ವಿಜಯಪುರದಲ್ಲಿ ಮಾ. ೩ ರಿಂದ ೮ರ ವರೆಗೆ ಸುದರ್ಶನ ಕ್ರಿಯಾ ಶಿಬಿರ

ಸಂಜೆವಾಣಿ ವಾರ್ತೆ,
ವಿಜಯಪುರ, ಮಾ.೨:ಆರ್ಟ್ ಆಫ್ ಲಿವಿಂಗ್ ವತಿಯಿಂದ ವಿಜಯಪುರದಲ್ಲಿ ಸಂತಸದ ಕಾರ್ಯಕ್ರಮ ಹಾಗೂ ಸುದರ್ಶನ ಕ್ರಿಯಾ ಶಿಬಿರವನ್ನು ಸೋಮವಾರ ಮಾರ್ಚ್ ೦೨ ರಿಂದ ೦೮ ರ ವರೆಗೆ ಹಮ್ಮಿಕೊಳ್ಳಲಾಗಿದೆ.
ಯೋಗ, ಧ್ಯಾನ, ಪ್ರಾಣಾಯಾಮ, ವಿಶೇಷವಾಗಿ ಸುದರ್ಶನ ಕ್ರಿಯಾ, ಆರೋಗ್ಯ ಒತ್ತಡರಹಿತ ಜೀವನ, ಮಾನಸಿಕ ಸದೃಢತೆ ಹಾಗೂ ಜೀವನ ಕಲೆ ಸೂತ್ರಗಳನ್ನು ಒಳಗೊಂಡಿರುವ ಈ ಕಾರ್ಯಕ್ರಮವು ಆರ್ಟ್ ಆಫ್ ಲಿವಿಂಗ್ ನ ನುರಿತ ಹಿರಿಯ ಅನುಭವಿ ಗುರುಗಳಾದ ಡಾ. ಬಿ ಎಂ. ಪಾಟೀಲ ಗುರೂಜಿ ಅವರ ನೇತೃತ್ವದಲ್ಲಿ ಬೆಳಗ್ಗೆ ೫:೩೦ ರಿಂದ ೮:೦೦ ವರೆಗೆ ಹಾಗೂ ಸಂಜೆ ೬:೦೦ ರಿಂದ ೮:೩೦ ವರೆಗೆ ಪ್ರತ್ಯೇಕ ಎರಡು ಬ್ಯಾಚುಗಳಲ್ಲಿ ಸಂತ ಶ್ರೀ ಸೇವಾಲಾಲ್ ಮತ್ತು ದುರ್ಗಾದೇವಿ ದೇವಸ್ಥಾನ ಎಕ್ಸಲೆಂಟ್ ಕೋಚಿಂಗ್ ಸೆಂಟರ್ ಹತ್ತಿರ
ಆದರ್ಶ ನಗರ, ವಿಜಯಪುರದಲ್ಲಿ ಜರುಗುವುದು. ಇದಕ್ಕೆ ಪೂರಕವಾಗಿ ಮಾ. ೨ ರಂದು ಸಂಜೆ ೬ ಗಂಟೆಗೆ ಸತ್ಸಂಗ, ಶಿಬಿರದ ಪರಿಚಯ ಕಾರ್ಯಕ್ರಮ, ಹೆಸರು ನೋಂದಣಿ ಮಾಡಿಕೊಳ್ಳಲಾಗುವುದು.
ಹೆಚ್ಚಿನ ವಿವರಗಳಿಗೆ ಸಹನಾ ಪಾಟೀಲ, ಶೋಭಾ ಪಾಟೀಲ, ಎನ್.ಡಿ.ಮಸೂತಿ, ಚಂದ್ರಶೇಖರ ಸಿಂಧೂರ ೮೦೫೦೨೮೦೫೮೦,೯೪೮೦೭ ೮೦೦೪೨ ಸಂಖ್ಯೆಗೆ ಸಂಪರ್ಕಿಸುವAತೆ ಪ್ರಕಟಣೆಯಲ್ಲಿ ಕೋರಲಾಗಿದೆ.