ಸಂಜೆವಾಣಿ ವಾರ್ತೆ,
ವಿಜಯಪುರ , ಅ. ೨೨: ವಿಜಯಪುರ ಜಿಲ್ಲೆಯನ್ನು ಸಂವಿಧಾನದ ೩೭೧(ಜೆ) ಕಲಂ ವ್ಯಾಪ್ತಿಗೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಸಿಂದಗಿಯಲ್ಲಿ ಕಳೆದ ೧೯ ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ನಗರ ನಿವಾಸಿಗಳು ಹಾಗೂ ವಿದ್ಯಾರ್ಥಿಗಳು ಬೆಂಬಲ ವ್ಯಕ್ತಪಡಿಸಿದರು.
ನಗರದ ಶ್ರೀ ಬಸವೇಶ್ವರ ವೃತ್ತದ ಬಳಿ ರೈ.ಚ. ರೇವಡಿಗಾರ ಪ್ರತಿಷ್ಠಾನದ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟ ಸ್ಥಳಕ್ಕೆ ಭೇಟಿ ನೀಡಿದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಸ್ನೇಹಾ ದಸ್ಮಾ ಮಾತನಾಡಿ, ಡಾ. ಡಿ.ಎಂ. ನಂಜುAಡಪ್ಪ ವರದಿಯಲ್ಲಿ ವಿಜಯಪುರ ಜಿಲ್ಲೆಯನ್ನು ಅತ್ಯಂತ ಹಿಂದುಳಿದ ಪ್ರದೇಶವೆಂದು ಗುರುತಿಸಲಾಗಿದೆ. ಜಿಲ್ಲೆಗೆ ೩೭೧(ಜೆ) ಕಲಂ ಅನ್ವಯಿಸುವ ಎಲ್ಲ ಅರ್ಹತೆಗಳಿದ್ದರೂ, ಸೌಲಭ್ಯಗಳು ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಹೇಳಿದರು.
ಸಿಂದಗಿ, ಇಂಡಿ, ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿ ತಾಲೂಕುಗಳನ್ನು ೩೭೧(ಜೆ) ವ್ಯಾಪ್ತಿಗೆ ಸೇರಿಸಬೇಕು. ಈ ಬೇಡಿಕೆ ಈಡೇರುವವರೆಗೆ ನಡೆಯುವ ಹೋರಾಟಕ್ಕೆ ವಿದ್ಯಾರ್ಥಿಗಳು ಸಂಪೂರ್ಣ ಬೆಂಬಲ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಕುಮಾರಿ ದಾನೇಶ್ವರಿ ತಂಬಾಕೆ ಮಾತನಾಡಿ, ನಿಜಾಮರ ಆಡಳಿತದ ವಿರುದ್ಧ ಹೋರಾಡಿ ತ್ಯಾಗ ಮಾಡಿದ ಐತಿಹಾಸಿಕ ಹಿನ್ನೆಲೆ ವಿಜಯಪುರ ಜಿಲ್ಲೆ ಹೊಂದಿದೆ. ಆದರೂ ಶಿಕ್ಷಣ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಜಿಲ್ಲೆ ಹಿಂದುಳಿದಿದೆ. ನಂಜುAಡಪ್ಪ ವರದಿಯಲ್ಲಿ ೩೭೧(ಜೆ) ಅನ್ವಯಿಸುವ ಎಲ್ಲ ಅರ್ಹತೆಗಳಿದ್ದರೂ, ಸೂಕ್ತ ಕ್ರಮ ಕೈಗೊಳ್ಳದಿರುವುದು ವಿಷಾದನೀಯ. ಹೋರಾಟದ ಕಿಚ್ಚು ಆರಂಭವಾಗಿದ್ದು, ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲದು ಎಂದರು.
ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಸಂಗನಬಸವ ಬಿರಾದಾರ ಮಾತನಾಡಿ, ಹೈದರಾಬಾದ್ ವಿಮೋಚನೆಗಾಗಿ ಸಿಂದಗಿ ಭಾಗದವರು ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಹೋರಾಡಿದ್ದಾರೆ. ರಜಾಕಾರರ ವಿರುದ್ಧ ಸರ್ದಾರ್ ಶರಣಗೌಡ ಇನಾಮದಾರ, ಚನ್ನಬಸಪ್ಪ ಕುಳಗೇರಿ, ದೇವೇಂದ್ರಪ್ಪ ಮಾಸ್ತರ್ ಸೇರಿದಂತೆ ಹಲವರು ಹೋರಾಟ ನಡೆಸಿದ ದಾಖಲೆಗಳಿವೆ. ಈ ಐತಿಹಾಸಿಕ ಹಿನ್ನೆಲೆ ಹಾಗೂ ಹಿಂದುಳಿದ ಸ್ಥಿತಿಯನ್ನು ಪರಿಗಣಿಸಿ ಜಿಲ್ಲೆಯ ಅರ್ಹ ತಾಲೂಕುಗಳನ್ನು ೩೭೧(ಜೆ) ವ್ಯಾಪ್ತಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಶಿಕ್ಷಕ ಶ್ರೀಶೈಲಗೌಡ ಪಾಟೀಲ ಮಾತನಾಡಿ, ಪ್ರತಿಯೊಂದು ಹೋಬಳಿ ಮಟ್ಟದಲ್ಲೂ ಜನಾಂದೋಲನ ರೂಪುಗೊಳ್ಳಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಎಚ್ಚೆತ್ತುಕೊಂಡು ವಿಜಯಪುರ ಜಿಲ್ಲೆಯನ್ನು ೩೭೧(ಜೆ) ಕಲಂ ವ್ಯಾಪ್ತಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹೋರಾಟ ಸಮಿತಿ ಮುಖಂಡರು ಮಾತನಾಡಿ, ಜಿಲ್ಲೆಗೆ ೩೭೧(ಜೆ) ಸೌಲಭ್ಯ ಕಲ್ಪಿಸುವ ಕುರಿತು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ನಡೆಸಿ, ಅರ್ಹ ತಾಲೂಕುಗಳನ್ನು ಸೇರ್ಪಡೆಗೊಳಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿ.ಎಂ. ಬಿರಾದಾರ, ಮಹಾಂತೇಶ ಪಟ್ಟಣಶೆಟ್ಟಿ, ಸೋಮನಗೌಡ ಬಿರಾದಾರ, ಮಲ್ಲನಗೌಡ ಬ್ಯಾಕೋಡ, ಗೋಲ್ಲಾಳಪ್ಪಗೌಡ ಮಾಂಗಣಗೇರಿ, ವಿಶ್ವನಾಥ ಬಮ್ಮಣ್ಣಿ, ಕಾಳಣ್ಣ ಬಗಲಿ, ಬಸವರಾಜ ಐರೋಡಗಿ, ಪ್ರಕಾಶ ಗುಣಾರಿ, ಗುರುಗೌಡ ಬಿರಾದಾರ, ಸಿದ್ದು ಜಗತಿ, ಚೇತನಗೌಡ ಪಾಟೀಲ, ಶಂಕರ ಮಲ್ಲೇದ, ಶೈಲಜಾ ಸ್ಥಾವರಮಠ, ಎಂ.ಎA. ಹಂಗರಗಿ, ಪಂಡಿತ ಯಂಪೂರೆ, ಸಾಯಬಣ್ಣ ದೇವರಮನಿ, ಸಂಗಣ್ಣ ಬ್ಯಾಕೋಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾಳಿಕೋಟೆ: ಮನುಷ್ಯ ಜೀವನದಲ್ಲಿ ಎದುರಾಗುವ ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಎದೆಗುಂದದೇ, ಅನ್ಯ ಮಾರ್ಗದಲ್ಲಿ ನಡೆಯದೇ ದೇವರಲ್ಲಿ ಅಚಲ ನಂಬಿಕೆಯನಿಟ್ಟು ಸತ್ಯ ಶುದ್ಧ ಕಾಯಕ ಮಾಡಿದಾಗ ದೇವಿಯ ಕೃಪೆಯಾಗುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಅವರು ಹೇಳಿದರು.
ತಾಲೂಕಿನ ಕಲಕೇರಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಶ್ರೀ ದುರ್ಗಾದೇವಿ ಪುರಾಣ ಮಹಾಂಗಲೋತ್ಸವ ಮತ್ತು ಧರ್ಮಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾಡಿನಾದ್ಯಂತ ಶ್ರದ್ಧಾ ಭಕ್ತಿಯಿಂದ ನವರಾತ್ರಿ ಅಂಗವಾಗಿ ದೇವಿಯನ್ನು ಆರಾಧಿಸಲಾಗುತ್ತಿದ್ದು, ಬರಗಾಲದಿಂದ ತತ್ತರಿಸಿರುವ ಈ ನಾಡಿಗೆ ದೇವಿ ಕೃಪೆಯಿಂದ ಒಳ್ಳೆಯ ಮಳೆ, ಬೆಳೆಯಾಗಲಿ, ರೈತರ ಕಷ್ಟಗಳೆಲ್ಲ ದೂರವಾಗಲಿ, ಜನರ ಬದುಕು ಹಸನಾಗಲಿ, ಲೋಕ ಕಲ್ಯಾಣವಾಗಲಿ ಎಂದು ದುರ್ಗಾದೇವಿಯಲ್ಲಿ ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿಗಳು ಮತ್ತು ವಿಜಯಪುರ ಸಿಕ್ಯಾಬ್ ಮಹಿಳಾ ಪಿಯು ಕಾಲೇಜಿನ ಉಪನ್ಯಾಸಕರಾದ ಪ್ರೊ. ಉಮರಶರೀಫ ಕುಂಟೋಜಿ ಅವರು ಮಾತನಾಡಿ ದೇವಿಯ ಪುರಾಣದಲ್ಲಿ ಬರುವ ಅಸುರರ ಸಂಹಾರ ಅದು ನಮ್ಮ ದೇಹದಲ್ಲಿರುವ ಅರಿಷಡ್ವರ್ಗಗಳ ಸಂಹಾರವೇ ಆಗಿದ್ದು, ನಮ್ಮಲ್ಲಿರುವ ದುರ್ಗುಣಗಳನ್ನು ಸಂಹರಿಸಿ ಸದ್ಗುಣ ಸಂಪನ್ನರಾಗಿ ಜೀವನ ನಡೆಸಿ ಮುಕ್ತಾತ್ಮರಾಗುವುದೇ ನಿಜವಾದ ದೇವಿಯ ಪುರಾಣದ ಸಾರವಾಗಿದ್ದು, ಎಲ್ಲರು ಇದನ್ನರಿತು ನಡೆಯಬೇಕಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಸನಗೌಡ ಎಸ್ ಪಾಟೀಲ ಯಡಿಯಾಪೂರ, ವಾಯ್ ಬಿ ಕುಲಕರ್ಣಿ, ಡಾ.ವ್ಹಿ.ಕೆ.ಜಾಲಹಳ್ಳಿಮಠ, ಆರ್ ಜಿ ಗುಮಶೆಟ್ಟಿ ಅವರು ಮಾತನಾಡಿದರು.
ಒಂಭತ್ತು ದಿನಗಳ ಕಾಲ ದುರ್ಗಾದೇವಿಯ ಪುರಾಣವನ್ನು ಹೇಳಿದ ಕೊಮ್ಮನೂರಿನ ನಾಗಭೂಷಣ ಶಾಸ್ತಿçಗಳು ಪುರಾಣ ಮಹಾಮಂಗಲದ ಪ್ರಯುಕ್ತ ಜೀವನಮುಕ್ತಿಸಾರ ಸಂದೇಶವನ್ನು ಹೇಳಿದರು,
ರಾಜು ಬುಯ್ಯಾರ ಮತ್ತು ಸದ್ದೇಶಕುಮಾರ ಹೂಗಾರ ಅವರು ನಡೆಸಿಕೊಟ್ಟ ಸಂಗೀತ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಪಂಚರAಗ ಸಂಸ್ಥಾನ ಗದ್ದುಗೆಮಠದ ಶ್ರೀ ಮಡಿವಾಳೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು, ತಿಳಗೂಳ ಬ್ರಹ್ಮವಿದ್ಯಾಶ್ರಮದ ಮಹೇಶ್ವರಾನಂದಜೀ ಮಹಾಸ್ವಾಮಿಗಳು ಅಧ್ಯಕ್ಷತೆವಹಿಸಿದ್ದರು, ಶರಬಯ್ಯ ಗದ್ದುಗೆಮಠ, ಈರಯ್ಯ ಚಿಕ್ಕಮಠ, ಶಿವಾನಂದ ಬಸವರಾಜ ಶಿಲ್ಪಿ ಅವರು ನೇತೃತ್ವವಹಿಸಿದ್ದರು.
ಹಿರಿಯರಾದ ಬಸವರಾಜ ಚಿಕ್ಕಮಠ, ಎಸ್.ಬಿ.ಪಾಟೀಲ, ಸಂಗಮನಾಥ ದೇಸಾಯಿ, ಶ್ರೀಶೈಲ ವಿಶ್ವಕರ್ಮ, ವೀರೇಶ ಸರಗಣಾಚಾರಿ, ಜಹಾಂಗೀರಬಾಶಾ ಸಿರಸಗಿ, ಸಹಕಾರಿ ಇಲಾಖೆಯ ಕನಕರಾಜ ವಡ್ಡರ, ವಿಜಯಪುರದ ಸಂಗನಗೌಡ ಪಾಟೀಲ, ಉಪನ್ಯಾಸಕರಾದ ಜಗದೀಶ ಸಾತಿಹಾಳ, ಪ್ರಶಾಂತ ಸುಣಗಾರ ಸಿಂದಗಿ, ಪ್ರಭುಗೌಡ ಬಿರಾದಾರ ಅಸ್ಕಿ, ಶರಣಪ್ಪ ಮೋಪಗಾರ, ಪಿಕೆಪಿಎಸ್ ಅಧ್ಯಕ್ಷರಾದ ರುದ್ರಪ್ಪ ಗುಮಶೆಟ್ಟಿ, ಕುಮಾರ ದೇಸಾಯಿ, ಶಿವಪುತ್ರ ಸಾತಿಹಾಳ, ಕಂಠೀರವ ದೇಸಾಯಿ, ಪ್ರವೀಣ ಜಗಶೆಟ್ಟಿ, ಹಣಮಂತ ವಡ್ಡರ, ನಿತ್ಯಾನಂದ ಕತ್ತಿ, ಸುನೀಲಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.




















