
ಕಲಬುರಗಿ,ಜ.16-ಸ್ವಾಮಿ ವಿವೇಕಾನಂದರು ಭಾರತದಲ್ಲಿ ಜನ್ಮ ತಾಳಿದರೂ ಜಗತ್ತಿನಾದ್ಯಂತ ಪರ್ಯಟನೆ ಮಾಡಿ ಅಲ್ಲಿ ಭರತ ಭೂಮಿಯ ಸಂಸ್ಕøತಿ, ಸಂಸ್ಕಾರ, ಆಚಾರ, ವಿಚಾರ ಮತ್ತು ಸರ್ವಧರ್ಮಗಳ ಸಾರವು ಒಂದೇ ಎಂದು ಸಾರಿ ಜಗತ್ಪ್ರಸಿದ್ಧ ವೀರ ಸನ್ಯಾಸಿ ಎನಿಸಿ ಕೊಂಡಿದ್ದು, ಅವರ ಆದರ್ಶ ಮತ್ತು ಬೋಧನೆಗಳು ಎಂದೆಂದಿಗೂ ಪ್ರಸ್ತುತ, ಅವುಗಳನ್ನು ಅಳವಡಿಸಿಕೊಂಡು ಇಂದಿನ ಯುವಕರು ಭವ್ಯ ಭಾರತದ ನಿರ್ಮಾಣ ಮಾಡಬೇಕು ಎಂದು ಲೋಕಸಭಾ ಮತ್ತು ರಾಜ್ಯ ಸಭಾ ಮಾಜಿ ಸದಸ್ಯರಾದ ಸನ್ಮಾನ್ಯ ಡಾ.ಬಸವರಾಜ ಪಾಟೀಲ ಸೇಡಂ ಜೀಯವರು ಕರೆ ಕೊಟ್ಟರು.
ನಗರದ ಮಹಾಂತ ಜ್ಯೋತಿ ಪ್ರತಿಷ್ಠಾನ ಟ್ರಸ್ಟ್ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಹಸಿವು ಮುಕ್ತ ಕಲಬುರಗಿ ಕಾರ್ಯಕ್ರಮದ ಉದ್ಘಾಟನೆಯ ನಂತರ ಮಾತನಾಡಿದ ಅವರು, ಹಸಿವು ಮುಕ್ತ ಕಲಬುರಗಿ ಕಾರ್ಯಕ್ರಮವು ನಿರಂತರವಾಗಿದ್ದು, ಅದರಂತಹ ಪುಣ್ಯದ ಕೆಲಸ ಇನ್ನೊಂದಿಲ್ಲ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಪ್ಪಾರಾವ ಅಕ್ಕೋಣಿಯವರು ಸಹ ಅನ್ನದಾನವೇ ಅತಿ ಶ್ರೇಷ್ಠದಾನ ಎಂದು ತಿಳಿಸಿದರು. ನಂತರ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯುವಕ ಯುವತಿಯರಿಗೆ ವಿವೇಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅದರಲ್ಲಿ ಶ್ರೀಯುತರುಗಳಾದ ಸುರೇಶ್ ಕಲಶೆಟ್ಟಿ , ವಿಜಯಕುಮಾರ್ ಬಿರಾದಾರ, ಬಸವರಾಜ ಎಸ್ ಎಂ, ಪಾಂಡುರಂಗ ಕುಲಕರ್ಣಿ, ಜಗದೀಪ, ಶಾಮರಾವ್ ಪಾಟೀಲ್, ಪ್ರಶಾಂತ್ ತಡಕಲೆ, ಶಾಂತಾ ವಾಲಿ, ಮಂಜುಳಾ ಡೊಳ್ಳೆ ಮತ್ತು ಪ್ರೀತಿ ಅಕ್ಕೋಣಿ ಯವರಿಗೂ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಡಾ.ಎ.ಎಸ್ ಭದ್ರಶೆಟ್ಟಿಯವರು, ಡಾ ಸಿದ್ದರಾಮಪ್ಪ ಮಾಲಿ ಪಾಟೀಲ್ ಧಂಗಾಪುರ, ಡಾ.ಸುಭಾಷ್ ಕಮಲಾಪುರೆ, ರಾಜು ಕಾಕಡೆ, ಮಹಾದೇವಿ ಪಾಟೀಲ್ ಆಲಗೂಡ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಅಧ್ಯಕ್ಷ ಪೆÇ್ರ.ಶಿವರಾಜ್ ಪಾಟೀಲ್ ಕಾರ್ಯಕ್ರಮ ನಿರೂಪಣೆ ಮಾಡಿದರು ಮತ್ತು ಅನುಷ್ಠಾನಾಧಿಕಾರಿ ಪ್ರೀತಿ ಅಕ್ಕೋಣಿಯವರ ವಂದನಾರ್ಪಣೆಯೊಂದಿಗೆ ಸಮಾರಂಭ ಮುಕ್ತಾಯವಾಯಿತು, ನಂತರ ಆಶ್ರಯ ಕಾಲೋನಿಯ ಸುಮಾರು 50 ಕುಟುಂಬ ಸದಸ್ಯರುಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನೆರವೇರಿತು.

























