Home ಜಿಲ್ಲೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಎಸ್. ಯು.ಸಿ.ಐ ನಿಯೋಗ ಮನವಿ

ಬೀದಿ ನಾಯಿಗಳ ನಿಯಂತ್ರಣಕ್ಕೆ ಎಸ್. ಯು.ಸಿ.ಐ ನಿಯೋಗ ಮನವಿ

ಸಂಜೆವಾಣಿ ವಾರ್ತೆ,
ವಿಜಯಪುರ, ಫೆ. ೭: ನಗರದಲ್ಲಿ ಕಣ್ಣು ನೊಣ ಹಾಗೂ ಬೀದಿ ನಾಯಿಗಳ ನಿಯಂತ್ರಣಕ್ಕೆ ಒತ್ತಾಯಿಸಿ ಮಹಾನಗರ ಪಾಲಿಕೆ ಆಯುಕ್ತರಿಗೆ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಸಮಿತಿಯಿಂದ ಶುಕ್ರವಾರ ಮನವಿ ಪತ್ರ ಸಲ್ಲಿಸಲಾಯಿತು.
ಪಾಲಿಕೆ ಅಭಿವೃದ್ಧಿ ವಿಭಾಗದ ಉಪ ಆಯುಕ್ತರು ಮನವಿ ಸ್ವೀಕರಿಸಿ, ಈಗಾಗಲೇ ಬೀದಿ ನಾಯಿಗಳಿಗೆ ಸಂತಾನೋತ್ಪತ್ತಿ ಹರಣ ಶಸ್ತ್ರ ಚಿಕಿತ್ಸೆ ಸುಮಾರು ೮೦೦೦ ನಾಯಿಗಳಿಗೆ ಏಜೆನ್ಸಿ ಮೂಲಕ ಮಾಡಿಸಲಾಗಿದೆ. ಇನ್ನುಳಿದ ನಾಯಿಗಳಿಗೆ ಈ ತಿಂಗಳ ಒಳಗಾಗಿ ಟೆಂಡರ್ ಕರೆದು ಶಸ್ತ್ರ ಚಿಕಿತ್ಸೆಗೆ ಕ್ರಮ ಕೈಗೂಳ್ಳಲಾಗುವುದು. ಬಿಡಾಡಿ ದನಗಳನ್ನು ರಸ್ತೆ ಮೇಲೆ ಬರದ ಹಾಗೆ ಕ್ರಮ ಕೈಗೊಳ್ಳಲಾಗುವುದು. ಕಳೆದ ೧೫ ದಿನಗಳಿಂದ ಸಾರ್ವಜನಿಕರಿಗೆ, ಶಾಲಾ , ಕಾಲೇಜ ವಿದ್ಯಾರ್ಥಿಗಳ, ಮಕ್ಕಳಿಗೂ ಪೀಡಿಸುತ್ತಿರುವ ಕಣ್ಣು ನೊಣಗಳ ಹಾವಳಿ ಕುರಿತು ಚರ್ಚಿಸಲಾಯಿತು. ಈ ಸಮಸ್ಯೆಯನ್ನು ಸಂಬAಧದಪಟ್ಟ ಆರೋಗ್ಯಧಿಕಾರಿಗಳಿಗೆ ಪಾಗಿಂಗ್ (ಔಷಧ ಸಿಂಪರಣೆ ) ಮಾಡಿ ನಿಯಂತ್ರಿಸಲು ಸೂಚಿಸುತ್ತೇನೆ, ಎಂದು ಭರವಸೆ ನೀಡಿದರು.
ಈ ನಿಯೋಗದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ. ಭಗವಾನರೆಡ್ಡಿ, ಎಸ್. ಎಸ್. ಬಣಜಗೇರ, ಅಕ್ರಂ ಮಾಶ್ಯಾಳಕರ , ಸಿದ್ಧಲಿಂಗ ಬಾಗೇವಾಡಿ, ಶಿವಬಾಳಮ್ಮ ಕೊಂಡಗೂಳಿ, ಅಭಿವುಲ್ಲಾ ಮಾಶ್ಯಾಳಕರ, ಲಲಿತಾ ಬಿಜ್ಜರಗಿ, ಶಿವರಂಜನಿ, ಮಲ್ಲಿಕಾರ್ಜುನ ಹೆಚ್.ಟಿ. ಮುಂತಾದವರು ಇದ್ದರು.