ಪತ್ರಕರ್ತ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಗುರುಮಠಕಲ್:ಫೆ.೪:ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಂಗ್ಲೆ ಮಲ್ಲಿಕಾರ್ಜುನ ಸ್ಥಾಪಿತ
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ(ರಿ.) ತಾಲೂಕ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಫೆ. ೫ ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಸಂಘ ತಾಲ್ಲೂಕು ಅಧ್ಯಕ್ಷ ರವಿ ಬುರನೋಳ ತಿಳಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರ ರೊಂದಿಗೆ ಅವರು ಮಾತನಾಡಿ, ಪಟ್ಟಣದ ಜೆಪಿ ಫಂಕ್ಷನ್ ಹಾಲ್ (ಪನ್ನಲಾಲ್)ನಲ್ಲಿ ಫೆ. ೫ ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿರುವ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ
ಪೂಜ್ಯ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಕ್ಷೇತ್ರದ ಶಾಸಕ
ಶರಣಗೌಡ ಕಂದಕೂರ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಪದಗ್ರಹಣ ಸಮಾರಂಭ ದಲ್ಲಿ
ಬಸವರಾಜ ಬೂದಿ, ಹಿರಿಯ ಪತ್ರಕರ್ತರು ಹಾಗು ಡಾ.ವಿ.ಸಿ.ಮೈತ್ರಿ, ನಿವೃತ್ತ ವೈದ್ಯಧಿಕಾರಿ ಗಳನ್ನು ವಿಶೇಷ ವಾಗಿ ಸನ್ಮಾನಿಸಲಾಗುವುದು.
ಇದೇ ವೇಳೆ ಸಂಘದ ಸ್ಥಾಪಕ ರಾಜ್ಯಾಧ್ಯಕ್ಷರಾದ
ಬಂಗ್ಲೆ ಮಲ್ಲಿಕಾರ್ಜುನ
ಕೆಡಬ್ಲೂಜೆವಿ ಯಾದಗಿರಿ ಜಿಲ್ಲಾಧ್ಯಕ್ಷ ರಮೇಶ ಸೌಕಾರ,
ತಹಶೀಲ್ದಾರರಾದ ಚನ್ನಮಲ್ಲಪ್ಪ ಘಂಟಿ, ತಾಲ್ಲೂಕು ಪಂಚಾಯಿತಿ ಇಓ
ಅಂಬರೇಶ ಪಾಟೀಲ,ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ, ಪಿಐ ವೀರಣ್ಣ ದೊಡ್ಮನಿ, ಸಿಡಿಪಿಓ ಶರಣಬಸಪ್ಪ, ಬಿಜೆಪಿ ಮಂಡಲಾಧ್ಯಕ್ಷರಾದ ನರಸಿಂಹಲು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಕೆ.ಚಪೆಟ್ಲಾ,
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಪ್ರಕಾಶ ನಿರೇಟಿ,ಮುಖ್ಯ ಅತಿಥಿ ಗಳಾಗಿ ಭಾಗ ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.