
ಯಾದಗಿರಿ:ಡಿ.6: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ರಾಜ್ಯ ಮಟ್ಟದ ಯುವಜನ ಮಹೋತ್ಸವದಲ್ಲಿ ಭಾಗಿಯಾಗಿ ಪ್ರದರ್ಶನ ನೀಡಿದ ಸ್ವಾಮಿ ವಿವೇಕಾನಂದ ಮಲ್ಲಕಂಬ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ದ್ವಿತಿಯ ಸ್ಥಾನ ಪಡೆದುಕೊಂಡರು.
ಗುರುವಾರ ಕ್ರೀಡಾಂಗಣದ ಮುಖ್ಯ ವೇದಿಕೆ ಮೇಲೆ ಪ್ರದರ್ಶನ ನೀಡಿದ ತಂಡದ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದರು. ಆದರೆ ದ್ವಿತೀಯ ಸ್ಥಾನ ಪಡೆದುಕೊಂಡರು.
ಮಲ್ಲಕಂಭ ತಂಡದ ಮುಖ್ಯಸ್ಥ ಹಾಗೂ ನಾಯಕ ರವಿಕುಮಾರ, ವಿದ್ಯಾರ್ಥಿಗಳಾದ ನಿತಿನ್ ಮ್ಯಾಗೇರಿ, ರಾಮು, ಕಿಶೋರ, ಭಾಗೇಶ, ಶರಣಪ್ಪ, ಸಿದ್ದಾರ್ಥ, ದೀಕ್ಷಾ, ದೀಪಿಕಾ, ಪ್ರೀತಮ್ ಇನ್ನಿತರರು ತಂಡದಲ್ಲಿದ್ದರು.






















