
ಬೀದರ:ಜ.೨೨: ಔರಾದ ತಾಲ್ಲೂಕಿನಲ್ಲಿ ಸಮುದಾಯ ಶೌಚಾಲಯಗಳ ನಿರ್ಮಾಣ, ಶಾಲೆಗಳಿಗೆ ಸೋಲಾರ ಪೆನಾಲ್ ಅಳವಡಿಕೆ ಹಾಗೂ ವಿದ್ಯುತ್ ಕನೆಕ್ಷನ್ ನೀಡುವ ವಿಚಾರದಲ್ಲಿ ಕೆ.ಎಲ್.ಆರ್.ಡಿ ಅಧಿಕಾರಿ ಅಭಿಷೇಕ ಪೊಲಾ ಕೋಟ್ಯಾಂತರ ರೂಪಾಯಿ ಲೂಟಿ ಮಾಡಿದ್ದಾರೆ ಎಂದು ಸಾಮಾಜಿಕ ಹೊರಾಟಗಾರ ಹಾಗೂ ಕೌಠಾ ಗ್ರಾಮ ಪಂಚಾಯತ್ ಸದಸ್ಯ ಪ್ರದೀಪ ಯನಗುಂದೆ ಆರೋಪಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಲ್ಯಾಂಡ್ ಆರ್ಮಿ ಇಲಾಖೆ ಬ್ರಹ್ಮಾಂಡ ಭ್ರಷ್ಠಾಚಾರದ ಕೂಪವಾಗಿದೆ ಎಂದು ಒಂದೊAದು ಹಗರಣ ಸವಿಸ್ತಾರವಾಗಿ ತಿಳಿಸಿದರು.
ಬೀದರ್‌ನ ಕೆ.ಎಲ್.ಆರ್.ಡಿ ಇಲಾಖೆ ಎ,ಇ. ಹಾಗೂ ಎಇಇ ಎರಡು ಹುದ್ದೆಗಳ ಪ್ರಭಾರಿ ಅಧಿಕಾರ ವಹಿಸಿಕೊಂಡ ಅಭಿಷೆಕ ಪೋಲಾ ಅವರು ಬಹಿರಂಗವಾಗಿ ನಿರ್ಭಯವಾಗಿ ಸರಕಾರದ ಕೋಟ್ಯಾಂತರ ರೂ. ಲೂಟಿ ಮಾಡಿದ್ದಾರೆ. ಇವರಿಗೆ ಇಲ್ಲಿಯ ಹಿರಿಯ ಅಧಿಕಾರಿಗಳ ಕುಮ್ಮಕ್ಕು ಸಹಿತ ಇದೆ. ಪ್ರಶ್ನೆ ಮಾಡಿದರೆ ನನ್ನ ಹಿಂದೆ ಸಚಿವರಿದ್ದಾರೆ. ಹಿತಿಯ ಅಧಿಕಾರಿಗಳಿದ್ದಾರೆ. ನಿಮ್ಮ ಮನೆಗೆ ರಾತ್ರಿ ೧೦ ಗಂಟೆಗೆ ಬಂದು ನೋಡಿಕೊಳ್ಳುತ್ತೇನೆ ಎಂದು ಅವರ ಬೆಂಬಲಿಗ ಗುರು ಪಾಟೀಲ ಕೂಡಾ ನಮಗೆ ಹೆದರಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದರು. ಅವರು ನಡೆಸಿರುವ ಭ್ರಷ್ಠಚಾರ ಅವ್ಯವಹಾರದ ಕುರಿತು ಹಿರಿಯ ಅಧಿಕಾರಿಗಳಿಗೆ ದೂರು ನೀಡಿ ಸಾಕ್ಷಿ ಆಧಾರ ಸಹಿತ ದಾಖಲೆಗಳು ನೀಡಿದ್ದರೂ ಸಹ ಕ್ರಮ ಕೈಗೊಳದೇ ಮೌನ ವಹಿಸಿರುತ್ತಾರೆ ಎಂದು ತಿಳಿಸಿದರು.
ಔರಾದ ಮೀಸಲು ವಿಧಾನಸಭಾ ಕ್ಷೇತ್ರದ ಔರಾದ ಮತ್ತು ಕಮಲನಗರ ತಾಲ್ಲೂಕಿನಲ್ಲಿ ಹಲವಾರು ಸರಕಾರಿ ಶಾಲೆಗಳಿಗೆ ಸೋಲಾರ ಪೆನಾಲ್ ಅಳವಡಿಸದೆ ಕೋಟ್ಯಾಂತರ ರೂ. ಲೂಟಿ ಮಾಡಿದ್ದಾರೆ ಎಂದರು.
ಸೋಲಾರ ಪೆನಾಲ ಅಳವಡಿಕೆ ಕಾಮಗಾರಿಗೆ ಅನುಮೊದನೆ ಪಡೆದು ಕೆಲವೇ ಕೆಲವು ಶಾಲೆಗಳಿಗೆ ಸೊಲಾರ ಅಳವಡಿಸಿ ಇನ್ನುಳಿದ ಶಾಲೆಗಳಲ್ಲಿ ಅಲ್ಲಿಯ ಮುಖ್ಯ ಗುರುಗಳಿಗೂ ಸಹ ಮಾಹಿತಿ ನೀಡದೆ ಹಣ ಲಪಟಾಯಿಸಿದ್ದಾರೆ ಎಂದು ತಿಳಿಸಿದರು.
ಈ ವಿಷಯ ಕುರಿತು ಖುದ್ದಾಗಿ ತಾವು ಶಾಲೆಗಳಿಗೆ ಭೇಟಿ ನೀಡಿ ಅಲ್ಲಿಯ ಮುಖ್ಯಗುರುಗಳಿಗೆ ಕೇಳಿದರೆ ನಮ್ಮಗೆ ಈ ವಿಷಯ ಮಾಹಿತಿಯೆ ಇಲ್ಲ. ನಮ್ಮಲ್ಲಿ ಸೊಲಾರ್ ಪೆನಾಲ ಅಳವಡಿಸಿಲ್ಲ ಎಂದು ಅಧಿಕೃತವಾಗಿ ಬರೆದುಕೊಟ್ಟಿರುವ ದಾಖಲೆಯು ಸಹ ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.
ಶಾಲೆಗಳ ಕೋಣೆ ದುರಸ್ತಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಗುಳುಂ ಮಾಡಿದ್ದಾರೆ. ಸಮುದಾಯ ಶೌಲಯಯಗಳು ವೈಜ್ಞಾನಿಕವಾಗಿ ನಿರ್ಮಾಣ ಮಾಡದೆ ಕಳಪೆ ಮಾಡಿ ಹಣ ಕೊಳ್ಳೆ ಹೊಡೆದಿದ್ದಾರೆ ಎಂದು ಆರೋಪಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯಿAದ ವಿವಿಧ ಯೊಜನೆಗಳಡಿಯಲ್ಲಿ ಅಭಿವೃದ್ದಿಗಾಗಿ ಕೋಟ್ಯಾಂತರ ರೂ ನೀಡುತಿದೆ. ಆದರೆ ಇಲ್ಲಿ ಅಧಿಕಾರಿಗಳು ಕೆಲಸ ಮಾಡದೆ ಬೋಗಸ್ ಬಿಲ್ ಮಾಡಿ ಹಣ ಲೂಟಿ ಮಾಡುತಿದ್ದಾರೆ. ಈ ಬಗ್ಗೆ ತನಿಖೆಗಾಗಿ ಹಿರಿಯ ಅಧಿಕಾರಿಗಳು ಬೀದರಗೆ ಬಂದಾಗ ಅವರಿಗೆ ಇಲ್ಲಿಯ ಅಧಿಕಾರಿಗಳು ಸಹಕಾರ ನೀಡಲಿಲ್ಲ. ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಎಂದು ಮರಳಿ ಹೊಗಿರುತ್ತಾರೆ ಎಂದು ಸರಕಾರದ ವಿರುದ್ದ ಕಿಡಿಕಾರಿದರು.
ಬೀದರ್ ಕೆಡಿಅರ್‌ಎಲ್ ಅಧಿಕಾರಿ ಅಭಿಷೇಕ ಪೋಲಾ ಅವರನ್ನು ಕೂಡಲೇ ಅಮಾನತ್ತುಗೊಳಿಸಿ ಅವರು ಕಚೇರಿಯ ಅಧಿಕಾರ ವಹಿಸಿಕೊಂಡ ಬಳಿಕ ನಡೆದಿರುವ ಕಾಮಗಾರಿಗಳ ಸಮಗ್ರ ತನಿಖೆ ಮಾಡಿಸಿ ಅವರ ವಿರುದ್ಧ ಕಾನೂನಿನ ಕಠಿಣ ಕ್ರಮ ಕೈಗೊಳಬೇಕೆಂದು ಸರಕಾರಕ್ಕೆ ಒತ್ತಾಯಿಸಿದ್ದರು.
ಅಭಿಷೇಕ ಪೊಲಾ ಅವರನ್ನು ಏನಾದರು ಪ್ರಶ್ನೆ ಮಾಡಿದ್ದರೆ ಏಜೆನ್ಸಿಯ ಮುಖ್ಯಸ್ಥರಾದ ಗುರು ಪಾಟೀಲ್ ಧಮಕಿ ಹಾಕುತಿದ್ದಾರೆ ಎಂದು ದೂರಿದರು. ಈಗಾಗಲೆ ಇವರ ವಿರುದ್ದ ದೂರು ನೀಡಿ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿರುವದಾಗಿ ತಿಳಿಸಿದರು. ಒಂದು ವೇಳೆ ಪೋಲಾ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಇದೇ ವೇಳೆ ಪ್ರಮುಖರಾದ ಗಂಗಾಧರ ಹೊಸಳ್ಳಿ ಮಾತನಾಡಿ ಲ್ಯಾಂಡ್ ಆರ್ಮಿ ಇಲಾಖೆಯ ಎಇ ಹಾಗೂ ಎಇಇ ಅಭಿಷೇಕ ಪೋಲಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ನಾಗೇಂದ್ರ ಬಿರಾದರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

























