
ಬಾದಾಮಿ,ಜ14: ಯುವಕರು ದೇಶವನ್ನು ಮುನ್ನಡೆಸಲು ಶಕ್ತಿವಂತರಾಗಬೇಕು. ಸ್ವಾಮಿ ವಿವೇಕಾನಂದರು ಹೇಳುವಂತೆ ನಾವೆಲ್ಲರೂ ಪುರು?Àಸಿಂಹರಾಗಬೇಕಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪೆÇ್ರ.ಎಸ್.ಬಿ.ರಾಯನಗೌಡರ ಅವರು ಹೇಳಿದರು.
ಅವರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 163 ನೇ ಜಯಂತಿ ಅಂಗವಾಗಿ ಹಮ್ಮಿಕೊಂಡ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು. ‘ಸ್ವಾಮಿ ವಿವೇಕಾನಂದರ ಚಿಂತನೆಗಳು ಎಂದೆಂದಿಗೂ ಪ್ರಸ್ತುತವಾಗಿದ್ದು ಇಂದಿನ ವಿದ್ಯಾರ್ಥಿಗಳಿಗೆ ಅದರ್ಶಪ್ರಾಯವಾಗಿವೆ ಎಂದರು.
ಈ ಸಂದರ್ಭದಲ್ಲಿ ಪೆÇ್ರ.ಚಂದ್ರಶೇಖರ ಹೆಗಡೆ, ಪೆÇ್ರ.ಕಾಂಚನಮಾಲಾ ಪಾಟೀಲ, ಮುತ್ತಣ್ಣ ರೊಟ್ಡಿ, ಶಿವಕುಮಾರ ಪಟ್ಟಣಶೆಟ್ಟಿ, ಅರ್.ಎಸ್.ಕೊಳ್ಳಿ ಸೇರಿದಂತೆ ಕಾಲೇಜಿನ ಸರ್ವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗವದರು ಭಾಗವಹಿಸಿದ್ದರು. ಆರ್.ಎಸ್.ಕೊಳ್ಳಿ ಪ್ರಾರ್ಥಿಸಿದರು. ಚಂದ್ರಶೇಖರ ಹೆಗಡೆ ನಿರೂಪಿಸಿದರು. ಕಾಂಚನಮಾಲಾ ಪಾಟೀಲ ವಂದಿಸಿದರು.
























