
ಕಲಬುರಗಿ :ಮೇ.26:ರಾಮನಗರದಲ್ಲಿ ಮನಸ್ವಿ ಸಾಂಸ್ಕøತಿಕ ನಾಟ್ಯ ಕಲಾವಿದರ ಸಂಘದವತಿಯಿಂದ ಆಯೋಜಿಸಿದ್ದ ಬೇಸಿಗೆ ಶಿಬಿರ ಮುಕ್ತಾಯ ಸಮಾರಂಭ ರವಿವಾರ ಮಧ್ಯಾನ್ಹ ಜರುಗಿತು.
ಮುಖ್ಯ ಅತಿಥಿಯಾಗಿ ಸಂತೋಷ ಕುಮಾರ, ಜಗದೀಶ ಎಂ ಕಾಂಬಳೆ, ಪದ್ಮಾವತಿ ಪತಂಗೆ, ಮಹಾದೇವಿವ ಭಲಖೇಡ,ಸಂತೋಷ ಕಾಂಬಳೆ,ಜ್ಯೋತಿ ಹಾಗೂ ಸಂಘದ ಅಧ್ಯಕ್ಷ ವಿಕ್ರಮ ಗೋಕಲೆ ಹಾಗೂ ಇತರರು ಉಪಸ್ಥಿತರಿದ್ದರು. ವಿಶಾಲಾಕ್ಷಿ ಮಾಯಣ್ಣವರ ಅಧ್ಯಕ್ಷತೆವಹಿಸಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪ್ರಶಸ್ತಿ ಸಮಾರಂಭ ಜರುಗಿತು.