
ಕಲಬುರಗಿ:ಪದವಿ ಪೂರ್ವ ಶಿಕ್ಷಣ ಇಲಾಖೆಯವರು ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ದೊಡ್ಡಪ್ಪ ಅಪ್ಪ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿಧ್ಯಾರ್ಥಿಗಳಾದ ಖೋಖೋ ಸ್ಪರ್ಧೆಯಲ್ಲಿ ಕುಮಾರಿ ಸಿಂಧೂ, ಕುಮಾರಿ ಸರಸ್ವತಿ, ಹಾಗೂ ಕುಮಾರಿ ಪ್ರತೀಭಾ ಮತ್ತು 400ಮೀ ಓಟದಲ್ಲಿ ವೈಷ್ಣವಿ ಪ್ರಥಮ ಸ್ಥಾನ ಪಡೆದು, 200ಮೀ ಓಟದಲ್ಲಿ ವೈಷ್ಣವಿ ದ್ವಿತೀಯ ಸ್ಥಾನ ಪಡೆದು, ತ್ರೀವಿದಾ ಜಿಗಿತದಲ್ಲಿ ಕುಸುಮ ದ್ವಿತೀಯ ಸ್ಥಾನ ಪಡೆದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳಿಗೂ ಶರಣಬಸವೇಶ್ವರ ಸಂಸ್ಥಾನದ ಅದ್ಯಕ್ಷರಾದ ಡಾ|| ದಾಕ್ಷಾಯಣಿ ಅವ್ವಾಜಿಯವರು ಹಾಗೂ ಕಾರ್ಯದರ್ಶಿಗಳಾದ ಶ್ರೀ. ಬಸವರಾಜ ದೇಶಮುಖ ಅಣ್ಣಾಜಿಯವರು ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಾಲೇಜಿನ ನಿರ್ದೇಶಕರು, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.


















