
ಕಲಬುರಗಿ:ಲಿಂಗೈಕ್ಯವಿದ್ಯಾಭಂಡಾರಿಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ಪುಣ್ಯಸ್ಮರಣೋತ್ಸವವನ್ನು ಸ್ಮರಿಸಲು ಆಯೋಜಿಸಲಾದ ತಿಂಗಳ ಕಾಲದ ಕಾರ್ಯಕ್ರಮಗಳ ಅಂಗವಾಗಿ, ಆಪ್ಪಾ ಪಬ್ಲಿಕ್ ಶಾಲೆಯಲ್ಲಿ ಬಾಲವಾಟಿಕೆಯಿಂದ 5ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗಾಗಿ ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಎಲ್‍ಕೆಜಿ ಯಿಂದ (ಏiಟಿಜeಡಿgಚಿಡಿಣeಟಿ) 5ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಪ್ರದರ್ಶನವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಪ್ರದರ್ಶನವು ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಪ್ರದರ್ಶಕ ಕಲಿಕೆಯ ಪ್ರತಿರೂಪವಾಗಿತ್ತು.
ಈ ಪ್ರದರ್ಶನವನ್ನು ಪೂಜ್ಯ ದೊಡ್ಡಪ್ಪಾಜಿ ಎಸ. ಅಪ್ಪಾ (9ನೆಯ ಪೀಠಾಧಿಪತಿ, ಶರಣಬಸವೇಶ್ವರ ಸಂಸ್ಥಾನ, ಕಲಬುರಗಿ), ಡಾ. ಅಲ್ಲಮಪ್ರಭು ದೇಶಮುಖ್ (ಆಡಳಿತಾಧಿಕಾರಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕಲಬುರಗಿ) ಶಾಲೆಯ ಪ್ರಾಂಶುಪಾಲರು ಶ್ರೀ ಶಂಕರಗೌಡ ಹೊಸಮನಿ ಮತ್ತು ಉಪಪ್ರಾಂಶುಪಾಲರಾದ ಶ್ರೀ ವಿಜು ಕಲ್ಲಾರ ಜೋಸ್ ಅವರ ಉಪಸ್ಥಿತಿಯಲ್ಲಿ ಜ್ಯೋತಿ ಪ್ರಜ್ವಲಿಸಿ ಪ್ರದರ್ಶನಕ್ಕೆ ಚಾಲನೆ ನೀಡಿದರು.
ತರಗತಿಗಳ ವಿದ್ಯಾರ್ಥಿಗಳು ಸಿದ್ಧಪಡಿಸಿದ ವ್ಯಾಪಕ ಶ್ರೇಣಿಯ ಮಾಹಿತಿ ಮತ್ತು ಸೃಜನಶೀಲ ಮಾದರಿಗಳನ್ನು ಪ್ರದರ್ಶಿಸಲಾಯಿತು. ಪ್ರಾಥಮಿಕ ಪೂರ್ವ ಮತ್ತು ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳು ತಮ್ಮ ಪ್ರದರ್ಶನಗಳು ಮತ್ತು ಪ್ರಸ್ತುತಿಗಳ ಮೂಲಕ ಶೈಕ್ಷಣಿಕ ಪರಿಕಲ್ಪನೆಗಳ ಜ್ಞಾನವನ್ನು ಪ್ರದರ್ಶಿಸುವುದರ ಜೊತೆಗೆ ಸೃಜನಶೀಲತೆ, ಆತ್ಮವಿಶ್ವಾಸ ಮತ್ತು ತಂಡದ ಕೆಲಸವನ್ನು (ಣeಚಿmತಿoಡಿಞ) ಪ್ರದರ್ಶಿಸಿದರು.ಈ ದಿಸೆಯಲ್ಲಿವಿದ್ಯಾರ್ಥಿಗಳು ಪಠ್ಯಪುಸ್ತಕದಿಂದಾಚೆಯ ತಮ್ಮ ಆಲೋಚನೆಗಳನ್ನು ಅನ್ವೇಷಿಸಿ ತಮ್ಮದೆಯಾದ ಶೈಲಿಯಲ್ಲಿ ಪ್ರದರ್ಶಿಸಿದ್ದುನೋಡುಗರ ಮೆಚ್ಚುಗೆಗೆ ಪಾತ್ರರಾದರು.
ಪ್ರಾಥಮಿಕ ಪೂರ್ವ (ಕೆಜಿ) ವಿದ್ಯಾರ್ಥಿಗಳು ಅಕ್ಷರ ಮಾಲೆ, ದೈನಂದಿನ ಸಹಾಯಗಾರರು, ಆರೋಗ್ಯಕರ ಆಹಾರ, ಸಾಂಪ್ರದಾಯಕ ಹಬ್ಬಗಳು, ಪ್ರಮುಖ ಋತುಗಳಲ್ಲಿ (ಬೇಸಿಗೆ ಕಾಲ, ಮಳೆಗಾಲ, ಚಳಿಗಾಲ) ಬದಲಾಗುವ ಉಡುಪು, ಆಹಾರ ಮತ್ತು ಇತರ ಜೀವನಶೈಲಿಗಳನ್ನು ತುಂಬಾ ಆಕರ್ಷಕವಾಗಿ ಪ್ರದರ್ಶಿಸಿ, ಬಂದಂತಹ ಪ್ರೇಕ್ಷರ ಮನಸಳೆದರು. ಹಿರಿಯ ಪಾರ್ಥಮಿಕ ವಿದ್ಯಾರ್ಥಿಗಳು ಕೊಡ ತಮ್ಮ ಎಲ್ಲಾವಿಷಯವಾರು ಪಠ್ಯಪುಸ್ತಕಗಳಲ್ಲಿ ಅಧ್ಯಯನ ಮಾಡಿದ ಪರಿಕಲ್ಪನೆಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿ ವಿವರಣೆ ನೀಡುವುದು ವಿಶೇಷವಾಗಿತ್ತು. ಒಟ್ಟಿನಲ್ಲಿ ಸುಮಾರು 1000 ವಿಧ್ಯರ್ಥಿಗಳು ಈ ಪ್ರದರ್ಶನದಲ್ಲಿ ಪಾಲ್ಗೊಂಡು ಪ್ರದರ್ಶನಕ್ಕೆ ಮೆರಗು ತಂದುಕೊಟ್ಟರು. ಇವರಲ್ಲಿ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರುಕೊಡ ತಮ್ಮ ನಾಲ್ಕನೆಯ ತರಗತಿಯಸಹಪಾಠಿಗಲರೊಂದಿಗೆ: ಶೌರ್ಯಾ ದೇವರಗುಡಿ &ಆರಾವ್ ಪಟೀಲ್, ಭಾಗವಹಿಸಿ ಭಾರತದ ಭೂಆಕೃತಿಗಳ ವಿವರಣೆ, ಸುಂದರ ಭೌಗೋಳಿಕ ವೈಶಿಷ್ಟ್ಯಗಳ ಚಿತ್ರವನ್ನು ಉಲ್ಲೇಖಿಸಿ ವಿವರಿಸಿದ್ದು, ಈ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿತ್ತು.
ಡಾ. ದಾಕ್ಷಾಯಿಣಿ ಎಸ್. ಅಪ್ಪಾ (ಅಧ್ಯಕ್ಷರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕುಲಪತಿ, ಶರಣಬಸವವಿಶ್ವವಿದ್ಯಾಲಯ, ಕಲಬುರಗಿ) ಇವರು ವಿದ್ಯಾರ್ಥಿಗಳ ಉತ್ಸಾಹಭರಿತ ಭಾಗವಹಿಸುವಿಕೆಯನ್ನು ಹಾಗೂ ಪೆÇೀಷಕರು ತಮ್ಮ ಮಕ್ಕಳ ಕಲಿಕೆಯಲ್ಲಿ ಭಾಗಿಯಾಗುವುದರ ಮೂಲಕ ಸಹಕರಿಸಿದ ಪ್ರಯತ್ನಗಳನ್ನು ಮೆಚ್ಚಿ, ಎಲ್ಲರಿಗೂ ಆಶೀರ್ವಾದ ನೀಡಿದರು”.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ್ ಅವರು ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಅಭಿನಂದನೆ ಸಲ್ಲಿಸಿ, ಅನುಭವಾಧಾರಿತ ಕಲಿಕೆಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ ಶಾಲೆಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.”
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಡಾ. ಅಲ್ಲಮಪ್ರಭು ದೇಶಮುಖ್ ಅವರು ಪ್ರದರ್ಶನಗಳನ್ನು ವೀಕ್ಷಿಸಿ, ವಿದ್ಯಾರ್ಥಿಗಳು ತಮ್ಮ ಯೋಜನೆಗಳನ್ನು ಸಂದರ್ಶಕರಿಗೆ ವಿವರಿಸುವಲ್ಲಿ ತೋರಿದ ಉತ್ಸಾಹವನ್ನು ಮೆಚ್ಚಿ ಸಂತೋಷ ವ್ಯಕ್ತಪಡಿಸಿದರು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದರ ಜೊತೆಗೆ ಸೃಜನಶೀಲತೆಯನ್ನು ಉತ್ತೇಜಿಸುತ್ತವೆ ಎಂದು ಹೇಳಿದರು.






























