
ಕಲಬುರಗಿ : ವಿದ್ಯಾಭಂಡಾರಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರ ಪ್ರಥಮ ಪುಣ್ಯಸ್ಮರಣೋತ್ಸವದ ಅಂಗವಾಗಿ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯವು ಮ್ಯಾರಥಾನ್ ಓಟ ಯಶಸ್ವಿಯಾಗಿ ನಡೆಸಿತು.
ಮಂಗಳವಾರ ನಡೆದ ಈ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ, ಶ್ರೀನಿವಾಸ ಸರಡಗಿಯ ಮಹಾಲಕ್ಷ್ಮೀ ಶಕ್ತಿಪೀಠದ ಪೂಜ್ಯ ಅಪ್ಪರಾವ ದೇವಿ ಮುತ್ಯ, ಖ್ಯಾತ ವೈದ್ಯರಾದ ಡಾ.ನಿರಂಜನ್ ವ್ಹಿ. ನಿಷ್ಠಿ, ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವೇಶ್ವರ ಸಂಸ್ಥಾನದ ಆಡಳಿತಾಧಿಕಾರಿ ಡಾ.ಅಲ್ಲಮಪ್ರಭು ದೇಶಮುಖ, ಶರಣಬಸವ ವಿವಿಯ ಕುಲಪತಿ ಡಾ.ಅನಿಲಕುಮಾರ ಬಿಡವೆ, ರಾಜಕೀಯ ಮುಖಂಡ ಶ್ರೀಕಾಂತ ಮಹಾಜನ ಮತ್ತಿತರರು ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿದರು.
ನಗರದ ವಿವಿಧ ಸ್ಥಳಗಳಾದ ಬುದ್ದಮಂದಿರ, ಕೋಟನೂರ ಮಠ, ಸ್ವಾಮಿ ಸಮರ್ಥ ಮತ್ತು ಆಳಂದ ರಸ್ತೆಯಲ್ಲಿರುವ ವಿಶ್ವಾರಾಧ್ಯ ದೇವಸ್ಥಾನದಿಂದ ಆರಂಭವಾದ ಮ್ಯಾರಥನ ಜಗತ್ ಸರ್ಕಲ್ದಿಂದ ಶರಣಬಸವೇಶ್ವರ ದೇವಸ್ಥಾನದವರೆಗೆ ನಡೆಸಲಾಯಿತು. ಶರಣಬಸವಶ್ವರ ವಿದ್ಯಾವರ್ಧಕ ಸಂಘ ಶಾಲಾ-ಕಾಲೇಜುಗಳ ಪ್ರಾಚಾರ್ಯರು, ದೈಹಿಕ ಶಿಕ್ಷಣ ನಿರ್ದೇಶಕರು, ಬೋಧಕ, ಬೋಧಕೇತರ ಸಿಬ್ಬಂದಿಯವರು, ಸುಮಾರು ಎರಡರಿಂದ ಮೂರು ಸಾವಿರ ವಿದ್ಯಾರ್ಥಿಗಳು ಹಾಗೂ ಖ್ಯಾತ ಉದ್ಯಮಿಗಳು ಭಾಗವಹಿಸಿದ್ದರು.























