
ಬೀದರ್:ಮೇ.18: ವಾಲದೊಡ್ಡಿ ಗ್ರಾಮದಲ್ಲಿರುವ ಸ್ಮಶಾನ ಭೂಮಿ ಹಾಗೂ ಸರ್ಕರಿ ಭೂಮಿಯನ್ನು ಅತಿಕ್ರಮಣ ಮಾಡಿ ಇಡೀ ಗ್ರಾಮದ ಜನರಿಗೆ ದೌರ್ಜನ್ಯ ಎಸಗುತ್ತಿರುವ ಕರ್ನಾಟಕ ಭೀಮ ಸೇನೆ ರಾಜ್ಯ ಕಾರ್ಯಾಧ್ಯಕ್ಷ ವಿಷ್ಣುವರ್ಧನ ವಾಲದೊಡ್ಡಿ, ಅವರ ಸಹೋದರ ಹರ್ಷವರ್ಧನ ವಾಲದೊಡ್ಡಿ ಹಾಗೂ ಅವರ ತಂದೆ ಗುರಪ್ಪ ವಾಲದೊಡ್ಡಿ ಅವರ ವಿರೂದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಗಾದಗಿ ಮಾಜಿ ಗ್ರಾಮ ಸದಸ್ಯರಾದ ಕಾಶಿನಾಥ ಆಗ್ರಹಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ರವಿವಾರ ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಕಳೆದ ಐದು ವರ್ಷಗಳ ಹಿಂದೆ ತಾನು ಹರ್ಷವರ್ಧನ ವಾಲದೊಡ್ಡಿ ಅವರ ವಿರೂದ್ಧ ಸ್ಪರ್ಧಿಸಿ ಗಾದಗಿ ಗ್ರಾಮ ಪಂಚಾಯತ ಸದಸ್ಯನಾಗಿ ಆಯ್ಕೆಯಾದೆ. ಆಗಿನಿಂದ ನನ್ನ ಹಾಗೂ ನನ್ನ ಕುಟುಂಬದ ವಿರೂದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದರು. ಕೊನೆಗೆ ತನ್ನ ತಂಗಿ ಕಾಂಚನಾಗೆ ಸುಳ್ಳು ಹೇಳಿ ಮೋಸದಿಂದ ವರಿಸಿ 2017ರಲ್ಲಿ ವಿಷ್ಣುವರ್ಧನ ಮದುವೆಯಾದರು. ವಿಪರಿತ ಕಿರುಕುಳ ಕೊಟ್ಟ ಪರಿಣಾಮ 2022ರಲ್ಲಿ ನನ್ನ ತಂಗಿ ಸದ್ಯ ನಮ್ಮ ಮನೆಯಲ್ಲಿದ್ದಾಳೆ. ಹೀಗೆ ಇವರು ಸಂಬಂಧಿಕರೊಂದಿಗೆ ಜಗಳ, ಗ್ರಾಮದಲ್ಲಿ ಎಲ್ಲರೊಂದಿಗೆ ಕಿರಿಕಿರಿ ಮಾಡುವುದು ಇವರ ನಿತ್ಯದ ಚಾಳಿಯಾಗಿದೆ ಎಂದರು.
ಸಂಘಟನೆ ಹೆಸರು ಹೇಳಿಕೊಂಡು ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆ ಎಸಗುತ್ತಿರುವ ವಿಷ್ಣುವರ್ಧನ ಅವರ ವಿರೂದ್ಧ ಚೌಬಾರಾ ಪೆÇೀಲಿಸ್ ಠಾಣೆಯಲ್ಲಿ ಕಳೆದ 10 ತಿಂಗಳ ಹಿಂದೆ ದೂರು ದಾಖಲಿಸಿದಾಗ ಆಗಿನ ಪಿಎಸ್‍ಐ ತಸ್ಲಿಮಾ, ಸಿಪಿಐ ಹಿರೇಮಠ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಚಾರವಾಗಿ ನಮ್ಮ ತಂಗಿ ಮೇಲಾದ ಅನ್ಯಾಯದ ವಿರೂದ್ಧ ದೂರು ನೀಡಲು ಮಹಿಳಾ ಪೆÇೀಲಿಸ್ ಠಾಣೆಗೆ ದೂರು ದಾಖಲಿಸಲಾಗಿತ್ತು. ಅಲ್ಲಿಯೂ ನ್ಯಾಯ ಸಿಕ್ಕಿಲ್ಲ. ಪುನಃ ಜಿಲ್ಲಾ ಪೆÇೀಲಿಸ್ ವರಿಷ್ಟಾಧಿಕಾರಿಗಳಿಗಳಲ್ಲಿಗೆ ಹೋಗಿ ದೂರು ನೀಡಿದಾಗಲೂ ಕುಂಟು ನೆಪ ಹೇಳಿ ಚೌಬಾರಾ ಪೆÇೀಲಿಸರು ಸಹಕರಿಸಲಿಲ್ಲ ಎಂದು ತಮ್ಮ ಅಸಮಧಾನ ಹೊರ ಹಾಕಿದರು.
ನೊಂದ ಯುವತಿ ಕಾಂಚನಾ ಈ ಸಂದರ್ಭದಲ್ಲಿ ಮಾತನಾಡಿ, ನನ್ನನ್ನು ಮೋಸದಿಂದ ವಂಚಿಸಿ 2017ರಲ್ಲಿ ವಿಷ್ಣುವರ್ಧನ ಮದುವೆಯಾದರು. ನಿತ್ಯ ಹೊಡೆಯುವುದು, ಬಡಿಯುವುದು, ಹಿಂಸೆ ನೀಡುವುದು ಒಂದಲ್ಲ, ಎರಡಲ್ಲ ನಿತ್ಯ ಒದೆ ತನ್ನುವುದು ನನ್ನ ಕಾಯಕವಾಗಿ ಬಿಟ್ಟಿತ್ತು. ನಾನು ಕಾರ್ಮಿಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗಲೆ ಪುಸಲಾಯಿಸಿ ರಜಿಷ್ಟರ್ ಮದುವೆಯಾದರು. ಮೊದಲು ಮದುವೆಯಾಗಿತ್ತು. ಅದು ಡೈವರ್ಸ್ ಆಗಿದೆ ಎಂದು ಸುಳ್ಳು ಹೇಳಿ ಮೊಸದಿಂದ ವಿವಾಹವಾಗಿದ್ದರು. ನಾನು ಹಣ ಕೊಟ್ಟಾಗ ಸುಮ್ಮನಿರುವುದು ಇಲ್ಲವಾದಾಗ ಹಿಂಸೆ ನೀಡುವುದು ಅವರ ದೈನಂದಿನ ಚಾಳಿಯಾಗಿತ್ತು. ಅವರಿಗೆ ಬಟ್ಟೆ, ಬರೆ, ಕಾರು ಎಲ್ಲವನ್ನು ನನ್ನ ಸಂಬಳದಲ್ಲಿ ಕೊಡಿಸಿದ್ದರೂ ನನ್ನ ಪಾಲಿಗೆ ಬಂದಿದ್ದು ಬರೀ ಹಿಂಸೆ ಮಾತ್ರ. ಇದನ್ನು ತಾಳಲಾರದೆ 2022ರಲ್ಲಿ ತವರು ಮನೆಗೆ ಬಂದೆ. ಹೀಗೆ ಮೋಸ ಮಾಡಿ ನನ್ನ ಜೀವನ ಹಾಳು ಮಾಡಿ ನರ್ಕಮಯ ಮಾಡಿದ ವಿಷ್ಣುವರ್ಧನ ವಿರೂದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಕಾಂಚನಾ ಒತ್ತಾಯಿಸಿದರು.
ಗ್ರಾಮದ ಮತ್ತೋರ್ವ ಯುವಕ ಪ್ರವಿಣಕುಮಾರ ಮಾತನಾಡಿ, 1995ರಲ್ಲಿ ನಮ್ಮ ತಾಯಿ ವಿಜಯಲಕ್ಷಿ??ೀ ಅವರು ಗ್ರಾಮದಲ್ಲಿ ನಿವೇಶನ ಖರಿದಿಸಿ ಮನೆ ಕಟ್ಟಿದ್ದರು. ಅದು 2025ರಲ್ಲಿ ಇದ್ದಕ್ಕಿದ್ದಂತೆ ಬಿದ್ದು ಬಿಟ್ಟಿತ್ತು. ಪುನಃ ಅದನ್ನು ಕಟ್ಟಲು ಮುಂದಾದಾಗ ವಿಷ್ಣುವರ್ಧನ ಹಾಗೂ ಅವರ ಕುಟುಂಬಸ್ತರು ಬಂದು ತಡೆದು ನಮಗೆ ಕೊಲೆ ಬೆದರಿಕೆ ಹಾಕಿದರು. ಈ ವಿಚಾರವಾಗಿಯೂ ಚೌಬಾರಾ ಪೆÇೀಲಿಸ್ ಠಾಣೆಗೆ ದೂರು ದಾಖಲಿಸಿದರೂ ನಮಗೆ ಇಲ್ಲಿಯ ವರೆಗೆ ನ್ಯಾಯ ಸಿಕ್ಕಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ನಾಮದೇವ ಸಹ ವಿಷ್ಣುವರ್ಧನ ಕುಟುಂಬದ ವಿರೂದ್ಧ ತಮ್ಮ ಅಸಮಾಧಾನ ಹೊರ ಹಾಕಿದರು.



























