ಸ್ವಾಮಿರಾವ ಕುಲಕರ್ಣಿಗೆ ದಾಸಾನುಗ್ರಹ ಪ್ರಶಸ್ತಿ

ಕಲಬುರಗಿ,ಜ.19-ಬೆಂಗಳೂರಿನ ಶ್ರೀನಿವಾಸ ಉತ್ಸವ ಬಳಗ ಪುರಂದರ ದಾಸರ ಆರಾಧನೆಯ ನಿಮಿತ್ಯ ಉತ್ತರಾದಿ ಮಠದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕಲಬುರ್ಗಿಯ ಹರಿದಾಸ ಸಾಹಿತ್ಯ ವಿದ್ವಾಂಸ, ನಿವೃತ್ತ ಪ್ರಾಚಾರ್ಯ ಡಾ.ಸ್ವಾಮಿರಾವ ಕುಲಕರ್ಣ ಅವರಿಗೆ ಬೆಂಗಳೂರಿನ ಭುವನಗಿರಿ ಆಶ್ರಮದ ಸುವಿದ್ಯೆಂದ್ರ ತೀರ್ಥ ಶ್ರೀಪಾದರು ದಾಸಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದರು.
ಹರಿದಾಸ ಸಾಹಿತ್ಯ ವಿದ್ವಾಂಸ ಡಾ.ಕೃಷ್ಣ ಕೊಲ್ಹಾರ, ಆಧ್ಯಾತ್ಮ ಚಿಂತಕ ಡಾ.ರವೀಂದ್ರ ಕುಷ್ಟಗಿ, ಪತ್ರಕರ್ತ ರಾಘವೇಂದ್ರ ಗಣಪತಿ, ಜಯತೀರ್ಥ ವಿದ್ಯಾಪೀಠದ ಕುಲಪತಿ ಗುತ್ತಲ್ ರಂಗಾಚಾರ್, ಪ್ರಾಂಶುಪಾಲ ಡಾ.ಸತ್ಯ ಧ್ಯಾನಾಚಾರ್ಯ ಕಟ್ಟಿ, ಉತ್ತರಾದಿ ಮಠದ ಕಾರ್ಯನಿರ್ವಹಣ ಅಧಿಕಾರಿ ವಿದ್ಯಾಧೀಶ ಆಚಾರ್ಯ ಗುತ್ತಲ್, ನಿವೃತ್ತ ಐಎಎಸ್ ಅಧಿಕಾರಿ, ಖ್ಯಾತ ಹಿಂದೂಸ್ತಾನಿ ಗಾಯಕ ಡಾ.ಮುದ್ದು ಮೋಹನ, ಗಾಯನ ಸಮಾಜದ ಅಧ್ಯಕ್ಷ ಡಾ.ಎಂ.ಆರ್.ವಿ. ಪ್ರಸಾದ ಮತ್ತಿತರರಿದ್ದರು.