ಸ್ವಾಮಿ ವಿವೇಕಾನಂದ ಜಯಂತಿ, ರಾಷ್ಟ್ರೀಯ ಯುವ ದಿನಾಚರಣೆ ಮೆರವಣಿಗೆ

ಕಲಬುರಗಿ,ಜ.13-ಸ್ವಾಮಿ ವಿವೇಕಾನಂದರ ಜಯಂತಿಯ ಅಂಗವಾಗಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯ ನಿಮಿತ್ತ, ವಿವೇಕಾನಂದ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ವತಿಯಿಂದ ಸೋಮವಾರ ನಗರ ಮಟ್ಟದ ಮೆರವಣಿಗೆ ಆಯೋಜಿಸಲಾಯಿತು.
ಯುವಕರಿಗೆ ಸ್ವಾಮಿ ವಿವೇಕಾನಂದರ ಜೀವನ, ದೃಷ್ಟಿ ಹಾಗೂ ಉಪದೇಶಗಳಿಂದ ಪ್ರೇರಣೆ ನೀಡುವ ಉದ್ದೇಶದಿಂದ ಸಂಸ್ಥೆಯು 2006 ರಿಂದ ಪ್ರತಿ ವರ್ಷವೂ ಈ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿದ್ದು, ಮೆರವಣಿಗೆಯು ಬೆಳಿಗ್ಗೆ 9:00 ಗಂಟೆಗೆ ಗಂಜ್ ರಸ್ತೆ, ಬಾಂಬೂ ಬಜಾರ್ ಸಮೀಪದ ಸುಭಾಷ್ ಚಂದ್ರ ಬೋಸ್ ಪ್ರತಿಮೆಯಿಂದ ಆರಂಭಗೊಂಡು ಕಿರಾಣಿ ಬಜಾರ್, ಸೂಪರ್ ಮಾರ್ಕೆಟ್ ಚೌಕ್ ಪೆÇಲೀಸ್ ಠಾಣೆ, ಭಾಂಡೆ ಬಜಾರ್, ಜಗತ್ ವೃತ್ತ, ಎಸ್.ಎಂ. ಪಂಡಿತ್ ರಂಗ ಮಂದಿರ, ಎಸ್‍ವಿಪಿ ವೃತ್ತ ಹಾಗೂ ಜಿಲ್ಲಾ ನ್ಯಾಯಾಲಯದ ಮೂಲಕ ಸಾಗುತ್ತಾ ಆನಂದ ಹೋಟೆಲ್ ಹಿಂಭಾಗ, ವಿಠಲ್ ನಗರದಲ್ಲಿರುವ ವಿವೇಕಾನಂದ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಸಮಾಪ್ತಿಯಾಯಿತು.
ಪೆÇ್ರ.ನರೇಂದ್ರ ಬಡಶೇಶಿ , ಕಾಲೇಜಿನ ಪ್ರಾಂಶುಪಾಲರಾದ ಆಶಿಕ್ ರೆಡ್ಡಿ ಹಾಗೂ ಡಾ.ಮೋಹನ್ ರಾಥೋಡ್ ಅವರು ಬಾಂಬೂ ಬಜಾರ್ ಸಮೀಪದ ಸುಭಾಷ್ ಚಂದ್ರ ಬೋಸ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಧ್ವಜ ಹಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಅಲಂಕರಿಸಲಾದ ವಾಹನದ ಮೇಲೆ ಪ್ರತಿಷ್ಠಾಪಿಸಲಾದ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಗಿದ್ದು, ದೇಶಭಕ್ತಿ ಗೀತೆಗಳ ಧ್ವನಿವ್ಯವಸ್ಥೆಯೊಂದಿಗೆ ಮೆರವಣಿಗೆಯು ಸಾಗಿತು. 600 ಕ್ಕೂ ಹೆಚ್ಚು
ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗವಹಿಸಿ, ಸ್ವಾಮಿ ವಿವೇಕಾನಂದರ ಪ್ರೇರಣಾದಾಯಕ ಉಕ್ತಿಗಳಿರುವ ಫಲಕಗಳನ್ನು ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು ಹಾಗೂ ಘೋಷಣೆಗಳನ್ನು ಕೂಗಿದರು.
ನಂತರ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪ್ರಾಂಶುಪಾಲರಾದ ಆಶಿಕ್ ರೆಡ್ಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿದರು. ಹಲವು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಮಾತನಾಡಿದರು.
ಕಾಲೇಜಿನ ನಿರ್ದೇಶಕ ಮಂಡಳಿಯ ಸದಸ್ಯರಾದ ಶಿವಲಿಂಗಪ್ಪ ರಾವೂರು, ಲಕ್ಷ್ಮಿಪ್ರಸಾದ್ ಜಾಜಿ, ಗಿರಿಶ್‍ಕುಮಾರ್ ನವಾಣಿ, ಶ್ರೀಧರ್ ಕುಲಕರ್ಣಿ ಹಾಗೂ ವೆಂಕಟ್ರೇಶ್ ಗೌಡ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಡಾ. ಮೋಹನ್ ರಾಥೋಡ್, ಅಜಯಕುಮಾರ್ ಶೆಟ್ಟಿ, ಸುದರ್ಶನ ಸ್ವಾಮಿ, ಬಸವರಾಜ ಹಿರೇಮಠ, ಶರಣ ಚಾಂಗಲಿ, ರಾಜಶೇಖರ ಹವಾಲ್ದಾರ್, ಕೃಷ್ಣಕುಮಾರ್ ಕೆ, ಗುರುಪ್ರಸಾದ್, ಆಕಾಶ್, ಮಹೇಶ್ ದೇಶಪಾಂಡೆ, ಶಿ ಸಿದ್ರಾಮ್ ತುಳಸಿ, ಶ್ರೀರಂಗ್ ಎಂ, ಬಸಯ್ಯ ಸ್ವಾಮಿ, ರಾಜಶೇಖರ ವಾಡಿ, ಪ್ರಭಾ ಹುಗಾರ, ಮಿಸ್. ಶುಭಾ ಸಜ್ಜನ್, ಹೀನಾ ಖಾನ್, ಸ್ವಪ್ನಕುಮಾರಿ, ಕಿರಣ್ ಬಿ, ಬಂದನಾ ಚಟರ್ಜಿ, ಮಿಸ್. ಮುಷ್ಫೆರಾ ಕುಲ್ಸುಮ್, ತೌಸೀಫ್ ಅಂಜುಂ, ಅಮರೇಶ್, ರಾಜೇಶ್ವರಿ, ನೀಲಮ್ಮ ಹಾಗೂ ಇತರರು ಉಪಸ್ಥಿತರಿದ್ದರು.