
ಲಕ್ಷೆö್ಮÃಶ್ವರ,ಡಿ.೨: ಗೋವಿನಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಕ್ಕಾಗಿ ಲಕ್ಷೆö್ಮÃಶ್ವರದಲ್ಲಿ ಸಮಗ್ರ ರೈತಸಂಘಟನೆಗಳ ಒಕ್ಕೂಟದಿಂದ ಕಳೆದ ೧೭ ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸೋಮವಾರ ರಾತ್ರಿ ಸುಖಾಂತ್ಯಗೊAಡಿತು. ರೈತರ ಹೋರಾಟಕ್ಕೆ ಕೊನೆಗೂ ಜಯ ದೊರಕಿದ್ದು, ಅಂತೂ ಇಂತೂ.. ಖರೀದಿ ಕೇಂದ್ರ ಪ್ರಾರಂಭವಾಯಿತು ಎಂದು ರೈತರು ಹರ್ಷ ವ್ಯಕ್ತಪಡಿಸಿದರು.
ಸೋಮವಾರ ಖರೀದಿ ಕೇಂದ್ರ ಪ್ರಾರಂಭಗೊಳ್ಳುವದಾಗಿ ಜಿಲ್ಲಾಧಿಕಾರಿಗಳು ಗಡುವು ನೀಡಿದ ಹಿನ್ನಲೆಯಲ್ಲಿ ರೈತ ಸಂಘಟನೆಗಳು ವಿಜಯೋತ್ಸವ ಆಚರಿಸಿ ಸಂಬ್ರಮಿಸಿದ್ದರು, ಈ ವೇಳೆಯಲ್ಲಿ ಮದ್ಯಾಹ್ನದ ವರೆಗೂ ಖರೀದಿ ಕೇಂದ್ರ ಪ್ರಾರಂಭವಾಗದಿರುವದಕ್ಕೆ ಆತಂಕಗೊAಡ ಹೋರಾಟಗಾರರು ಟೈರಿಗೆ ಬೆಂಕಿ ಹಚ್ಚಿ, ಪಾಳಾ ಬದಾಮಿ ರಸ್ತೆ ಬಂದ್ ಮಾಡಿ ಪ್ರತಿಭಟನೆಗೆ ಮುಂದಾದರು. ಸ್ಥಳಕ್ಕೆ ಗದಗ ಎಸ್ಪಿ ರೋಹನ್ ಜಗದೀಶ್ ಆಗಮಿಸಿ ಅನ್ನದಾತರನ್ನು ಮನವೊಲಿಸಲು ಮುಂದಾದರು.
ನಂತರ ಆರೋಗ್ಯದಲ್ಲಿ ಅಸ್ತವ್ಯಸ್ತಗೊಂಡು ವೇದಿಕೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದ ಕುಮಾರ ಮಹಾರಾಜರೊಂದಿಗೆ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ ಅವರು ಸಾಂಕೇತಿಕವಾಗಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ ಸಧ್ಯ ಓರ್ವ ರೈತರಿಂದ ಐದು ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಹೆಚ್ಚು ಮಾಡುವಂತೆ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಲಾಗಿದೆ. ಎಂದು ಹೇಳಿದರು. ಮುಖ್ಯಮಂತ್ರಿಗಳು ಖರೀದಿ ಪ್ರಮಾಣ ಹೆಚ್ಚಿಸುವ ಕುರಿತು ಪೆಢರೇಷನ್‌ರೊಂದಿಗೆ ಮಾತನಾಡಿದ್ದು, ಅದಕ್ಕಾಗಿ ಸಭೆಯನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ರೈತರಿಂದ ಖರೀದಿ ಪ್ರಮಾಣ ಹೆಚ್ಚಿಸುವದಕ್ಕಾಗಿ ರಾಜ್ಯದ ೯ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದು, ಅದು ಹೆಚ್ಚಿಸುವ ಸಂಭವಿದೆ ಎಂದರು.
ಖರೀದಿ ಕೇಂದ್ರ ಪ್ರಾರಂಭಿಸಿರುವದಕ್ಕೆ ಸರಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ರಾಜ್ಯದಲ್ಲಿ ಲಕ್ಷೆö್ಮÃಶ್ವರ ರೈತರ ಹೋರಾಟದಿಂದ ಎಲ್ಲ ರೈತರಿಗೂ ಅನೂಕೂಲವಾಗಿರುವದು ರೈತರ ಶಕ್ತಿಯನ್ನು ತೋರಿಸಿದಂತಾಗಿದ್ದು, ಒಬ್ಬ ರೈತರಿಂದ ಕನಿಷ್ಠ ೪೦-೫೦ ಕ್ವಿಂಟಲ್‌ನಷ್ಟು ಮೆಕ್ಕೆಜೋಳ ಖರೀದಿಸಬೇಕು. ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ನಡೆಯದಿದ್ದರೆ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಬೆಳಗಾವಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ ಹೇಳಿದರು.
ಈ ವೇಳೆ ಕುಂದಗೋಳ, ಮಳೆಮಲ್ಲಿಕಾರ್ಜುನ, ಬಟಗುರ್ಕಿ, ಜಮಖಂಡಿ ಶ್ರೀಗಳು, ಅಪರ ಜಿಲ್ಲಾಧಿಕಾರಿ ಡಾ.ದುರ್ಗೇಶ ಕೆ.ಆರ್., ಉಪವಿಭಾಗಾಧಿಕಾರಿ ಎಂ.ಗAಗಪ್ಪ, ಸುಜಾತಾ ದೊಡ್ಡಮನಿ, ಶಂಕರ ಬ್ಯಾಡಗಿ, ನೀಲಪ್ಪ ಶೆರಸೂರಿ ಬಸಣ್ಣ ಹಂಜಿ, ಶರಣು ಗೋಡಿ,ಪೂರ್ಣಾಜಿ ಖರಾಟೆ, ಬಸಣ್ಣ ಬೆಂಡಿಗೇರಿ, ಎಂ.ಎಸ್.ದೊಡ್ಡಗೌಡ್ರ, ವೀರೇಂದ್ರ ಪಾಟೀಲ, ಸುರೇಶ ಹಟ್ಟಿ, ಟಾಕಪ್ಪ ಸಾತಪುತೆ, ಮಹೇಶ ಹೊಗೆಸೊಪ್ಪಿನ, ಚೆನ್ನಪ್ಪ ಷಣ್ಮುಖಿ ಮುಂತಾದವರಿದ್ದರು.

























