Home ಜಿಲ್ಲೆ ಕೆಲಸ ಬೇಕಿದ್ದರೆ ಗ್ರಾಪಂಗೆ ನಮೂನೆ-೬ ಸಲ್ಲಿಸಿ

ಕೆಲಸ ಬೇಕಿದ್ದರೆ ಗ್ರಾಪಂಗೆ ನಮೂನೆ-೬ ಸಲ್ಲಿಸಿ


ರೋಣ,ಅ.೬: ಬರಗಾಲದ ಸಮಯದಲ್ಲಿ ಕೆಲಸ ಇಲ್ಲಾ ಅಂತಾ ಯಾರೂ ಚಿಂತಗೆ ಒಳಗಾಗಬೇಡಿ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಉದ್ಯೋಗದ ನಿರೀಕ್ಷೆ ಯಲ್ಲಿರುವ ಕುಟುಂಬಗಳು ನಿಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಮೂನೆ-೬ ಸಲ್ಲಿಸುವ ಮೂಲಕ ತಮ್ಮ ಕೆಲಸದ ಬೇಡಿಕೆಯನ್ನು ದಾಖಲಿಸಬಹುದು.

ಈ ಮೂಲಕ ಯಾವ ಕುಟುಂಬಕ್ಕೆ ಕೆಲಸದ ಅವಶ್ಯಕತೆ ಇದೆ ಎಂಬುದು ಅಧಿಕೃತವಾಗಿ ದಾಖಲಾಗಲಿದ್ದು, ಅದರ ಆಧಾರದ ಮೇಲೆ ಉದ್ಯೋಗ ಕಲ್ಪಿಸುವ ಪ್ರಕ್ರಿಯೆ ಕೈಗೊಳ್ಳಲು ಸಾಧ್ಯವಾಗಲಿದೆ ಅಂತಾ ರೋಣ ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಹೇಳಿದರು..

ಹೊಸಳ್ಳಿ ಗ್ರಾಮ ಪಂಚಾಯಿತಿ ಯಲ್ಲಿ ನಡೆಯುತ್ತಿರುವ ಕೆರೆ ಪುನಶ್ಚೇತನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು ರೋಣ ತಾಲೂಕಿನ ೨೨ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಿಬಿಜಿ-ರಾಮ್-ಜಿ ಯೋಜನೆಯಡಿ ನಮೂನೆ-೬ ಅಭಿಯಾನ ನಡೆಯುತ್ತಿದ್ದು, ಗ್ರಾಮೀಣ ಕುಟುಂಬಗಳಿAದ ಕೆಲಸದ ಬೇಡಿಕೆಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಅಭಿಯಾನ ಕೇವಲ ಅರ್ಜಿ ಸಂಗ್ರಹಿಸುವ ಕಾರ್ಯವಾಗದೆ, ಉದ್ಯೋಗದ ಅಗತ್ಯವಿರುವ ಕುಟುಂಬಗಳನ್ನು ಗುರುತಿಸಿ, ಅವರಿಗೆ ಲಭ್ಯವಿರುವ ಕಾಮಗಾರಿಗಳಲ್ಲಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಡೆಯುತ್ತಿದೆ ಎಂದರು..

ವಿಬಿಜಿ-ರಾಮ್-ಜಿ ಯೋಜನೆಯಡಿ ಕೆಲಸ ಪಡೆಯಲು ಮೊದಲು ಕೆಲಸದ ಬೇಡಿಕೆ ಸಲ್ಲಿಸುವುದು ಅಗತ್ಯ. ಗ್ರಾಮದಲ್ಲಿ ಯಾವ ಪ್ರಮಾಣದಲ್ಲಿ ಕಾರ್ಮಿಕರಿಗೆ ಕೆಲಸ ಬೇಕಿದೆ ಎಂಬುದನ್ನು ತಿಳಿದುಕೊಳ್ಳಲು ನಮೂನೆ-೬ ಪ್ರಮುಖ ಆಧಾರವಾಗಲಿದೆ. ಇದರ ಮೂಲಕ ಬೇಡಿಕೆಯಿರುವ ಪ್ರದೇಶಗಳಲ್ಲಿ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕೂಡ ಅನುಕೂಲವಾಗಲಿದೆ ಕೆಲಸ ಸಿಕ್ಕ ಬಳಿಕ ಪ್ರತಿಯೊಬ್ಬ ವ್ಯಕ್ತಿಗೆ ೩೮೨/ ರೂ ದೊರೆಯಲಿದೆ ಎಂದರು..

ಕೆರೆ, ನೀರು ಸಂರಕ್ಷಣಾ ಕಾಮಗಾರಿಗಳಿಗೆ ಆದ್ಯತೆ

ತಾಲೂಕಿನ ಗ್ರಾಮಗಳಲ್ಲಿ ನಡೆಯುತ್ತಿರುವ ಕೆರೆ ಪುನಶ್ಚೇತನ, ಹೂಳೆತ್ತುವಿಕೆ, ನೀರು ಸಂಗ್ರಹಣಾ ವ್ಯವಸ್ಥೆ ಸುಧಾರಣೆ, ಜಲ ಸಂರಕ್ಷಣೆ ಸೇರಿದಂತೆ ಗ್ರಾಮೀಣ ಪ್ರದೇಶಕ್ಕೆ ದೀರ್ಘಕಾಲಿಕವಾಗಿ ಉಪಯೋಗವಾಗುವ ಕಾಮಗಾರಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಸಾಧ್ಯತೆ ಇದೆ. ಇದರಿಂದ ಒಂದೆಡೆ ಕೂಲಿ ಕಾರ್ಮಿಕರಿಗೆ ಕೆಲಸ ದೊರೆತರೆ, ಮತ್ತೊಂದೆಡೆ ಗ್ರಾಮದ ಸಾರ್ವಜನಿಕ ಆಸ್ತಿಗಳ ಅಭಿವೃದ್ಧಿಗೂ ವೇಗ ಸಿಗಲಿದೆ.

ಕೆಲಸಕ್ಕಾಗಿ ಬೇರೆ ಊರುಗಳಿಗೆ ತೆರಳುವ ಪರಿಸ್ಥಿತಿ ಎದುರಿಸುತ್ತಿರುವ ಗ್ರಾಮೀಣ ಕುಟುಂಬಗಳಿಗೆ ತಮ್ಮದೇ ಗ್ರಾಮದ ವ್ಯಾಪ್ತಿಯಲ್ಲಿ ಉದ್ಯೋಗ ದೊರೆಯುವಂತೆ ಮಾಡುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ವಿಶೇಷವಾಗಿ ಕೃಷಿ ಕೆಲಸ ಕಡಿಮೆ ಇರುವ ಅವಧಿಯಲ್ಲಿ ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿ ಉದ್ಯೋಗ ದೊರೆತರೆ ಕುಟುಂಬಗಳ ಆದಾಯಕ್ಕೆ ನೆರವಾಗಲಿದೆ.

ಕೆಲಸ ಬೇಕಿದ್ದರೂ ಅರ್ಜಿ ಸಲ್ಲಿಸದೆ ಇರುವುದರಿಂದ ಬೇಡಿಕೆಯು ಅಧಿಕೃತವಾಗಿ ದಾಖಲಾಗುವುದಿಲ್ಲ. ಹೀಗಾಗಿ ಉದ್ಯೋಗದ ಅವಶ್ಯಕತೆ ಇರುವ ಕುಟುಂಬಗಳು ಯಾವುದೇ ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ತಮ್ಮ ಗ್ರಾಮ ಪಂಚಾಯಿತಿಗೆ ತೆರಳಿ ನಮೂನೆ-೬ ಸಲ್ಲಿಸಿ ಕೆಲಸದ ಬೇಡಿಕೆ ದಾಖಲಿಸಿಕೊಳ್ಳಬೇಕು ಎಂಬ ಸಂದೇಶವನ್ನು ಅಧಿಕಾರಿಗಳು ನೀಡಿದ್ದಾರೆ.

ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಅಭಿಯಾನಕ್ಕೆ ಹೆಚ್ಚಿನ ಸ್ಪಂದನೆ ದೊರೆಯುವ ನಿರೀಕ್ಷೆಯಿದ್ದು, ಗ್ರಾಮೀಣ ಕುಟುಂಬಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಾಲೂಕು ಪಂಚಾಯಿತಿ ವತಿಯಿಂದ ಮನವಿ ಸಹ ಮಾಡಲಾಗಿದೆ. ಈ ಸಂದರ್ಭದಲ್ಲಿ ಖಿಂ ಗುರುಲಿಂಗಯ್ಯ ಹಿರೇಮಠ, ಃಈಖಿ ಈರಣ್ಣ ದಳವಾಯಿ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ವಿಬಿಜಿ-ರಾಮ್-ಜಿ ಸಿಬ್ಬಂದಿಗಳು ಉಪಸ್ಥಿತರಿದ್ದರು…