
ಬೀದರ:ಫೆ.12: ನಗರದ ಪ್ರತಿಷ್ಠಿತ ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಬಿ.ಕಾಂ.6ನೇ ಸೆಮಿಸ್ಟರಿನ ಕಾರ್ತಿಕ ರಾಠೋಡ್ ತಂದೆ ಸಂಜೀವಕುಮಾರ ಹಾಗೂ ಬಿ.ಎ.6ನೇ ಸೆಮಿಸ್ಟರಿನ ವಿಷ್ಣು ತಂದೆ ತುಕಾರಾಮ ಇವರಿಬ್ಬರೂ ಕೇಂದ್ರ ಸರ್ಕಾರದ ಸಿ.ಐ.ಎಸ್.ಎಫ್ ಹುದ್ದೆಗಳು ಗಿಟ್ಟಿಸಿರುತ್ತಾರೆ. ಈ ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚುಗೆ ವ್ಯಕ್ತಿಪಡಿಸಿದ ಗೌರವಾನ್ವಿತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸದಸ್ಯರು ಹಾಗೂ ಬಿ.ವಿ.ಬಿ. ಶಾಲಾ ಕಾಲೇಜು ಆವರಣದ ಸಂಚಾಲಕರಾದ ಡಾ. ರಜನೀಶ್ ಎಸ್. ವಾಲಿ ಅವರು, ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ದೀಪಾ ರಾಗ ಅವರು, ಮಹಾವಿದ್ಯಾಲಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿ ಹರ್ಷ ವ್ಯಕ್ತಪಡಿಸಿದ್ದಾರೆ.



























