
ವಾಷಿಂಗ್ಟನ್, ಫೆ.೨೫- ಜಗತ್ತಿನ ವಿವಿದ ದೇಶಗಳ ಮೇಲಿನ ಸುಂಕ ಸಂಬಂಧಿಸಿದ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ’ದುರದೃಷ್ಟಕರ’ ಎಂದು ಕರೆದಿದ್ದು ಕಳೆದ ಒಂದು ವರ್ಷದ ಅವಧಿಯಲ್ಲಿ ಅಮೆರಿಕದ ಆರ್ಥಿಕತೆ ಮತ್ತಷ್ಟು ಬಲಿಷ್ಠವಾಗಿದ್ದು ಯುಗಾಂತರಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಸುಂಕ ಹೇರಿಕೆ ಸಂಬಂದ ಅಮೆರಿಕ ವಿರುದ್ದ ಜಗತ್ತಿನ ಅನೇಕ ದೇಶಗಳು ತಿರುಗಿ ಬಿದ್ದಿದ್ದರೂ ದೇಶ ಹಿತದೃಷ್ಠಿಯಿಂದ ಅಮೆರಿಕ ವಿದಿಸಿರುವ ಸುಂಕದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ
ಎರಡನೇ ಅವಧಿಯಲ್ಲಿ ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ವಾಷಿಂಗ್ಟನ್‌ನಲ್ಲಿರುವ ಅಮೆರಿಕದ ಕ್ಯಾಪಿಟಲ್‌ನ ಹೌಸ್ ಚೇಂಬರ್‌ನಲ್ಲಿ ಕಾಂಗ್ರೆಸ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು
ದೇಶದಲ್ಲಿ ಪ್ರಸ್ತುತ ಇರುವ ಆದಾಯ ತೆರಿಗೆ ವ್ಯವಸ್ಥೆಯನ್ನು ಬದಲಿಸುವ ಮೂಲಕ ಅಮೆರಿಕನ್ನರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸುಂಕಗಳು ಸಹಾಯ ಮಾಡುತ್ತವೆ ಎಂದು ಹೇಳಿದ್ದಾರೆ.
“ವಿದೇಶಗಳು ಪಾವತಿಸುವ ಸುಂಕಗಳು, ಹಿಂದಿನಂತೆ, ಆಧುನಿಕ ಆದಾಯ ತೆರಿಗೆ ವ್ಯವಸ್ಥೆಯನ್ನು ಗಣನೀಯವಾಗಿ ಬದಲಾಯಿಸುತ್ರಿದೆ. ಮತ್ತು ಪ್ರೀತಿಸುವ ಜನರಿಂದ ದೊಡ್ಡ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಜಗತ್ತಿನ ಮೇಲೆ ವಿಧಿಸಿದ ಸುಂಕದ ಹೊರೆ ಕಡಿಮೆ ಮಾಡಿದೆ ಎಂದಿದ್ದಾರೆ.
ಸುಂಕಗಳ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ದುರದೃಷ್ಟಕರ ಎಂದು ಹೇಳಿದ ಅವರು ಬಹುತೇಕ ಎಲ್ಲಾ ಇತರ ದೇಶಗಳು ಮತ್ತು ಸಂಸ್ಥೆಗಳು ಈಗಾಗಲೇ ಮಾಡಿಕೊಂಡಿರುವ ಒಪ್ಪಂದವನ್ನು ಉಳಿಸಿಕೊಳ್ಳಲು ಆಸಕ್ತಿ ಹೊಂದಿವೆ . ಹೀಗಿದ್ದರೂ “ಸುಪ್ರೀಂ ಕೋರ್ಟ್‌ನ ತೀರ್ಪು ದುರದೃಷ್ಟಕರ ಎಂದು ಮಾಹಿತಿ ನೀಡಿದ್ದಾರೆ
ದೇಶದ ಆರ್ಥಿಕ ಪ್ರಗತಿಗೆ, ಇತಿಹಾಸದಲ್ಲಿಯೇ ಅತಿ ದೊಡ್ಡ ಬದಲಾವಣೆ ಸುಂಕ ಹೇರಿಕೆಯಾಗಿದೆ ಎಂದ ನಾಲ್ಕು ವರ್ಷಗಳ ಮೊದಲೇ ೫೦,೦೦೦ ಅಂಕಗಳನ್ನು ಮುರಿದು, ಎಸ್ ಅಂಡ್ ಪಿ ೭,೦೦೦ ಅಂಕಗಳನ್ನು ತಲುಪಿ, ಹಲವು ವರ್ಷಗಳ ಕಾಲ ಹಾಗೆ ಮಾಡಲು ಸಾಧ್ಯವಾಗದಿದ್ದ ಕಾರಣ, ಸುಂಕಗಳು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ” ಎಂದು ಹೇಳಿದ್ದಾರೆ
ಜಗತ್ತಿನ ಮೇಲೆ ಸುಂಕ ಏರಿಕೆ ದೇಶಕ್ಕೆ ಆರ್ಥಿಕವಾಗಿ ಮತ್ತು ರಾಷ್ಟ್ರೀಯ ಭದ್ರತಾ ಆಧಾರದ ಮೇಲೆ ಉತ್ತಮ ವ್ಯವಹಾರಗಳನ್ನು ಮಾಡಲು ನೂರಾರು ಶತಕೋಟಿ ಡಾಲರ್ ಸಂಗ್ರಹ ಮಾಡಿದೆ. ಇದು ಅಮೆರಿಕದ ಅಭಿವೃದ್ದಿಗೆ ಪೂರಕವಾಗಲಿದ್ದು ಜನರ ಮೇಲಿನ ತೆರಿಗೆ ಹೊರೆ ಕಡಿಮೆ ಮಾಡಲಿದೆ ಎಂದಿದ್ದಾರೆ.
ನಮ್ಮ ಒಕ್ಕೂಟದ ಸ್ಥಿತಿ ಬಲಿಷ್ಠವಾಗಿದೆ” ಎಂದು ಆರ್ಥಿಕತೆ ಗಟ್ಟಿಯಾಗಿದೆ.ಈ ಮೂಲಕ. “ಯುಗಾಂತರಗಳಿಗೂ ಒಂದು ತಿರುವು” ಎಂದು ಕರೆದಿದ್ದಾರೆ
ಅಧಿಕಾರ ವಹಿಸಿಕೊಂಡ ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ಅಮೆರಿಕನ್ನರು ಅವರ ಕಾರ್ಯಕ್ಷಮತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆಗಳು ಹೇಳಿದ ನಡುವೆ ಸಂಸತ್ ಉದ್ದೇಶಿಶಿ ಭಾಷಣ ಮಾಡುವ ಮೂಲಕ ಸುಂಕ ಏರಿಕೆ ಸಮರ್ಥಿಸಿ ಕೊಂಡಿದ್ದಾರೆ




























