ಭೀಮಾತೀರದ ಗ್ರಾಮಗಳಿಗೆ ತಹಸೀಲ್ದಾರ ನಾಗಯ್ಯ ಹಿರೇಮಠ್ ಭೇಟಿ

ವಾಡಿ,ಆ.28: ನೆರೆರಾಜ್ಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿಮಳೆಯಿಂದ ಭೀಮಾನದಿ ಅಪಾಯ ಮಟ್ಟವನ್ನು ಮೀರಿ ಉಕ್ಕಿ ಹರಿಯುತ್ತಿದೆ.
ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಉಜನಿ ಆಣೆಕಟ್ಟಿನಿಂದ ಅಪಾರ ಪ್ರಮಾಣದ ನೀರು ಭೀಮಾ ನದಿಗೆ ಹರಿದು ಬರುತ್ತಿರುವುದರಿಂದ ಚಿತ್ತಾಪುರ ತಾಲ್ಲೂಕಿನ ಕಾಗಿಣಾ ಮತ್ತು ಭೀಮಾ ನದಿಗಳು ಭೋರ್ಗರೆದುಉಕ್ಕಿ ಹರಿದು ನದಿ ಅಂಚಿನ ಗ್ರಾಮಗಳಲ್ಲಿ ನೆರೆಹಾವಳಿಯ ಭೀತಿಮನೆಮಾಡಿದ್ದು, ಪರಿಸ್ಥಿತಿಯ ಮೇಲೆ ನಿಗಾವಹಿಸಲಾಗಿದೆ ಎಂದು ಚಿತ್ತಾಪುರ ತಹಸೀಲ್ದಾರ್ ನಾಗಯ್ಯ ಹಿರೇಮಠ್ ಅವರು ತಿಳಿಸಿದ್ದಾರೆ
ಶನಿವಾರ ಅವರು ನದಿ ಪಾತ್ರದ ಗ್ರಾಮ ಗಳಿಗೆ ಭೇಟಿ ನೀಡಿದಪರಿಸ್ಥಿತಿ ಪರಿಶೀಲಿಸಿಗ್ರಾಮಸ್ಥರಿಗೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು ಯಾವುದೆ ಕಾರಣಕ್ಕೂ ನದಿಯ ದಂಡೆಗೆ ಹೋಗಬಾರದು ಜಾನುವಾರ ನದಿಯ ಕಡೆ ಬಿಡಬಾರದು ಎಂದು ಕಡಬುರ್ ಚಾಮನೂರ್ ಸನ್ನತಿ ಕುಂದನೂರ ಗ್ರಾಮಗಳ್ಳಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಮಾತನಾಡಿ ಪ್ರವಾಹ ಬಗ್ಗೆ ಮುನ್ನಚ್ಚರಿಕೆ ಕ್ರಮ ಬಗ್ಗೆ ತಿಳಿಸಿದರು ಈ ಸಂದರ್ಭದಲ್ಲಿ ಗ್ರೇಡ್ 2 ತೆಹಸೀಲ್ದಾರ ರಾಜಕುಮಾರ ಮರ್ತುರಕರ,ತಾ ಪ ಸಹಾಯಕ ನಿರ್ದೇಶಕ ಪಂಡಿತ ಸಿಂದೆನಾಲವಾರ,ಕಂದಾಯ ನಿರಕ್ಷಕ ಪ್ರಶಾಂತ್ ರಾಠೋಡ,ಪಿ ಡಿ ಓ ಮಹೇಶ್ ಕುಲಕರ್ಣಿ ಗ್ರಾಮ ಲೇಖಕಿ ಶಶಿಕಲಾಹೀರಾಪುರ ಇದ್ದರು