಡಿದ್ದಾರೆ ಈ ಹೇಳಿಕೆ ಅನುಮಾನಾಸ್ಪದವಾಗಿದೆ, ಆದರೆ ಸಿ.ಸಿ ಕ್ಯಾಮಾರ ಫೂಟೇಜ್ ನೀಡದೆ ಮುಚ್ಚಿ ಹಾಕುತ್ತಿದ್ದಾರೆ. ಸಾವು ನೋವು ಆಗಿರುವ ಬಗ್ಗೆ ಶಂಕೆ ಇರುವುದರಿಂದ ತನಿಖೆ ಮಾಡುವುದ ಅಗತ್ಯವಾಗಿದೆ ತಕ್ಷಣ ಸಂಬAಧಪಟ್ಟವರು ಸೋಮೋಟೋ ಪ್ರಕರಣ ದಾಖಲಿಸಿ ತನಿಖೆ ನಡಿಸಬೇಕು, ಘಟನೆಯ ನೈಜ ಸತ್ಯ ಹೊರಬರಬೇಕು ಘಟನೆ ನಡೆದು ನಾಲ್ಕು ದಿನಗಳಾದರು ಪ್ರಕರಣ ದಾಖಲಿಸದೆ ಇರುವುದು ನಾಚಿಕೆಗೇಡು ಸಂಗತಿಯಾಗಿದೆ, ಸೂರಜ್ ಲ್ಯಾಬರೋಟರಿಸ್ ಪ್ರೈವೇಟ್ ಕೆಮಿಕಲ್ ಕಂಪನಿಯ ಮಾಲೀಕರಿಗೆ ಹಾಗೂ ಸಂಬAಧಪಟ್ಟವರ ಮೇಲೆ ಕಾನೂನ ಕ್ರಮ ಜರುಗಿಸಿ ಆ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳ ಸಂಪೂರ್ಣ ವಿವರಗಳನ್ನು ಪೋಲಿಸ್ ಇಲಾಖೆ ತೆಗೆದುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಪ್ರಾಮಾಣಿಕವಾಗಿ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ವೇಳೆ ವಿಳಂಬವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸೈದಾಪುರ ಹೋಬಳಿ ಘಟಕದ ವತಿಯಿಂದ ಸಂಬAಧಪಟ್ಟ ಕಛೇರಿಯನ್ನು ಮುತ್ತಿಗೆ ಹಾಕಿ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ವೆಂಕಟರಾಮುಲು ಕೂಡಲೂರ್. ತಾಲೂಕ ಸಂಘಟನೆ ಕಾರ್ಯದರ್ಶಿ ಬಸ್ಸು ನಾಯಕ್ ಸೈದಾಪುರ್, ಮಹೇಶ್ ಜೇಗರ್ ಲ, ಮಲ್ಲು ಬಾಡಿಯಾಳ, ಅಂಜು ಬಾಗ್ಲಿ, ನರೇಶ್ ಬೈರಮಕೊಂಡ,ಮೌನೇಶ್ ಮಾಧ್ವಾರ, ದೇವಸಿಂಗ್ ಠಾಕೂರ್, ಸಾಗರ್ ಪಿ ಹುಲ್ಲೆರ್ ಸುರೇಶ ಬೆಳಗುಂದಿ,ರಮೇಶ್ ಮಾಧ್ವಾರ, ಅವಿನಾಶ ಕಲಾಲ್, ಸಂತೋಷ್ ಕೂಡಲೂರ್, ನಾಗೇಂದ್ರ ನಾಯಕ್ ಸೇರಿದಂತೆ ಇತರರಿದ್ದರು