ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ

ರಬಕವಿ-ಬನಹಟ್ಟಿ,ಜ.25 : ಭಾರತದಲ್ಲಿ ಪ್ರತಿ ವರ್ಷ ಜ.24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಇಂಥ ದಿನಾಚರಣೆಗಳ ರೂಪದಲ್ಲಿ ಹೆಣ್ಣುಮಕ್ಕಳ ರಕ್ಷಣೆ ಮತ್ತು ಯೋಜನೆಗಳನ್ನು ನಾವೆಲ್ಲರೂ ಅರಿತು ಸದುಪಯೋಗ ಪಡೆದುಕೊಳ್ಳಬೇಕು ಎಂದು ದಂತ ವೈದ್ಯೆ ಡಾ. ದೀಪಾಲಿ ಬಸವರಾಜ ಡಂಗಿ ಹೇಳಿದರು.


ಶನಿವಾರ ಸಂಜೆ ರಬಕವಿ ವಿಶ್ವ ಹಲ್ಲಿನ ದವಾಖಾನೆ ಆವರಣದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಆಚರಿಸಿ ಮಾತನಾಡಿದರು. ಇದನ್ನು 2008 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಭಾರತ ಸರ್ಕಾರವು ಭಾರತೀಯ ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಅಸಮಾನತೆಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು ಪ್ರಾರಂಭಿಸಿತು. ಆರಂಭದ ದಿನಗಳಲ್ಲಿ “ಹೆಣ್ಣು ಮಗುವನ್ನು ಉಳಿಸಿ” ಎಂಬ ಪರಿಕಲ್ಪನೆಯಡಿ ಪ್ರಚಾರ ಮಾಡಿತ್ತು. ಮಕ್ಕಳ ಲಿಂಗ ಅನುಪಾತಗಳು ಮತ್ತು ಹೆಣ್ಣುಮಕ್ಕಳಿಗೆ ಆರೋಗ್ಯಕರ ಮತ್ತು ಸುರಕ್ಷಿತ ವಾತಾವರಣವನ್ನು ನಿರ್ಮಿಸುವ ಕುರಿತು ಜಾಗೃತಿ ಅಭಿಯಾನಗಳನ್ನು ಒಳಗೊಂಡಂತೆ ಸಂಘಟಿತ ಕಾರ್ಯಕ್ರಮಗಳೊಂದಿಗೆ ದಿನವನ್ನು ಆಚರಿಸಲು ಪ್ರಾರಂಭಿಸುತ್ತಿದೆ ಎಂದರು,


ಡಾ.ಪೂರ್ಣಿಮಾ ಜಮಖಂಡಿ, ಪ್ರಾಚಾರ್ಯೆ ಭಾರತಿ ತಾಳಿಕೋಟಿ, ಡಾ.ತೇಜಸ್ವಿನಿ ಮೇತ್ರಿ, ಅಮೃತಾ ಪಿಸೆ, ಡಾ.ಮಾಸೂಕ್, ದೀಪಾ, ಪವಿತ್ರಾ ವಜ್ರಮಟ್ಟಿ, ನಂದಾ ಕೊಕಟನೂರ ಸೇರಿದಂತೆ ಅನೇಕರಿದ್ದರು.