ಎಪಿಎಂಸಿ ಅನಧಿಕೃತ ಅಂಗಡಿ ತರೆವಿಗೆ ಆಗ್ರಹಿಸಿ ನಡೆಯುತ್ತಿರುವ ಧರಣಿಗೆ ಬೆಂಬಲ

ಕಲಬುರಗಿ,ಮೇ.೨೨- ನಗರದ ಎಪಿಎಂಸಿ ಯಲ್ಲಿರುವ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಹಾಗೂ ಇಲ್ಲಿನ ಅಧಿಕಾರಿಗಳನ್ನು ಸಾಮೋಹಿಕ ವರ್ಗಾವಣೆಗೆ ಅಗ್ರಹಿಸಿ ಎಪಿಎಂಸಿ ಕಚೇರಿ ಎದರುಗಡೆ ನಡೆಯುತ್ತಿರುವ ಧರಣಿ ಎರಡನೇ ದಿನವೂ ಮುಂದುವರೆದಿದೆ.
ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಹಾಗೂ ಹಿಂದೂ ಜಾಗೃತಿ ಸೇನೆ ಜಂಟಿಯಾಗಿ ನೆತೃತ್ವದಲ್ಲಿ ಹಮ್ಮಿಕೊಂಡಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹದಲ್ಲಿ ಇಂದು ರಾಮ ಸೇನೆ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಭಾಗವಹಿಸಿದರು
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಪ್ರತಿಕ್ರಾಜ ಹೋರಾಟ ಸಮಿತಿ ಅಧ್ಯಕ್ಷರು ಎಮ್ ಎಸ್ ಪಾಟೀಲ್ ನರಿಬೋಳ. ಹಿಂದೂ ಜಾಗರಣ ಸೀನ ಜಿಲ್ಲಾಧ್ಯಕ್ಷರಾದ ಲಕ್ಷ್ಮಿಕಾಂತ್ ಸ್ವಾದಿ. ರಾಮ ಸೇನೆ ಕರ್ನಾಟಕ ಜಿಲ್ಲಾಧ್ಯಕ್ಷರಾದ ಮಹೇಶ್ ಕೆಂಭಾವಿ.ಶರಣಗೌಡ ಪೋಲಿಸ್ ಪಾಟೀಲ ನರಿಬೋಳ ಸಿದ್ದು ಕಂದಗಲ್. ಚಿದಾನಂದ್ ಮಠಪತಿ ಉದಯ ಸುಲ್ತಾನಪುರ. ಶರಣಯ್ಯ ಸ್ವಾಮಿ ಇದ್ದರು.