Home ಜಿಲ್ಲೆ ಜಂಬಗಿ ಸೇತುವೆ ಮೇಲೆ ಆತ್ಮಹತ್ಯೆ ಯತ್ನ – ಯುವಕರ ಸಾಹಸದಿಂದ ಜೀವ ಉಳಿವು

ಜಂಬಗಿ ಸೇತುವೆ ಮೇಲೆ ಆತ್ಮಹತ್ಯೆ ಯತ್ನ – ಯುವಕರ ಸಾಹಸದಿಂದ ಜೀವ ಉಳಿವು

ಜಮಖಂಡಿ:ಏ.2: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಟಕ್ಕೋಡ ಗ್ರಾಮದ ಯುವಕನೊಬ್ಬ ಜಂಬಗಿ ಸೇತುವೆ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಜಮಖಂಡಿ ನಗರದ ಯುವಕರಾದ ಆಸಿಫ್ ಝಂಡೆ, ಅಮೀರ್ ಸಲಗರ ಸೇರಿದಂತೆ ಇತರರು ತಕ್ಷಣವೇ ಚಾಣಾಕ್ಷತೆಯಿಂದ ಸ್ಪಂದಿಸಿ, ಯುವಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯುವಕರ ತ್ವರಿತ ಕ್ರಮ ಮತ್ತು ಧೈರ್ಯದಿಂದ ಒಂದು ಅಮೂಲ್ಯ ಜೀವ ಉಳಿದಿದ್ದು, ಸ್ಥಳೀಯರು ಅವರ ಮಾನವೀಯತೆ ಹಾಗೂ ಸಾಹಸವನ್ನು ಶ್ಲಾಘಿಸಿದ್ದಾರೆ.