
ಹುಮನಾಬಾದ್ : ಫೆ.21:ನಾಗರಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮತ್ತು ಸತತ ಪ್ರಯತ್ನ ಕೈಗೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದರು.
ನಗರದ ನಗರೇಶ್ವರ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಲೆಯ ನೂತನ ಕಟ್ಟಡದ ವಾಸ್ತು ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿತ್ಯ ಜೀವನದಲ್ಲಿ ಪಾಲಕ ಪೆÇೀಷಕರು ಅನೇಕ ಸಮಸ್ಯೆಗಳನ್ನು ಎದುರಿಸಿ, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜತೆಗೆ ಉತ್ತಮ ಸಂಸ್ಕಾರಗಳನ್ನು ಕಲಿಸಿಕೊಡಬೇಕು. ಇದರಿಂದಾಗಿ ವೃದ್ಧಾಪ್ಯದಲ್ಲಿ ಪಾಲಕ ಮತ್ತು ಪೆÇೀಷಕರು ವೃದ್ಧಾಶ್ರಮಕ್ಕೆ ಹೋಗುವ ಪರಿಸ್ಥಿತಿ ಬರುವುದೇ ಇಲ್ಲ ಎಂದು ತಿಳಿಸಿದರು.
ಕನ್ನಿಕಾ ಪರಮೇಶ್ವರಿ ಶಿಕ್ಷಣ ಸಂಸ್ಥೆಯ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಮಾಜಿ ಸಚಿವ ಬಸವರಾಜ ಪಾಟೀಲ್ ಅವರು ಸೇರಿ ನನ್ನ ಆಡಳಿತ ಅವಧಿಯಲ್ಲಿ ಎಲ್ಲ ತರಹದ ಸಹಕಾರ ನೀಡಲಾಗಿದೆ. ಜತೆಗೆ ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ್ ಹಾಗೂ ಭೀಮರಾವ ಪಾಟೀಲ್ ಅವರು ಕೂಡಾ ತಮ್ಮ ಶಿಕ್ಷಣ ಸಂಸ್ಥೆಗೆ ಅನೇಕ ಸೌಲಭ್ಯಗಳನ್ನು ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಾಲೆಗಳು ನಡೆಸುವುದು ಬಹಳ ಕಷ್ಟಕರ ಸಂಗತಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಗರೇಶ್ವರ ಶಾಲೆ ಉತ್ತಮವಾಗಿ ಬೆಳಸುವ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಬಹುದೊಡ್ಡ ಸಾಧನೆಯಾಗಿದೆ. ಹೀಗಾಗಿ ಈ ಶಾಲೆಯ ಅಭಿವೃದ್ಧಿಗೆ ಇಬ್ಬರು ಎಂಎಲ್ಸಿಗಳು ಸೇರಿ ಒಟ್ಟು 6 ಲಕ್ಷ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್, ನಾಗರಾಜ ರಘೋಜಿ, ದತ್ತಕುಮಾರ ಚಿದ್ರಿ, ಬಾಲಚಂದ್ರ ಜಾಜಿ, ಲಕ್ಷ್ಮಣ ಹಣಕುಣಿ, ಜಯಪಾಲ ಗುಪ್ತಾ, ದೇವದತ್ತ ಉಪ್ಪಾಲಿ, ವೆಂಕಟ ಕೊಟರಗಿ, ಸಂಧ್ಯಾರಾಣಿ ರಘೋಜಿ, ನಾರಾಯಣ ಚಿದ್ರಿ, ಸಂಗಪ್ಪ ರಘೋಜಿ, ಶ್ರೀನಿವಾಸ ರಘೋಜಿ, ಪ್ರೇಮಕುಮಾರ ಜಾಜಿ, ನಿರ್ಮಲಾ ರಾಯಚೂರಕರ್, ಸುಧೀಂದ್ರ ಗಾದಾ, ಪಾಮಯ್ಯ ಗಾದಾ ಸೇರಿ ಅನೇಕರಿದ್ದರು.
ನಗರೇಶ್ವರ ಶಾಲೆಯ ಅಭಿವೃದ್ಧಿಗೆ ಇಬ್ಬರು ಎಂಎಲ್ಸಿಗಳು ತಮ್ಮ ಅನುದಾನದಲ್ಲಿ ತಲಾ 3 ಲಕ್ಷ ಸೇರಿ ಒಟ್ಟು 6 ಲಕ್ಷ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಅವರಿಗೆ ನಾನು ವಯಕ್ತಿಕವಾಗಿ ಒತ್ತಾಯಿಸಿ, ಇಬ್ಬರು ಕಡೆಯಿಂದ ಸೇರಿ ಒಟ್ಟು 8 ಲಕ್ಷ ಅನುದಾನ ಕೊಡಿಸುತ್ತೇನೆ.
ರಾಜಶೇಖರ ಪಾಟೀಲ್
ಮಾಜಿ ಸಚಿವ, ಹುಮನಾಬಾದ್



























