ಕಲಬುರಗಿ,ಸೆ.12: ಭಾರತದ ಮಹಾನ್ ಮಹಿಳಾ ಯೋಧರ ತ್ಯಾಗಗಳಿಂದ ನಾವು ಬಹಳಷ್ಟು ಪಾಠಗಳನ್ನು ಕಲಿಯಬೇಕಾಗಿದೆ ಎಂದು ಸಿಯುಕೆ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಹೇಳಿದರು. ಅವರು ಭಾರತವರ್ಷದ ಮಹಿಳಾ ಯೋಧರ ಅದಮ್ಯಧೈರ್ಯ ಮತ್ತು ಸಬಲೀಕರಣವನ್ನುಆಚರಿಸುವುದು” ಎಂಬ ವಿಚಾರ ಸಂಕಿರಣದಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಐಕ್ಯೂಎಸಿ, ಸಿಯುಕೆ ಸಹಯೋಗದೊಂದಿಗೆ ಅಖಿಲ ಭಾರತೀಯರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ (ಎಬಿಆರ್‍ಎಸ್‍ಎಂ)-ಸಿಯುಕೆ ಘಟಕವು ಆಯೋಜಿಸಿತ್ತು. ಅವರು ಮುಂದುವರೆದು ಮಾತನಾಡಿ ನಾವು ಮಹಾನ್‍ಯೋಧರಇತಿಹಾಸ, ಆ ದಿನಗಳಲ್ಲಿ ಅವರ ಸ್ಥಿತಿಗತಿಗಳು ಮತ್ತುಅವರ ತ್ಯಾಗಗಳನ್ನು ತಿಳಿದುಕೊಳ್ಳಬೇಕು, ಏಕೆಂದರೆಇಂದು ನಾವು ಅವರ ಹೋರಾಟದ ಫಲವನ್ನುಅನುಭವಿಸುತ್ತಿದ್ದೇವೆ. ಕಿತ್ತೂರುರಾಣಿಚೆನ್ನಮ್ಮ, ರಾಣಿಅಬ್ಬಕ್ಕಚೌಟ ಮತ್ತುಅಹಲ್ಯಾದೇವಿ ಹೋಳ್ಕರ್ ಅವರಂತಹಧೈರ್ಯಶಾಲಿ ರಾಣಿಯರಿಂದ ನಾವು ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಮನೋಭಾವವನ್ನುಅನುಕರಿಸಬೇಕು. ವಿದೇಶಿ ಆಕ್ರಮಣಗಳ ಮೊದಲು ಭಾರತವುಒಂದುಕಾಲದಲ್ಲಿ ವಿಶ್ವದಅತ್ಯಧಿಕಜಿಡಿಪಿಯನ್ನು ಹೊಂದಿತ್ತು, ಆಗ ಅಮೆರಿಕ ಮತ್ತುಆಸ್ಟ್ರೇಲಿಯಾಇನ್ನೂಜಾಗತಿಕವಾಗಿ ಬೆಳೆದಿರಲಿಲ್ಲ. ನಾವು ವಿಕಸಿತ ಭಾರತ 2047 ರತ್ತ ಸಾಗುತ್ತಿರುವಾಗ, ನಮ್ಮಇತಿಹಾಸವನ್ನುಇಣುಕಿ ನೋಡದೆಅದುಅಸಾಧ್ಯ. ನಮ್ಮ ಪ್ರಧಾನ ಮಂತ್ರಿಗಳು ಬಾಹ್ಯ ಒತ್ತಡಗಳ ವಿರುದ್ಧದೃಢವಾಗಿ ನಿಲ್ಲುವ ಮೂಲಕ ಆತ್ಮನಿರ್ಭರ ಭಾರತವನ್ನು ತೋರಿಸಿದಂತೆ, ನಾವು ಕೂಡ ನಮ್ಮ ವೀರ ಭೂತಕಾಲದಿಂದ ಸ್ಫೂರ್ತಿ ಪಡೆಯಬೇಕು ಎಂದು ಹೇಳಿದರು.
ಮುಖ್ಯ ಭಾಷಣಕಾರರಾದ ಪೆÇ್ರ. ಪವಿತ್ರಾಆರ್. ಆಲೂರ್ ಮಾತನಾಡಿ, “ಕಿತ್ತೂರುರಾಣಿಚೆನ್ನಮ್ಮ ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ. 1924 ರಲ್ಲಿಅವರು ಬ್ರಿಟಿಷರನ್ನು ಸೋಲಿಸಿ ಅವರಅಧಿಕಾರಿಠಾಕರೆಯನ್ನುಕೊಂದರು. ಪ್ರತಿಕೂಲ ಸಮಯದಲ್ಲಿ ಧೈರ್ಯಶಾಲಿಗಳಾಗಿರಲು ಅವರು ನಮಗೆಲ್ಲರಿಗೂ, ವಿಶೇಷವಾಗಿ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಅದೇರೀತಿ ಉಳ್ಳಾಲದ ವೀರರಾಣಿಅಬ್ಬಕ್ಕಚೌತಾ ಮತ್ತುಇಂದೋರಿನಅಹಲ್ಯಾದೇವಿ ಹೋಳ್ಕರ್ ಕೂಡ ವಿದೇಶಿ ಮತ್ತುಆಂತರಿಕ ಶತ್ರುಗಳ ವಿರುದ್ಧಧೈರ್ಯಶಾಲಿ ಹೋರಾಟಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಭಾರತೀಯ ಸಂಪ್ರದಾಯ ಮತ್ತು ಸಂಸ್ಕøತಿಯರಕ್ಷಣೆ ಮತ್ತು ಸಂರಕ್ಷಣೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಬಿಆರ್‍ಎಸ್‍ಎಂ-ಸಿಯುಕೆ ಘಟಕದಅಧ್ಯಕ್ಷ ಪೆÇ್ರ.ಚನ್ನವೀರಆರ್.ಎಂ., ಐಕ್ಯೂಎಸಿ ನಿರ್ದೇಶಕ ಪೆÇ್ರ.ಎಂ.ಅಮರೇಂದ್ರ, ಡಾ. ಓರಗುಂಟಿಆಂಜನೇಯಲು, ಡಾ.ಅಖಿಲೇಶ್ ಮಿಶ್ರಾ, ಡಾ.ಭಾವನಾ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.























