ಎಸ್.ಆರ್.ಎನ್.ಮೆಹತಾ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಗೆ ಆಯ್ಕೆ

ಕಲಬುರಗಿ,ಜ.22-ಇದೇ ತಿಂಗಳು 17 ಮತ್ತು 18 ರಂದು ಬೆಂಗಳೂರಿನ ಕೋರಮಂಗಳ ಒಳಾಂಗಣದಲ್ಲಿ ಅಖಿಲ ಕರ್ನಾಟಕ ಸ್ಪೋಟ್ರ್ಸ ಕರಾಟೆ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ 17ನೇ ರಾಜ್ಯ
ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ನಗರದ ಎಸ್. ಆರ್. ಎನ್. ಮೆಹತಾ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕುಮಾರ ಅಮರ ಭೈರಾಮಡಗಿ-10 ವರ್ಷದ ವಯೋಮತಿಯಲ್ಲಿ-ಕಟಾ ಸ್ಪರ್ಧೆ-ಪ್ರಥಮ ಸ್ಥಾನ, ಕುಮಾರಿ ವೃತಿಕಾ ಗಚ್ಚಿ-ಏಳು ವರ್ಷದ ವಯೋಮತಿಯಲ್ಲಿ-ಕುಮತೆ ಸ್ಪರ್ಧೆ-ಪ್ರಥಮ ಸ್ಥಾನ, ಕುಮಾರಿ ಶ್ವೇತಾ ತಾಂಡುರಕರ -14 ರಿಂದ 15 ವರ್ಷದ-ಕುಮತೆ ಸ್ಪರ್ಧೆ -48 ಕೆ.ಜಿ -ಪ್ರಥಮ ಸ್ಥಾನ, ಕುಮಾರ ವೇದಾಂತ ಚಿಂಚೋಳಿ -14 ರಿಂದ 15 ವರ್ಷದ-ಕುಮತೆ ಸ್ಪರ್ಧೆ-52 ಕೆ.ಜಿ ದ್ವಿತಿಯ ಸ್ಥಾನ, ಕುಮಾರ ನೇಹಾಲ ತಂದೆ ಪರಮೇಶ್ವರ-14 ರಿಂದ 15 ವರ್ಷದ-ಕಟಾ ಸ್ಪರ್ಧೆ-ತೃತಿಯ ಸ್ಥಾನ, ಕುಮಾರ ವಿಕ್ರಾಂತ ಹೂಗಾರ- ಏಳು ವರ್ಷದ ವಯೋಮತಿಯಲ್ಲಿ-ಕುಮತೆ ಸ್ಪರ್ಧೆ-ತೃತಿಯ ಸ್ಥಾನ, ಕುಮಾರಿ ಏಸ್ತರ ರಾಣಿ -12 ವರ್ಷದ ವಯೋಮತಿಯಲ್ಲಿ ಕುಮತೆ ಸ್ಪರ್ಧೆ-35 ಕೆ.ಜಿ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯ ಟ್ರಸ್ಟಿಗಳಾದ ಚಕೋರ ಮೆಹತಾ, ಪ್ರಾಚಾರ್ಯರಾದ ಪ್ರೀತಿ ಮೆಹತಾ, ದೈಹಿಕ ಶಿಕ್ಷಣದ ವಿಭಾಗ ಮುಖ್ಯಸ್ಥರಾದ ಬಸವರಾಜ ತಳಕೇರಿ, ಕರಾಟೆ ತರೆಬೆತಿದಾರರಾದ ಕೃಷ್ಣಾ ಗೌಳಿ, ಮಣಿಕಂಠ ಜುಮ್ಮಣ್ಣಾ ಹಾಗೂ ಶಿಕ್ಷಕ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.