
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ. ೧೯: ವಿದ್ಯಾರ್ಥಿಗಳು ನಿರಂತರ ಅಧ್ಯಯನ ಅತ್ಯವಶ್ಯ. ಭವಿಷ್ಯ ಕಟ್ಟಿಕೊಳ್ಳಲು ನಿಮಗೆ ಇದೊಂದು ಸುವರ್ಣವಕಾಶ. ದೇಶದ ಇಪ್ಪತ್ತು ರಾಜ್ಯಗಳಲ್ಲಿ ಸುಮಾರು ೨೦೦ ಕೋಟಿ ರೂಪಾಯಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದ್ದು ಶ್ಲಾಘನೀಯ ಕಾರ್ಯ ಎಂದು ತರಬೇತಿ ಐಪಿಎಸ್ ಅಧಿಕಾರಿ ಇಸಿತಾ ಗುಪ್ತಾ ಅಭಿಪ್ರಾಯ ವ್ಯಕ್ತಪಡಿಸಿದರು
ಸೋಮವಾರ ವಿಜಯಪುರದ ನವಭಾಗ ಸರಕಾರಿ ಪ್ರಥಮ ದಜೆ೯ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿ
ಮಲಬಾರ್ ಗೋಲ್ಡ್ ನಿಂದ ೭ ಲಕ್ಷ ರೂಪಾಯಿ ೮೩ ವಿದ್ಯಾರ್ಥಿಗಳಿಗೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಈ ಹಣ ತುಂಬಾ ಉಪಯುಕ್ತವಾಗಿದ್ದು, ಅಧ್ಯಯನ ಮಾಡುವುದರ ಮೂಲಕ
ತಮ್ಮ ಶೈಕ್ಷಣಿಕ ಗುರಿ ತಲುಪಲು ಸಾಧ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಮಲಬಾರ್ ಗೋಲ್ಡ್ ನಿಂದ ಪಡೆಯುವ ವಿದ್ಯಾರ್ಥಿ ವೇತನ ತಮಗೆ ಪ್ರೇರಣೆ ನೀಡುತ್ತದೆ. ವಿದ್ಯಾರ್ಥಿಗಳು ಹಗಲಿರಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ವಿದ್ಯೆಯಿಂದ ಜೀವನ ಕಟ್ಟಿಕೊಳ್ಳಬೇಕು. ಶಿಕ್ಷಣ, ಆರೋಗ್ಯ, ಪರಿಸರ, ಬಡತನ ನಿರ್ಮೂಲನೆ ಮುಂತಾದ ಕಾರ್ಯಗಳಿಗೆ ಮಲಬಾರ್ ಗೋಲ್ಡ್ ಸಹಾಯ ನೀಡುತ್ತಿರುವದು ಪ್ರಶಂಸನೀಯ ಎಂದರು.
ವಿಶ್ವ ಮಕ್ಕಳ ಹಕ್ಕುಗಳ ರಾಯಬಾರಿ ಸದಸ್ಯೆ ಡಾ. ವನಿತಾ ತೊರವಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಸದುಪಯೋಗ ಪಡೆದುಕೊಳ್ಳಬೇಕು. ನಿಮ್ಮ ಹಣೆಬರಹ ತಾವೇ ಬದಲಾಯಿಕೊಳ್ಳಬೇಕು.
ಜ್ಞಾನ ನಿಮ್ಮ ಶಕ್ತಿಯಾಗಲಿ. ಮಲಬಾರ್ ಗೋಲ್ಡ್ ಅದೊಂದು ಉದ್ಯಮವಾಗಿ ಪರಿವತ೯ನೆಯಾಗಿದೆ. ದೇಶದಲ್ಲಿ ಮೂವತ್ತು ಸಾವಿರ ಜನರಿಗೆ ಉದ್ಯೋಗ ನೀಡಿದ್ದು ಸ್ಮರಣೀಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಲ್ಪನಾ ಶಾಬಾದಿ ಹಾಗೂ ಮಲಬಾರ್ ಗೋಲ್ಡ್ ಶಾಖಾ ಮುಖ್ಯಸ್ಥ ಎ.ಆರ್. ಅಬ್ದುಲ್ ಮಿರಾಜ ಶೇಖ ಮಾತನಾಡಿದರು.
ವಿಜಯಪುರ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಉಪ ಪ್ರಾಂಶುಪಾಲ ಚಿದಾನಂದ ಆನೂರ ವಹಿಸಿದ್ದರು.
ವಿಜಯಪುರ ಸರಕಾರಿ ಪ್ರಥಮ ದಜೆ೯ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿ ಪ್ರಾಥಿ೯ಸಿದರು.
ಹೈದರ ಕೆ. ಪ್ರಾಸ್ತಾವಿಕ ಮಾತನಾಡಿದರು.
ಪಾಜಿಲ್ ನಿರೂಪಿಸಿದರು.
ಪ್ರೊ. ಪಿ. ಬಿರಾದಾರ. ಪ್ರೊ. ಸುನೀಲ ನಡಕಟ್ಟಿ. ಡಾ. ಅನಂತಪದ್ಮನಾಭ ಸರವಂದಿ, ಪ್ರೊ. ಉಮೇಶ ಹಿರೇಮಠ,
ಪ್ರೊ. ಸಂಗಮೇಶ ಗುರವ, ಪ್ರೊ. ಸುನೀಲ ಹತ್ತಿ, ಡಾ. ಸುರೇಶ ಬಿರಾದಾರ, ಬಸವರಾಜ ಪೋಲೆಸಿ, ಪಿಂಟು ಚವ್ವಾಣ, ರಿಯಾಜ, ಡಾ. ಎಚ್. ಕುಮಾರಸ್ವಾಮಿ, ಐಶ್ವರ್ಯ ಸಿಗಣಾಪೂರ, ಶಮೀನಾ ಜಮಾದಾರ ಉಪಸ್ಥಿತರಿದ್ದರು.






















