
ಧಾರವಾಡ, ಮೇ19: ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಆಡಳಿತಮಂಡಳಿ ಅದರ ಅಂಗ ಸಂಸ್ಥೆಗಳ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ವೇದಿಕೆಗೆ ಬೆಂಬಲವನ್ನು ವ್ಯಕ್ತಪಡಿಸಿ ಸಂಸ್ಥೆಯ ಟೌನಹಾಲಿನಿಂದ ಮೆರವಣಿಗೆಯೊಂದಿಗೆವಿದ್ಯಾವರ್ಧಕ ಸಂಘದ ಎದುರುಗಡೆ ಇರುವ ನಿರಂತರ ಉಪವಾಸ ನಿರಶನ ಸ್ಥಳಕ್ಕೆ ಆಗಮಿಸಿ ಹೋರಾಟದ ಅಧ್ಯಕ್ಷರಿಗೆ ಮನವಿಯನ್ನು ಅರ್ಪಿಸಲಾಯಿತು.
ಸಂಸ್ಥೆಯ ಕಾರ್ಯಾಧ್ಯಕ್ಷ ರಾಜಶೇಖರ ಬೆಳ್ಳಕ್ಕಿ ಮಾತನಾಡಿ ಪ್ರತ್ಯೇಕಪಾಲಿಕೆ ಮಾಡುವದರಿಂದ ಅಭಿವೃದ್ಧಿ ಕೆಲಸಗಳನ್ನು ಬೇಗಬೇಗ ಕೈಕೊಳ್ಳಬಹುದು ಎಂದರು.
ಮಹಾನಗರ ಪಾಲಿಕೆ ನೀಡುವ ದಾಖಲಾತಿಗಳಲ್ಲಿ ಯಾವುದಾದರು ತಿದ್ದುಪಡಿಗಳು ಇದ್ದರೆ ಅದನ್ನು ಸರಿಪಡಿಸಲು ಹುಬ್ಬಳ್ಳಿಗೆ ಒಡಾಡಬೇಕಾಗುತ್ತದೆ ಇದಕ್ಕೆ ಸಾಕಷ್ಟು ಸಮಯವನ್ನು ವ್ಯಯಿಸಬೇಕು ಎಂದರು. ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯು ನಾಡು, ಕನ್ನಡನುಡಿ, ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಹೋರಾಟಗಳಿದ್ದರೆ ಅದಕ್ಕೆ ಸಂಸ್ಥೆಯು ತನು, ಮನ, ಧನದಿಂದಪಾಲ್ಗೊಳ್ಳುತ್ತದೆ. ಆದಷ್ಟು ಬೇಗನೆ ಪ್ರತ್ಯೇಕ ಪಾಲಿಕೆ ಆಗಿ ಧಾರವಾಡವು ದೇಶಕ್ಕೆ ಮಾದರಿ ನಗರವಾಗಿ ಹೊರಹೊಮ್ಮಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಧಾರವಾಡ ಹೈಕೊರ್ಟ ಪೀಠದ ಅಧ್ಯಕ್ಷರಾದ ಬಿ.ಡಿ.ಹಿರೇಮಠ ಮಾತನಾಡಿದರು.
ಹೋರಾಟದಲ್ಲಿ ಆಡಳಿತ ಮಂಡಳಿಯ ಜಂಟಿ ಕಾರ್ಯದರ್ಶಿಗಳಾದ ಎಸ್.ಎಂ.ಅಗಡಿ, ಆಡಳಿತ ಮಂಡಳಿಯ ಸದಸ್ಯರಾದ ಬಿ.ಎಸ್.ತಾಳಿಕೋಟಿ, ಎಂ.ಆರ್.ಇಂಡಿ, ಎ.ಎಸ್.ಹಿರೇಮಠ, ಕಚೇರಿ ಅಧೀಕ್ಷಕರಾದ ಶಿವಲಿಂಗ ನೀಲಗುಂದ, ಪ್ರಾಚಾರ್ಯರಾದ ಎಸ್.ಎಂ.ಬಮ್ಮನಗೌಡರ, ಶ್ರೀಮತಿ ಸವಿತಾಪಾಟೀಲ, ಶ್ರೀಮತಿ ಭುವನೇಶ್ವರಿ ದಂಡಿನ, ಡಿ.ಬಿ.ಹೊಂಬಳ, ಅಭಿಷೇಕಯಮನೂರ, ಅಭಿಷೇಕ ಜಹಗೀರದಾರ, ಟಿಪ್ಪುರಾಜ, ಮಹಾಂತೇಶ ಮೂಲ್ಕಿಪಾಟೀಲ, ನಾಗರಾಜ ಗೊಂದಿ, ಕಿರಣ ಬಣಕಾರ, ಎಸ್.ಎಂ.ಹೂಗಾರ, ಶ್ರೀಮತಿ. ಸಾವಿತ್ರಿ ಪಾಟೀಲ, ಶ್ರೀಮತಿ ಸ್ನೇಹಾ ವಾಲಗಳ್ಳಿ, ಶ್ರೀಮತಿ. ಪ್ರಭಾವತಿ ಗದಗಕರ, ಎಲ್.ಎಸ್.ತಳ್ಳಿ, ಮಹಾಂತೇಶ ಕ್ವಾಟಿ, ಸೋಮಶೇಖರ ಕರಡಿಗುಡ್ಡ, ರಾಘವೇಂದ್ರ ಗುಡೆಣ್ಣವರ, ಮೃತ್ಯುಂಜಯ ಅಮರಗೋಳ ಮತ್ತು ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.


























