ಆರೋಗ್ಯ ಶಿಬಿರದ ಪ್ರಯೋಜನ ಪಡೆಯಿರಿ: ಡಾ.ಸಂಜೀವ್ ಪಾಟೀಲ

ಸೇಡಂ,ನ.12-ಪಟ್ಟಣದ ಹತ್ತಿರ ಇರುವ ನೀಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ತಾಲೂಕಾ ಅರೋಗ್ಯ ಕೇಂದ್ರ ಹಾಗೂ ತಾಲೂಕು ಸಾರ್ವಜನಿಕರ ಆಸ್ಪತ್ರೆ ಮತ್ತು ಕಲಿಕಾ ಟಾಟಾ ಟ್ರಸ್ಟ್ ಸಹಯೋಗದಲ್ಲಿ ನಡೆದ ಉಚಿತ ಅರೋಗ್ಯ ತಪಾಸಣೆ ಶಿಬಿರ ನಡೆಯಿತು.
ಮೊದಲಿಗೆ ಸಸಿಗೆ ನೀರೆರೆಯು ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಸೇಡಂ ತಾಲೂಕಾ ಅರೋಗ್ಯ ಅಧಿಕಾರಿ ಡಾ.ಸಂಜೀವ್ ಪಾಟೀಲ್ ಅವರ ಚಾಲನೆ ನೀಡಿ ಮಾತನಾಡುತ್ತ ಗ್ರಾಮದ ಜನರು ಆರೋಗ್ಯದ ಕಡೆ ಗಮನ ಕೊಡಬೇಕು. ಸುತ್ತ ಮುತ್ತಲಿನ ಪರಿಸರ ಮಾಲಿನ್ಯ ಆಗದಂತೆ ನೋಡಿಕೊಳ್ಳಬೇಕು. ಆರೋಗ್ಯದ ಶುಚಿತ್ವದ ಕಡೆ ಲಕ್ಷವಹಿಸಬೇಕು ಅಂದಾಗ ಮಾತ್ರ ಅರೋಗ್ಯವಂತ ಜೀವನ ನಡೆಸಲು ಸಾಧ್ಯವಾಗುತ್ತದೆ. ತಾಲೂಕು ಮತ್ತು ಜಿಲ್ಲೆಯಿಂದ ಆರೋಗ್ಯ ತಪಾಸಣೆ ಮಾಡಲು ಜಿಲ್ಲಾ ಮಟ್ಟದ ಅಧಿಕಾರಗಳು ಭಾಗವಹಿಸಿದ್ದು ವಿಶೇಷವಾಗಿತ್ತು.
ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಸಿದ್ದು ಪಾಟೀಲ ಅವರ ಮಾರ್ಗದರ್ಶನದಲ್ಲಿ ನಡೆದ ಶಿಬಿರದಲ್ಲಿ ದಂತ ವೈದ್ಯ ಡಾ.ಮಂಜುನಾಥ್ ಅರಿಕೆರಿ, ಡಾ.ಶ್ವೇತಾ.ಡಿ. ಅವರು ಬಾಯಿಯ ನೈರ್ಮಲ್ಯದ ಕುರಿತು ಮತ್ತು ದಂತ ಫೆÇ್ಲೀರೋಸಿಸ್ ಕುರಿತು ಮಾಹಿತಿ ನೀಡಿದರು. ತಂಬಾಕು ನಿಯಂತ್ರಣ ವೈದ್ಯಧಿಕಾರಿ ಡಾ.ರಾಕೇಶ್ವರಿ ಉಪಸ್ಥಿತರಿದ್ದರು.
ನೀಲಹಳ್ಳಿ ಗ್ರಾಮದ ಜನರು, ಮತ್ತು ಶಾಲಾ ಶಿಕ್ಷಕರು, ಶಾಲಾ ಮಕ್ಕಳು ಸೇರಿದಂತೆ ಒಟ್ಟು ಫಲಾನುಭವಿಗಳು 167. ಆರೋಗ್ಯ ತಪಾಸಣೆ ಮಾಡಿಕೊಂಡರು. ಪತ್ತೆಯಾದ ಪ್ರಕರಣಗಳು ದಂತ ಕ್ಷಯ-43,
ಆವರ್ತಕ ಗಾಯಗಳು-32 ದಂತ ಭಾಗ್ಯದ ಅಡಿಯಲ್ಲಿ ಫಲಾನುಭವಿಗಳು-8 ದಂತ ಫೆÇ್ಲೀರೋಸಿಸ್-18 ಕ್ಯಾನ್ಸರ್ ಪೂರ್ವ ಗಾಯಗಳು-12 ಪತ್ತೆಯಾದವು. ಬಾಯಿಯ ನೈರ್ಮಲ್ಯ ಸಾಧನಗಳು, ಉಚಿತವಾಗಿ ಟ್ಯೂತ್ ಪೇಸ್ಟ್ / ಬ್ರೆಷ್ ಮೌತ್ ವಾಷ್ ಔಷಧಿಗಳನ್ನು ವಿತರಿಸಲಾಯಿತು. ಆಶಾ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕಿಯರು, ಅರೋಗ್ಯ ಇಲಾಖೆಯ ಸಿಬ್ಬಂದಿಗಳು ಅರಿವು ಮೂಡಿಸುವದರ ಜೊತೆಗೆ ಉಚಿತ ಚಿಕಿತ್ಸೆ ಕುರಿತು ಗ್ರಾಮದಲ್ಲಿ ಜಾಗೃತಿ ಮೂಡಿಸಿದರು.