25 ರಂದು ಸೂರ್ಯನಾರಾಯಣ ವಧರ್ಂತ್ಯೋತ್ಸವ

ಕಲಬುರಗಿ,ಜ.21-ನಗರದ ಸಂಗಮೇಶ್ವರ ಬಡಾವಣೆಯಲ್ಲಿರುವ ಸೂರ್ಯನಾರಾಯಣ ದೇವಸ್ಥಾನದ ಯಾಜ್ಞವಲ್ಕ್ಯ ಭವನದಲ್ಲಿ ಜ.25ರಂದು ಹಮ್ಮಿಕೊಳ್ಳಲಾಗಿರುವ ‘ರಥಸಪ್ತಮಿ ಮಹೋತ್ಸವ’ ಹಾಗೂ ‘ಶ್ರೀ ಸೂರ್ಯನಾರಾಯಣ ವಧರ್ಂತ್ಯೋತ್ಸವ’ದ ಪೂರ್ವಭಾವಿ ಸಭೆ ಜರುಗಿತು. ಸಭೆಯಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಸಮಿತಿಯ ಅಧ್ಯಕ್ಷರಾದ ಮಲ್ಹಾರಾವ ಗಾರಂಪಳ್ಳಿ ಹಾಗೂ ಕಾರ್ಯದರ್ಶಿ ರಾಘವೇಂದ್ರ ವಕೀಲ್ ಅವರು, “ಪ್ರತಿವರ್ಷದಂತೆ ಈ ಬಾರಿಯೂ ವೈವಸ್ವತ ಮನ್ವಂತರದ ಶ್ರೀಶಕ 1947 ವಿಶ್ವಾವಸುನಾಮ ಸಂವತ್ಸರದ ಮಾಘ ಶುದ್ಧ ಸಪ್ತಮಿಯಂದು (ಜ. 25, ಭಾನುವಾರ) ಸೂರ್ಯನಾರಾಯಣನ ಜನ್ಮದಿನವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ವಿದ್ಯಾಕಣ್ವವಿರಾಜ ತೀರ್ಥ ಶ್ರೀಪಾದಂಗಳವರ ಅನುಗ್ರಹದೊಂದಿಗೆ ಅಂದು ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ” ಎಂದು ತಿಳಿಸಿದರು.
ಅಂದು ಬೆಳಿಗ್ಗೆ 6:00 ಗಂಟೆಗೆ ಸುಪ್ರಭಾತ ಮತ್ತು ನೈರ್ಮಲ್ಯಾಭಿಷೇಕದೊಂದಿಗೆ ಉತ್ಸವ ಆರಂಭವಾಗಲಿದೆ. ವೇದಮೂರ್ತಿಗಳಾದ ಶ್ರೀ ಮಾಧವಾಚಾರ ಹಾಗೂ ಶ್ರೀ ಶ್ರೀರಾಮಾಚಾರ ಅವರ ನೇತೃತ್ವದಲ್ಲಿ ಬೆಳಿಗ್ಗೆ 8:00ಕ್ಕೆ ಸೂರ್ಯಕವಚ ಪಠಣ, ಯಾಜ್ಞವಲ್ಕ್ಯ ಅಷ್ಟೋತ್ತರ ಶತನಾಮ ಸ್ತೋತ್ರ ಪಾರಾಯಣ ಹಾಗೂ ಮೈತ್ರೇಯಿ ಭಜನಾ ಮಂಡಳಿಯಿಂದ ಭಜನೆ ನಡೆಯಲಿದೆ. 9:00 ಗಂಟೆಗೆ ಸೂರ್ಯನಾರಾಯಣ ಹೋಮ, 11:30ಕ್ಕೆ ಪೂರ್ಣಾಹುತಿ ಹಾಗೂ ಶ್ರೀ ಯಾಜ್ಞವಲ್ಕ್ಯರ ‘ಕೋಟಿ ನಾಮ ಜಪಯಜ್ಞ’ದ ಮಂಗಲ ಮಹೋತ್ಸವ ಜರುಗಲಿದೆ. ಮಧ್ಯಾಹ್ನ ಮಹಾಪೂಜೆಯ ನಂತರ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಣೆ ಇರಲಿದೆ.
“ಸಪ್ತಾಶ್ವಗಳನ್ನೊಳಗೊಂಡ ರಥವನ್ನೇರಿ ಬರುವ ಸೂಯಾರ್ಂತರ್ಗತ ನಾರಾಯಣನ ದರ್ಶನ ಪಡೆಯುವುದು ಪುಣ್ಯದಾಯಕ. ಈ ಪವಿತ್ರ ಪರ್ವಕಾಲದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು” ಎಂದು ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶಾಮಾಚಾರ್ಯ ಬೈಚಬಾಳ, ಅಶೋಕ್ ಮಳ್ಳಿ, ಪ್ರಾಣೇಶ್ ಬೈಚಬಾಳ್, ಭೀಮಸೇನರಾವ್ ಸಿಂದಗೇರಿ, ವಿನೂತ ಜೋಶಿ, ಅನಿಲ್ ಕುಲಕರ್ಣಿ, ಮಾಥರ್ಂಡ ಕುಲಕರ್ಣಿ, ಭಾರತೀಶ್ ಮೂತಕಪಲ್ಲಿ, ಶಾಮರಾವ್ ಕುಲಕರ್ಣಿ, ಶ್ರೀನಿವಾಸರಾವ್ ಸೇರಿದಂತೆ ಸಮಿತಿಯ ಕಾರ್ಯಕಾರಿಣಿ ಸದಸ್ಯರು ಹಾಗೂ ಬಡಾವಣೆಯ ಸದ್ಭಕ್ತರು ಉಪಸ್ಥಿತರಿದ್ದರು.