
ಕೋಲಾರ ಡಿ,೬-ಅಂಗಮಾರಿ ರೋಗ (ಲೇಟ್ ಬ್ಲೈಟ್) ಈ ರೋಗವು (ಫೈಟಾಫ್ಥೋರಇನ್ಫೆಸ್ಟಾನ್ಸ್) ಎಂಬ ಶಿಲೀಂಧ್ರದಿಂದ ಹರಡುತ್ತದೆ. ಈ ರೋಗ ವಷಪೂರ್ತಿ ಕಾಣಿಸಿಕೊಳ್ಳುವುದಿಲ್ಲವಾದರೂ, ವಾತಾವರಣದಲ್ಲಿ ತೇವಾಂಶ ಶೇ. ೯೦ ರಷ ಮತ್ತು ಉಷಂಶ (೮-೧೦ ಡಿಗ್ರಿ ಸೆಂ.) ೮ ರಿಂದ ೧೦ ದಿವಸಗಳ ತನಕ ನಿರಂತರವಾಗಿ ಮುಂದುವರಿದಲ್ಲಿ ಈ ರೋಗ ಕಾಣಿಸಿಕೊಳ್ಳುತ್ತದೆ.
ಮಳೆಗಾಲ ಹಾಗೂ ಚಳಿಗಾಲದ ಎರಡೂ ಬೆಳೆಗಳನ್ನೂ ಈ ರೋಗವು ಬಾಧಿಸುತ್ತದೆ. ಈ ರೋಗವು ಬೆಳೆಯ ಯಾವುದೇ ಹಂತದಲ್ಲಾದರೂ ಕಂಡುಬರಬಹುದು. ಮೋಡ ಕವಿದ ವಾತವರಣವಿದ್ದು, ತುಂತುರು ಮಳೆಯಾಗುತ್ತಿರುವ ಸಮಯದಲ್ಲಿ ಈ ರೋಗವು ಮತ್ತಷ ಉಲ್ಬಣಗೊಳ್ಳುತ್ತದೆ.
ರೋಗದ ಲಕ್ಷಣಗಳು ಎಲೆಗಳ ಕೆಳ ಭಾಗದಲಿ ಎಲೆಯ ತುದಿ ಅಂಚಿನಲ್ಲಿ ಮತ್ತು ಕಾಂಡಗಳ ಮೇಲೆ ನೀರಿನಿಂದ ನೆನೆದಂತಿರುವ ಚುಕ್ಕೆಗಳು ಕಾಣಿಸುತ್ತವೆ. ನೀರಿನಿಂದ ಕೂಡಿದ ಚುಕ್ಕೆಗಳು ಒಂದಕ್ಕೊಂದು ಸೇರಿ ಮೆತ್ತಗಾಗಿ ಸುಟ್ಟಂತೆ ಕಪ್ಪಾಗಿ ಕಾಣುತ್ತವೆ. ಈ ಚುಕ್ಕೆಗಳು ಕ್ರಮೇಣ ವೃದ್ಧಿಯಾಗಿ ಕಂದು ಮಿಶ್ರಿತ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಈ ಭಾಗದಲ್ಲಿ ವೃತ್ತಾಕಾರದ ಗೀರುಗಳು ಮತ್ತು ಬಿಳಿ ಬೂಸ್ಟು ಬೆಳೆವಣಿಗೆ ಕಂಡುಬರುತ್ತದೆ.
ಹತೋಟಿ ಕ್ರಮ ರೋಗ ನಿರೋಧಕ ತಳಿಗಳನ್ನು (ಕುಫ್ರಿಹಿಮಾಲಿನಿ, ಕುಫ್ರಿಕರಣ್) ಬೆಳೆಯುವುದು. ಬಿತ್ತನೆ ಮಾಡುವ ಒಂದು ದಿನದ ಮುಂಚೆ ಗಡ್ಡೆಗಳನ್ನು ಮ್ಯಾಂಕೊಜೆಬ್ ೪ ಗ್ರಾಂ + ಸ್ಟ್ರೊಪ್ಟೊಸೈಕ್ಲಿನ್ ಸಲ್ಫೇಟ್ (೯೦:೧೦) ೦.೫ ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿದ ದ್ರಾವಣದಲ್ಲಿ ೧೦ ನಿಮಷ ಉಪಚರಿಸಿ ನಂತರ ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡುವುದು.
ರೋಗಕ್ಕೆ ತುತ್ತಾದ ಗಡ್ಡೆ ಹಾಗೂ ಗಿಡದ ಭಾಗಗಳನ್ನು ನಾಶಪಡಿಸುವುದು. ಮುಂಜಾಗ್ರತೆ ಕ್ರಮವಾಗಿ ಮೋಡಕವಿದ ವಾತಾವರಣವಿದ್ದಲ್ಲಿ ಮ್ಯಾಂಕೊಜೆಬ್ ೩ ಗ್ರಾಂ ಅಥವಾ ಜೈನೇಬ್ ೨ ಗ್ರಾಂ ಪ್ರತಿ ಲೀಟರ್ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.
ರೋಗವು ಹೆಚ್ಚು ಉಲ್ಬಣಗೊಂಡಲ್ಲಿ ಫೆನಾಮಿಡೋನ್ + ಮ್ಯಾಂಕೊಜೆಬ್ ೩ ಗ್ರಾಂ/ಲೀಟರ್ ಅಥವಾ ಅಮೆಟೊಕ್ಟ್ರಾಡಿನ್ + ಡೈಮಿಥೊಮಾರ್ಫ್ ೨ ಮಿ.ಲೀ./ಲೀಟನಂತೆ ಪುನಾರವರ್ತಿಸದೆ ೭ ದಿವಸಗಳ ಅಂತರದಲ್ಲಿ ಸಿಂಪಡಿಸಬೇಕೆಂದು ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

































