
ಕಲಬುರಗಿ:ಫೆ.1: ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಜಲಮೂಲ ನದಿಯಾದ ಭೀಮಾ ನದಿಯಿಂದ ನಿಂತ ನೀರು ಕಲುಷಿತವಾಗಿ ಬರುತ್ತಿರುವ ಕಾರಣ ಸರಡಗಿಯ ಜಾಕ್‍ವೆಲ್ ಪಂಪ್‍ಹೌಸ್ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ರಿಪೇರಿ ಮಾಡಲಾಗಿದ್ದು, ನಾಳೆ ನಗರ ನೀರು ಸರಬರಾಜು ಮಾಡಲಾಗುತ್ತದೆ ಎಂದು ಮಹಾನಗರ ಪಾಲಿಕೆ ಮಹಾಪೌರ ವರ್ಷಾ ರಾಜೀವ ಜಾನೆ ಅವರು ಹೇಳಿದರು.
ನಗರದಲ್ಲಿ ಶನಿವಾರದಂದು ಮಹಾನಗರ ಪಾಲಿಕೆಯ ಕೇಂದ್ರ ಕಛೇರಿಯ ಪೂಜ್ಯ ಮಹಾಪೌರರ ಸದನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ವಾರದಿಂದ ಮಶಿನರಿ ಕೆಟ್ಟಿರುವುದರಿಂದ ಶುದ್ದ ಕುಡಿಯುವ ನೀರು ಪೂರೈಸಲು ಆಗಿರುವುದಿಲ್ಲ ಎಂದು ತಿಳಿಸಿದರು.
ನಗರ ಹಲವು ಭಾಗದಲ್ಲಿ ಪೈಪ್‍ಲೈನ್ ಕೆಟ್ಟಿರುತ್ತವೆ ಪೈಪ್‍ಲೈನಗಳ ದುರಸ್ತಿ ಈಗಾಗಲೇ ರೂ 8 ಕೋಟಿ ಖರ್ಚು ಆಗಲಿದ್ದು, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಜಿ ಅವರೊಂದಿಗೆ ಈಗಾಗಲೇ ಮಾತನಾಡಿದ್ದೇನೆ ಅವರು ಸಹಕರಿಸಲು ತಿಳಿಸಿದ್ದಾರೆ ಎಂದರು. ಶುದ್ಧ ಕುಡಿಯುವ ನೀರು ಪೂರೈಸಲು ಅನುದಾನ ನೀಡಿದ್ದಾರೆ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.
ಮಶಿನರಿ ತೊಂದರೆಯಿಂದ ಕಳೆದ ಒಂದು ವಾರದಿಂದ ನಗರದಲ್ಲಿ ಸರಿಯಾಗಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ, 90 ರಷ್ಟು ಮಶಿನರಿ ದುರಸ್ಥಿ ಮಾಡಲಾಗಿದೆ ಇಂದಿನಿಂದ ಸರಿಯಾಗಿ ನೀರು ಸರಬರಾಜು ಮಾಡಲು ಸಿದ್ಧರಾಗಿದ್ದೇವೆ ಎಂದರು.
ದುಷ್ಕರ್ಮಿಗಳಿಂದ ನಾಗನಳ್ಳಿ ಕ್ರಾಸ ಸಮೀಪ ಟ್ಯಾಂಕರ್ ಗಳಿಂದ ಇಂಪೆÇ್ಲಎಂಟ್ ಕೆಮಿಕಲ್ ಹಾಕಿದ್ದು ಸುತ್ತ-ಮುತ್ತಲಿನ ಜನರಿಗೆ ತೊಂದರೆ ಆಗುವುದು ಎಂದು ತಿಳಿದು ಅವರ ಮೇಲೆ ಕ್ರಮಕೈಗೊಳ್ಳುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೆÇಲೀಸ ಇಲಾಖೆಗೆ ದೂರು ನೀಡಲಾಗಿದೆ ಎಂದರು.
ಮಹಾನಗರ ಪಾಲಿಕೆಯ ಆಯುಕ್ತ ಅವಿನಾಶ ಶಿಂಧೆ ಅವರು ಮಾತನಾಡಿ, ನಗರಕ್ಕೆ ನೀರು ಸರಬರಾಜು ಮಾಡುವ ಜಲಮೂಲ ನದಿಯಾದ ಭೀಮಾ ನದಿಯಿಂದ ನಿಂತ ನೀರು ಕಲುಷಿತವಾಗಿ ಬರುತ್ತಿರುವ ಕಾರಣ ಸರಡಗಿಯ ಜಾಕ್‍ವೆಲ್ ಪಂಪ್‍ಹೌಸ್ ಸ್ಥಗಿತಗೊಳಿಸಲಾಗಿದ್ದು, ಜಾಕ್‍ವೆಲ್ ಪಂಪ್‍ಹೌಸ್ ದುರಸ್ಥಿ ಮಾಡಲಾಗಿದೆ ಇಂದಿನಿಂದ ನೀರು ಸರಬರಾಜು ಮಾಡಲಾಗುತ್ತದೆ ಎಂದರು.
ಒಂದು ವಾರದಿಂದ ನೀರು ಪೂರೈಸಲು ಸಾಧ್ಯವಾಗದ ಕಾರಣ ನಗರದಲ್ಲಿ ನೀರಿನ ಸಮಸ್ಯೆ ಇದ್ದಲ್ಲಿ ್ಮಟ್ಯಾಂಕರ್ ಮುಖಾಂತರ ನೀರು ಪೂರೈಸಿದೇವೆ ಎಂದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅಮೃತ ಯೋಜನೇ ಅಡಿಯಲ್ಲಿ ಒಟ್ಟು 2 ಕೋಟಿ ಹಣ ಬಿಡುಗಡೆ ಮಾಡಲಾಗಿದ್ದು. ಇದರಲ್ಲಿ ಕೊಳವೆಬಾವಿ ಕೊರೆಯಿಸಬಹುದು, ಬೋರ್‍ವೆಲ್‍ಗಳ ದುರಸ್ಥಿ ಮಾಡಬಹುದು. ಪೈಪಲೈನ ಮುಖಾಂತರ ನೀರು ಸರಾಗವಾಗಿ ಹೋಗುವಂತೆ ಮಾಡುವುದು, ಇದಲ್ಲದೇ ನಗರದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬಹುದು ಎಂದು ಹೇಳಿದರು.
ಬೇಸಿಗೆ ಸಮಯದಲ್ಲಿ 5 ಕೋಟಿ ಅನುದಾನದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಲು ಇಡಲಾಗಿದೆ. ಬೇಸಿಗೆ ಸಮಯದಲ್ಲಿ ನೀರು ಸರಬರಾಜು ಮಾಡಲು ಸಮಸ್ಯೆ ಆಗುತ್ತೆ ಎಂದು ಮಹಾರಾಷ್ಟ್ರದ ಉಜ್ಜಯಿನಿ ಜಲಾಶಯದಿಂದ ಭೀಮಾನದಿಗೆ ಮೂರು ಹಂತದಲ್ಲಿ 1.7 ಟಿ.ಎಂ.ಸಿ ನೀರು ಬಿಡುವಂತೆ ಪತ್ರ ಬರೆಯಲಾಗುವುದು ಎಂದು ಹೇಳಿದರು.

























