
ತಾಳಿಕೋಟಿ: ವಿದ್ಯಾರ್ಥಿಗಳು ತಾವು ಪಡೆದ ಜ್ಞಾನವನ್ನು ತಮ್ಮಲ್ಲೇ ಸೀಮಿತಗೊಳಿಸದೆ ನಾಲ್ಕು ಜನರಿಗೆ ಹಂಚುವ ಮೂಲಕ ಸಮಾಜದಲ್ಲಿ ಜ್ಞಾನದ ಬೆಳಕು ಮೂಡಿಸಿಕೊಳ್ಳುವದರೊಂದಿಗೆ ಉತ್ತಮ ಸಂಸ್ಕಾರ ಹಾಗೂ ಚಾರಿತ್ರ÷್ಯವನ್ನು ಮೈಗೂಡಿಸಿಕೊಂಡು ಸಮಾಜ ಕಟ್ಟುವ ಶಿಕ್ಷಕರಾಗಬೇಕು ಎಂದು ಗುಂಡಕನಾಳ ಹಿರೇಮಠದ ಷ.ಬ್ರ. ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಸ್ಥಳೀಯ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಗುರು-ಶಿಷ್ಯರ ನಡುವಿನ ಪವಿತ್ರ ಬಾಂಧವ್ಯ ಹಾಗೂ ಶಿಕ್ಷಣದ ಮಹತ್ವವನ್ನು ದೃಷ್ಟಾಂತಗಳ ಮೂಲಕ ವಿವರಿಸಿದರಲ್ಲದೇ ಗುರುವು ಮೂವರು ಶಿಷ್ಯರಿಗೆ ತಲಾ ಒಂದು ಬೊಗಸೆ ಭತ್ತ ನೀಡಿ, ವಿದ್ಯಾಭ್ಯಾಸ ಮುಗಿದ ನಂತರ ಅದನ್ನು ಮರಳಿ ತರುವಂತೆ ಸೂಚಿಸಿದ ದೃಷ್ಟಾಂತವನ್ನು ವಿವರಿಸಿದ ಶ್ರೀಗಳು, ಮೊದಲನೆಯ ಶಿಷ್ಯ ಭತ್ತವನ್ನು ಹಾಗೆಯೇ ಇಟ್ಟು ಹಾಳು ಮಾಡಿದ, ಎರಡನೆಯವನು ಜೋಪಾನವಾಗಿ ಕಾಯ್ದರೂ ಅದು ಹಳೆಯದಾಯಿತು. ಆದರೆ ಮೂರನೆಯ ಶಿಷ್ಯನು ಭತ್ತವನ್ನು ಹೊಲದಲ್ಲಿ ಬಿತ್ತಿ, ಬೆಳೆ ಬೆಳೆಸಿ ಹೊಸ ಭತ್ತವನ್ನು ಗುರುವಿಗೆ ತಂದುಕೊಟ್ಟನು. ಮೂರನೆಯ ಶಿಷ್ಯನಂತೆ ವಿದ್ಯಾರ್ಥಿಗಳು ತಮಗೆ ದೊರೆತ ವಿದ್ಯೆಯನ್ನು ಬೆಳೆಸಿ, ಸಮಾಜದ ಮೂಲೆ ಮೂಲೆಗೂ ಜ್ಞಾನದ ಬೆಳಕನ್ನು ಪಸರಿಸಬೇಕೆಂದು ತಿಳಿ ಹೇಳಿದರು.
ಶಿಕ್ಷಕ ವೃತ್ತಿಯ ಪವಿತ್ರತೆಯ ಭಗ್ಗೆ ವಿವರಿಸಿದ ಶ್ರೀಗಳು, ಇತರ ವೃತ್ತಿಗಳಲ್ಲಿ ವ್ಯಕ್ತಿಯ ನಿರ್ಲಕ್ಷ÷್ಯದಿಂದ ನಿರ್ದಿಷ್ಟ ಕ್ಷೇತ್ರಕ್ಕೆ ಹಾನಿಯಾಗಬಹುದು. ಆದರೆ ಶಿಕ್ಷಕರು ಕರ್ತವ್ಯದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಂಡರೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದೆಂದರು. ಖಾಸ್ಗತೇಶ್ವರ ಸಂಸ್ಥೆಯು ಬಡವರು ಹಾಗೂ ರೈತರ ವಂತಿಕೆಯಿAದ ನಿರ್ಮಾಣಗೊಂಡು ಬೆಳೆದು ಬಂದ ಪವಿತ್ರ ಸಂಸ್ಥೆಯಾಗಿದೆ. ಆಡಳಿತ ಮಂಡಳಿ ಹಾಗೂ ಗುರು-ವೃಂದದ ಪರಿಶ್ರಮದಿಂದ ಸಂಸ್ಥೆ ಹೆಮ್ಮರವಾಗಿ ಬೆಳೆದಿದ್ದು ಮುಂದಿನ ದಿನಗಳಲ್ಲಿ ಬಿಸಿಎ, ಎಂಸಿಎ, ಎಂ.ಬಿ.ಎ. ಸೇರಿದಂತೆ ಹೊಸ ಕೋರ್ಸ್ಗಳನ್ನು ಆರಂಭಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಿ ಎಂದು ಶ್ರೀಗಳು ಆಶೀರ್ವದಿಸಿದರು.
ಮುದ್ದೇಬಿಹಾಳ ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ. ದಮ್ಮೂರಮಠ ಅವರು ಮಾತನಾಡಿ ಭಾರತ ದೇಶವು ಜಗತ್ತಿಗೆ ಗುರುವಿನ ಸ್ಥಾನಮಾನ ಹಾಗೂ ಶ್ರೇಷ್ಠತೆಯನ್ನು ಪರಿಚಯಿಸಿದೆ. ಭಾರತೀಯ ಸಂಸ್ಕöÈತಿಯಲ್ಲಿ ಗುರುವಿಗೆ ಪವಿತ್ರ ಸ್ಥಾನ ನೀಡಲಾಗಿದೆ. ಬಿ.ಇಡಿ. ಪೂರ್ಣಗೊಳಿಸಿ ಹೊರಹೋಗುತ್ತಿರುವ ವಿದ್ಯಾರ್ಥಿಗಳ ಹೆಗಲ ಮೇಲೆ ಶ್ರೇಷ್ಠ ವ್ಯಕ್ತಿಗಳನ್ನು ರೂಪಿಸುವ ಗುರುತರ ಜವಾಬ್ದಾರಿ ಇದೆ ಎಂದು ಹೇಳಿದರಲ್ಲದೇ ಶಿಕ್ಷಕ ಕೇವಲ ವಿದ್ಯಾರ್ಥಿಗಳಿಗೆ ಓದು-ಬರಹ ಕಲಿಸುವುದಷ್ಟೇ ಅಲ್ಲ, ಅವರ ಜೀವನದ ಸರ್ವಾಂಗೀಣ ಪ್ರಗತಿಗೆ ಮಾರ್ಗದರ್ಶನ ನೀಡಬೇಕು. ಶಿಕ್ಷಣದ ಜೊತೆಗೆ ಉನ್ನತ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ವಿದ್ಯಾರ್ಥಿಗಳು ತಮ್ಮ ಪ್ರಯತ್ನವನ್ನು ಕೇವಲ ಒಂದು ಹುದ್ದೆ ಪಡೆಯುವುದಕ್ಕೆ ಸೀಮಿತಗೊಳಿಸದೆ ಜೀವನದಲ್ಲಿ ಶ್ರೇಷ್ಠ ಸಾಧನೆ ಮಾಡುವ ಗುರಿ ಹೊಂದಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಎಂ. ಬಂಟನೂರ ಅವರು ವಿದ್ಯಾರ್ಥಿಗಳೊಂದಿಗೆ ಕಳೆದ ಎರಡು ವರ್ಷಗಳ ಅನುಭವಗಳನ್ನು ಹಂಚಿಕೊAಡರು.
ಇದೇ ಸಮಯದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕಗಳನ್ನು ವಿತರಿಸಲಾಯಿತು. ನಂತರÀ ವಿದ್ಯಾರ್ಥಿಗಳ ದೀಪದಾನ ಪ್ರತಿಜ್ಞಾವಿಧಿ ಕಾರ್ಯಕ್ರಮ ನಡೆಯಿತು.
ಈ ಸಮಯದಲ್ಲಿ ಸಂಘದ ಸದಸ್ಯರಾದ ಬಿ.ಎನ್. ಹಿಪ್ಪರಗಿ, ಕಾಶಿನಾಥ ಎಸ್. ಮುರಾಳ, ಎಂ.ಆರ್. ಕತ್ತಿ, ಸಿ.ಆರ್. ಕತ್ತಿ, ಆರ್.ಎಂ. ಸಾಲಂಕಿ, ಬಿ.ಎಂ. ಗುರಡ್ಡಿ, ಎಸ್.ಎಸ್. ಸರೂರ, ಅಶೋಕ ಜಾಲವಾದಿ, ವಿ.ಬಿ. ಗಬಸಾವಳಗಿ, ವಿದ್ಯಾರ್ಥಿ ಒಕ್ಕೂಟದ ಪ್ರ.ಕಾ. ಶಿವರಾಜ ಉಪ್ಪಾರ, ಪಾರ್ವತಿ ಕಟ್ಟಿಮನಿ, ಯಮನಪ್ಪ ತಾಳಿಕೋಟಿ ಹಾಗೂ ಶ್ರೀಮತಿ ಮಧು ನಾಡಗೌಡ ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿ ಶಿವಲೀಲಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ವೈ.ಎಚ್. ಅಂಗಡಗೇರಿ ಸ್ವಾಗತಿಸಿದರು. ಸುರೇಶ ಬಡಿಗೇರ ಪರಿಚಯಿಸಿದರು. ಐಕ್ಯೂಎಸಿ ಸಂಯೋಜಕ ಯು.ಎನ್. ಮಂಗೊAಡ ನಿರೂಪಿಸಿ ವಂದಿಸಿದರು.
























