
ಕಲಬುರಗಿ:ಮೇ.24: ರಾಜ್ಯದಲ್ಲಿರುವ ಯುವಜನತೆಗೆ ಕೌಶಲ್ಯ ತರಬೇತಿ ನೀಡಿ ಅವರಿಗೆ ಉದ್ಯೋಗ ಒದಗಿಸುವುದೇ ರಾಜ್ಯ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಕರ್ನಾಟಕ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
ಅವರು ಗದಗ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ, ಸರ್ಕಾರಿ ಐಟಿಐ ಕಾಲೇಜುಗಳಿಗೆ ಭೇಟಿ ನೀಡಿ, ಒಟ್ಟು 120 ಸರ್ಕಾರಿ ಐಟಿಐ ಕಾಲೇಜಿನಲ್ಲಿರುವ ಉಪಕರಣಗಳು ಸೇರಿದಂತೆ, ಕಟ್ಟಡಗಳನ್ನು ನಿರ್ಮಿಸಿ ಮೇಲ್ದರ್ಜೆಗೆ ಏರಿಸಲಾಗುವುದು. 1400 ಕೋಟಿ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ. ಕೆಜಿಡಿಟಿಐ ಅಭಿವೃದ್ಧಿಗೆ 1500 ಕೋಟಿ ಪ್ರಸ್ತಾವನೆಗೆ ಕಳುಹಿಸಲಾಗಿದೆ. ವಿಶೇಷವಾಗಿ ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ನೀಡುವ ಯುವನಿಧಿ ಗ್ಯಾರಂಟಿಯಲ್ಲಿ 287000 ಪದವಿ ಡಿಪೆÇ್ಲಮಾ ಮಾಡಿದವರು ನೋಂದಣಿಯಾಗಿದ್ದಾರೆ. 190000 ಜನರಿಗೆ ಯುವನಿಧಿ ಯೋಜನೆಯಡಿ ತಿಂಗಳಿಗೆ 3
ಸಾವಿರಗಳಂತೆ ನೀಡಲಾಗುತ್ತಿದೆ ಹಾಗೂ ನೋಂದಣಿಯಾದವರಿಗೆ ಹೆಚ್ಚುವರಿ ಉದ್ಯೋಗ ಕೌಶಲ್ಯವನ್ನು ನೀಡಲಾಗುತ್ತಿದೆ ಎಂದರು.
ಕೌಶಲ್ಯ ಅಭಿವೃದ್ಧಿ ಇಲಾಖೆಯಡಿ ಬರುವ ಐಟಿಐ ಕಾಲೇಜುಗಳು ಕೆಜಿಡಿಟಿಐ, ಸರ್ಕಾರಿ ಟೂರ್ ???ಂಡ್ ಟ್ರೇಡಿಂಗ್ ಸೇಂಟರ್ 33 ಇವೆ. ಈ ವರ್ಷ ಇನ್ನೂ 8 ಸೇರಿಸಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಅದರ ಜೊತೆಗೆ ಹೆಚ್ಚುವರಿ ಕೋರ್ಸ್
ನೀಡಲಾಗುತ್ತದೆ. ಯುವಕರಿಗೆ ಯಾವ ರೀತಿ ಉದ್ಯೋಗ ಕೊಡಿಸಬಹುದು ಎನ್ನುವುದರ ಕಡೆಗೆ ಸರ್ಕಾರ ಗಮನ ಹರಿಸಿದೆ. ಹಾಗಾಗಿ ಬೆಳಗಾವಿ, ಕಲಬುರಗಿ, ಗದಗ, ಸೇಡಂ, ಬೆಂಗಳೂರ ಸೇರಿದಂತೆ ರಾಜ್ಯದಲ್ಲಿ ಅನೇಕ ಉದ್ಯೋಗ ಮೇಳಗಳನ್ನು ಮಾಡಲಾಗಿದೆ ಎಂದರು.
ಯಾವುದೇ ಕಂಪನಿಗಳು ಮುಂದೆ ಬಂದು ತಮಗೆ ಬೇಕಾದ ಅಭ್ಯರ್ಥಿಗಳ ಸಂಖ್ಯೆ ಮತ್ತು ಅವರಿಗೆ ಇರಬೇಕಾದ ಕೌಶಲ್ಯವನ್ನು ತಿಳಿಸಿದರೆ, ಉದ್ಯೋಗವನ್ನು ಅರಸಿ ಬರುವವರಿಗೆ ತಗಲುವ ತರಬೇತಿ ವೆಚ್ಚವನ್ನು ಸರ್ಕಾರ ಇಂಡಸ್ಟ್ರೀಯಲ್ ಲಿಂಕೇಜ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಲಬುರಗಿ, ಕೊಪ್ಪಳ, ಮೈಸೂರಿನಲ್ಲಿ ಮಲ್ಟಿ ಸ್ಕಿಲ್ ತರಬೇತಿ ಆರಂಭಿಸಲಾಗುತ್ತದೆ. ಅದಕ್ಕೆ 120 ಕೋಟಿ ಅಂದಾಜು ಮಾಡಲಾಗಿದೆ ಎಂದರು. ಗದಗ ನಗರಕ್ಕೆ ಆಗಮಿಸಿದ ಸಚಿವರನ್ನು ಶೈಕ್ಷಣಿಕ ಭಗೀರಥ, ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ ಎಸ್ ಎಸ್ ಪಟ್ಟಣ್ ಶೆಟ್ಟರ್ ಡಾ. ತೋಂಟದ ಸಿದ್ದಲಿಂಗ ಮಹಾ ಸ್ವಾಮೀಜಿ ಅವರ ಕುರಿತು ರಚಿಸಲಾದ ಕಾರುಣ್ಯದ ಬೆಳಕು ಪುಸ್ತಕವನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕೊಟ್ರೇಶ್ ಮೆಣಸಿನಕಾಯಿ ಸೇರಿದಂತೆ ಪ್ರಮುಖರು ಹಾಜರಿದ್ದರು.