ವಾಡಿಯಲ್ಲಿ ಸ್ವದೇಶಿ ದಿನಾಚರಣೆ

ವಾಡಿ:ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸ್ವದೇಶಿ ದಿನಾಚರಣೆ ಆಚರಿಸಲಾಯಿತು. ಸ್ವದೇಶೀ ಚಿಂತಕ ರಾಜೀವ್ ದೀಕ್ಷಿತ್ ಅವರ ೫೮ನೆ ಜನ್ಮದಿನ, ೧೫ನೇ ವರ್ಷದ ಪುಣ್ಯ ಸ್ಮರಣೆ ನಿಮಿತ್ತವಾಗಿ ಪತಂಜಲಿ ಯೋಗ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸ್ವದೇಶೀ ದಿನಾಚರಣೆ ಯನ್ನು ಸೇಡಮ್ ಓಂ ಶಾಂತಿ ಕೇಂದ್ರದ ಬಿಕೆ ಕಲಾವತಿ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಈ ವೇಳೆ ಅವರು ಮಾತನಾಡಿರಾಜೀವ್ ದೀಕ್ಷಿತ್ ರು ಸ್ವದೇಶಿಯ ಉಳಿವಿಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅವರ ಸಂಕಲ್ಪ ಮತ್ತು ಕನಸನ್ನು ನನಸು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಶರಣರ ಹಿರಿಮೆಯನ್ನು ಮರಣದಲ್ಲಿ ನೋಡು ಅನ್ನುವ ಹಾಗೆ ರಾಜೀವ್ ದೀಕ್ಷಿತ್ ರು ಬರೀ ಮಾತಿನಲ್ಲಿ, ಬದುಕಿನಲ್ಲಿ ಮಾತ್ರ ಸ್ವದೇಶಿ ಚಿಂತಕನಾಗಿರಲಿಲ್ಲ. ಸಾವಿನ ಮನೆಗೂ ಅದನ್ನು ಜತೆಯಲ್ಲೇ ಕೊಂಡೊಯ್ದಿದ್ದರು.
ಅAತಹ ಸಾಧಕರಿಗೆ ಸಾವಿಲ್ಲ,ಅವರ ಚಿಂತನೆಗಳ ಮೂಲಕ ನಮ್ಮ ಜೊತೆಗೆ ಸದಾ ಜೀವತಂರಾಗಿದ್ದಾರೆ ಎಂದು ಹೇಳಿದರು.ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಅವರು ಮಾತನಾಡಿ
ನಮಗೆಲ್ಲ ರಾಜೀವ್ ದೀಕ್ಷಿತ್ ಅಂದ ತಕ್ಷಣ ಎಲ್ಲರಿಗೂ ನೆನಪಾಗೋದು ಸ್ವದೇಶಿ ಬಚಾವೋ ಆಂದೋಲನ. ದೇಸೀ ಚಿಂತನಗೆ, ಜೀವನ ಶೈಲಿಗೆ ಆಂದೋಲನ ರೂಪ ಕೊಟ್ಟವರು ದೀಕ್ಷಿತರು ಎಂದು.
ಸುನಾಮಿ ಅಲೆಗಳಂತೆ ಅಪ್ಪಳಿಸುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳಿಗೆ, ಅವು ಹೊತ್ತು ತರುತ್ತಿರುವ ವಿದೇಶಿ ಜೀವನ ಶೈಲಿಯ ವಿರುದ್ಧ ಎದೆ ಸೆಟೆಸಿ ನಿಲ್ಲುವ ಲಕ್ಷಾಂತರ ತರುಣರ ಪಡೆಯನ್ನೇ ಕಟ್ಟಿದವರು ಅವರು. ಸ್ವದೇಶಿ ಅಂದ ತಕ್ಷಣ ಈ ದೇಶದಲ್ಲೇ ತಯಾರಾದ ವಸ್ತುಗಳನ್ನು ಬಳಸೋದು ಅನ್ನೋ ಸೀಮಿತ ಕಲ್ಪನೆ ಬಹಳಷ್ಟು ಮಂದಿಗಿದೆ.
ಸ್ವದೇಶಿ ಅಂದರೆ ಅದಷ್ಟೇ ಅಲ್ಲ, ಅದು ನಮ್ಮ ಜೀವನ ಶೈಲಿ, ನಮ್ಮ ಬದುಕು, ನಮ್ಮ ಉಸಿರು, ನಮ್ಮ ಹೆಸರು ನಮ್ಮತನ ಎಂದು ಹೇಳಿಕೊಟ್ಟವರಾಗಿದ್ದರು ಎಂದು ಹೇಳಿದರು.
ಗೋವು ಸೇವಕ ಸಚ್ಚಿದಾನಂದ ಆಂಜನೇಯ ರಾಜೀವ್ ದೀಕ್ಷಿತ್ ಅವರ ಹೇಳಿಕೊಟ್ಟ ದಿನನಿತ್ಯದ ಆರೋಗ್ಯ ಸೂತ್ರ ತಿಳಿಸಿದರು.
ಈ ಸಂಧರ್ಭದಲ್ಲಿ ವಾಡಿ ಓಂ ಶಾಂತಿ ಕೇಂದ್ರದ ಬಿಕೆ ಮಹಾನಂದ,ಪ್ರೇಮಾವತಿ ಕಾಶೆಟ್ಟಿ,ನಿರ್ಮಲ ಇಂಡಿ,ಯAಕಮ್ಮ ಗೌಡಗಾಂವ,ಶಾAತಾಬಾಯಿ ನರೋಣಾ,ಹರಿ ಗಲಾಂಡೆ,ಶಿವಶAಕರ ಕಾಶೆಟ್ಟಿ,
ಕಾಶಿನಾಥ ಶೆಟಗಾರ,ಸತೀಶ ಸಾವಳಗಿ,ಅರುಣ ಪಾಟೀಲ,ಸುಭಾಷ ಬಳಚಡ್ಡಿ,ಸಂತೋಷ ದಹಿಹಂಡೆ,ರಮೇಸ ಕುಮಾರ ಸಿಂಗ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.