ಕಲಬುರಗಿ:ಡಿ.3: ರಾಜ್ಯದಲ್ಲಿ ಖಾಲಿ ಇರುವ 2ಲಕ್ಷ 80 ಸಾವಿರ ಖಾಲಿ ಹುದ್ದೆಗಳನ್ನುಕೂಡಲೇ ಭರ್ತಿ ಮಾಡಬೇಕೆಂದು ಧಾರವಾಡದಲ್ಲಿ ವಿದ್ಯಾರ್ಥಿಗಳು, ಯುವಕರು ಮಾಡುತ್ತಿರುವ ಹೋರಾಟಕ್ಕೆನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಕರ್ನಾಟಕ ರಾಜ್ಯ ತಳವಾರ ಸಮಾಜದ ವಿದ್ಯಾರ್ಥಿ ಘಟಕದ ಕಲಬುರಗಿ ಜಿಲ್ಲಾಧ್ಯಕರಾದ ಭೀಮರಾಯ ತಳವಾರ ಅವರು ಮಾಧ್ಯಮ ಪ್ರಕಟಣೆಯ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ನೇಮಕಾತಿಯಲ್ಲಿ ವಿಳಂಬಮಾಡುತ್ತಿರುವುದರಿಂದವಯೋಮಿತಿ ಕಾರಣದಿಂದ ಉದ್ಯೋಗ ಕಾಂಕ್ಸಿ ವಿದ್ಯಾರ್ಥಿಗಳಲ್ಲಿ, ಯುವಕ, ಯುವತಿಯರಲ್ಲಿ ಆತಂಕ ಮನೆ ಮಾಡಿದೆ.ನಾವು ಇಷ್ಟೆಲ್ಲಾ ಕಷ್ಟ ಪಟ್ಟು ಓದಿದರು ಕೂಡಾ ನಮಗೆ ವಯಸ್ಸು ಆಗಿ ಹುದ್ದೆಗೆ ಅರ್ಜಿ ಸಲ್ಲಿಸಲು ಬರದಂತಾದರೆ ಏನು ಮಾಡುವುದು?ನಮಗೆ ಓದಿಸಿದ ತಂದೆ ತಾಯಿಗಳಿಗೆ ಮತ್ತೆ ಹೊರೆಯಾಗುತ್ತೇವೆ, ಆರ್ಥಿಕ ಸಂಕಷ್ಟ ಎದುರಾಗಿ ನಮ್ಮ ಕುಟುಂಬದ ಸಮಸ್ಯೆಗಳು ಇನ್ನು ಹೆಚ್ಚಿಗೆ ಆಗುತ್ತಿವೆ. ಹೀಗೆ ಒಂದಕ್ಕೊಂದು ಸಮಸ್ಯೆಗಳು ಸಂಕಷ್ಟಗಳು ಹೆಚ್ಚಿಗೆ ಆಗುತ್ತಲೇ ಹೋಗಿ, ಮುಂದೊಂದು ದಿನ ನಾವು ಯಾವುದೇ ಕೆಲಸಕ್ಕೆ ಬಾರದವರಾಗಿ ಇಡೀ ಸಮಾಜಕ್ಕೆ ಭಾರವಾಗುತ್ತೇವೆ ಎಂದು ಎಷ್ಟೋ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇನ್ನೊಂದು ಕಡೆ ಇಷ್ಟೊಂದು ಓದಿ ಬರೆದ ಯುವಕ ಯುವತಿಯರು ಯಾವುದೇ ಕೆಲಸ ಬಾರದೆ ಸೋಮಾರಿಗಳಾಗಿ ಸಮಾಜ ಘಾತುಕ ಕೆಲಸಗಳಲ್ಲಿ ತೊಡಗಿಕೊಂಡರೆ ಆಗ ಸಮಾಜದಲ್ಲಿನ ವ್ಯವಸ್ಥೆ ಏನಾಗಬಹುದು? ಅದು ರಾಜ್ಯದ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂದು ಸರ್ಕಾರ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ಆದ್ದರಿಂದಲೇ ಕೂಡಲೇ ಸರ್ಕಾರ ಎಚ್ಚತ್ತುಕೊಂಡು ದುಡಿಯುವ ಮನಸ್ಸಿರುವ ಯುವಕರ ಕೈಗೆ ಉದ್ಯೋಗ ಅವಕಾಶ ಕಲ್ಪಿಸಿ ಕೊಟ್ಟರೆ ಸರ್ಕಾರಕ್ಕೂ ಒಳ್ಳೆ ಹೆಸರು,ಹಾಗೂ ಯುವಕರಿಗೆ ತಮ್ಮ ಕುಟುಂಬ ನಿರ್ವಹಣೆಗೆ ಆರ್ಥಿಕ ಭದ್ರತೆ ಕಲ್ಪಿಸುವುದರ ಜೊತೆಗೆ ಸಮಾಜದಲ್ಲಿ ಒಳ್ಳೆಯ ವಾತಾವರಣ ನಿರ್ಮಿಸಿದಂತಾಗುತ್ತದೆ.ಹಾಗಾಗಿ ಸರ್ಕಾರ ಕೂಡಲೇ ರಾಜ್ಯದಲ್ಲಿ ಖಾಲಿ ಇರುವ 2 ಲಕ್ಷ ದ 80 ಸಾವಿರ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ತಳವಾರ ಸಮಾಜದ ರಾಜ್ಯ ಗೌರವಧ್ಯಕ್ಚರಾದ ರೇವಣಸಿದ್ಧಗೌಡ ಕಮಾನಮನಿ, ಸಂಸ್ಥಾಪಕ ರಾಜ್ಯಧ್ಯಕ್ಚರಾದ ಡಾ. ಸರ್ದಾರ ರಾಯಪ್ಪ, ರಾಜ್ಯ ಉಪಾಧ್ಯಕ್ಷರಾದ ಬಾಪೂಗೌಡ ಮಾಲಿಪಾಟೀಲ್, ಸಂಘಟನಾ ಕಾರ್ಯದರ್ಶಿ ಆದ ಸಿದ್ದು ಯಲಬಾ, ಜಿಲ್ಲಾಧ್ಯಕ್ಚರಾದ ಅಶೋಕ್ ಕಂಕಿ, ಅಫಜಲಪುರ್ ತಾಲೂಕಾದ್ಯಾಕ್ಚರಾದ ದಿಗಂಬರ ಡಾoಗೆ, ಶಹಾಬಾದ ತಾಲೂಕಾದ್ಯಾಕ್ಚರಾದ ಬೆಳ್ಳೆಪ್ಪಾ ಕಣದಳ, ಆಟೋ ಚಾಲಕರ ಅಧ್ಯಕ್ಷರಾದ ಸಂತೋಷ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

























